Top

10 ಸರಕಾರಿ ಹುದ್ದೆಗಳಿಗೆ ಸಾರ್ವಜನಿಕ, ಖಾಸಗಿ ವ್ಯಕ್ತಿಗಳಿಗೆ ಕೇಂದ್ರ ಆಹ್ವಾನ

10 ಸರಕಾರಿ ಹುದ್ದೆಗಳಿಗೆ ಸಾರ್ವಜನಿಕ, ಖಾಸಗಿ ವ್ಯಕ್ತಿಗಳಿಗೆ ಕೇಂದ್ರ ಆಹ್ವಾನ
X

ಜಂಟಿ ಕಾರ್ಯದರ್ಶಿ ಹಂತದ ಕೇಂದ್ರ ಸರಕಾರದ 10 ಹುದ್ದೆಗಳಿಗೆ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ನೌಕರರಿಗೆ ನೇರ ನೇಮಕಕ್ಕೆ ಅವಕಾಶ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

[story-lines]

ನಿಯಮದ ಪ್ರಕಾರ ಜುಲೈ 1ರಂದು ಜನ್ಮ ದಿನಾಂಕ ಅನ್ವಯ ಅರ್ಜಿ ಸಲ್ಲಿಸುವವರು 40 ವರ್ಷ ಮೇಲಿನವರಾಗಿರಬೇಕು. ಅಲ್ಲದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು. ಹೆಚ್ಚಿನ ವಿದ್ಯಾಭ್ಯಾಸ ಆಗಿದ್ದರೆ ಆಯ್ಕೆಗೆ ಪರಿಗಣಿಸಲಾಗುತ್ತದೆ.

ಆಯ್ಕೆಯಾದವರು 3 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸರಕಾರದ ಮಟ್ಟದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗುತ್ತಿಗೆ ಅವಧಿಯನ್ನು ಗರಿಷ್ಠ 5 ವರ್ಷಗಳಿಗೆ ವಿಸ್ತರಿಸಬಹುದು.

ಹೆಚ್ಚು ಅನುಭವ ಹಾಗೂ ಪ್ರತಿಭೆ ಆಧಾರದ ಮೇಲೆ ನೇಮಕ ನಡೆಯಲಿದ್ದು, ವೇತನ ಕನಿಷ್ಠ 1.44 ಲಕ್ಷದಿಂದ 2.18 ಲಕ್ಷ ರೂ. ಇರಲಿದೆ. ಅಲ್ಲದೇ ಕೇಂದ್ರ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯಲಿದೆ.

Next Story

RELATED STORIES