Top

ಇನ್ನೋವಾ ಕಾರು-ಬೈಕ್‌ ನಡುವೆ ಡಿಕ್ಕಿ : ಮಹಿಳೆ ಸ್ಥಳದಲ್ಲಿಯೇ ಸಾವು

ಇನ್ನೋವಾ ಕಾರು-ಬೈಕ್‌ ನಡುವೆ ಡಿಕ್ಕಿ : ಮಹಿಳೆ ಸ್ಥಳದಲ್ಲಿಯೇ ಸಾವು
X

ಮೈಸೂರು : ಇಂದು ಬೆಳಿಗ್ಗೆ ಸಂಭವಿಸಿದ ಇನೋವಾ ಕಾರು ಬೈಕ್ ನಡುವೆ ಡಿಕ್ಕಿಯಲ್ಲಿ ಮಹಿಳೆಯೋರ್ವರು ಮೃತಪಟ್ಟು, ಬೈಕ್‌ ಸವಾರ ಗಾಯಗೊಂಡಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ನಡೆದಿದೆ.

ಊಟಿಯ ಕಡೆಯಿಂದ ಬರುತ್ತಿದ ಇನ್ನೋವಾ ಕಾರು, ಬೈಕ್‌ಗೆ ಡಿಕ್ಕೆಯಾದ ಪರಿಣಾಮ, ಬೈಕ್‌ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯ ನಂತ್ರ ಅತಿವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ ಸ್ಥಳೀಯರು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಮೈಸೂರು-ಊಟಿ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥವಾಯಿತು.

ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಮೈಸೂರು ಗ್ರಾಮಾಂತರ ಠಾಣೆಯ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಇದೀಗ ಮೃತ ಮಹಿಳೆಯ ಶವವನ್ನು ಕೆ ಆರ್‌ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES