Top

ಸಂಪುಟ ಸಂಕಟ: ಸಿದ್ದರಾಮಯ್ಯ ಕೊನೆಗೂ ಹೇಳಿದ್ದೇನು?

ಸಂಪುಟ ಸಂಕಟ: ಸಿದ್ದರಾಮಯ್ಯ ಕೊನೆಗೂ ಹೇಳಿದ್ದೇನು?
X

ಸಮ್ಮಿಶ್ರ ಸರಕಾರ ರಚನೆ ಆದಾಗಿನಿಂದ ಭುಗಿಲೆದ್ದ ಭಿನ್ನಮತದ ಕುರಿತು ಮೌನಕ್ಕೆ ಶರಣಾಗಿದ್ದಾರೆ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆಯ ಜಿಲ್ಲೆಯ ನೀಲಗುಂದದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಭಿನ್ನಮತ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಭಿನ್ನಮತ ಶಾಸಕರೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇನೆ. ದಿನಕ್ಕೆ ಮೂರು ಬಾರಿ ಪೋನ ಮೂಲಕ ಮಾತನಾಡಿದ್ದೇನೆ ಎಂದರು.

ಭಿನ್ನಮತ ಶಾಸಕರನ್ನು ಸಮಾಧಾನಪಡಿಸಿದ್ದೇನೆ. ಈಗ ಯಾವುದೇ ಅತೃಪ್ತಿ ಇಲ್ಲ. ಈಗಿನ ಮಂತ್ರಿಗಳಿಗೆ ಎರಡು ವಷ೯ ಅವಧಿ ನೀಡಿ ಮಾತನಾಡಿದ್ದೇವೆ. ಮುಂದಿನ ಅವಧಿಗೆ ಉಳಿದವರಿಗೆ ಮಂತ್ರಿ ಸ್ಥಾನ ನೀಡುವಾಗಿ ಹೇಳಿದ್ದೇವೆ. ದೆಹಲಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ. ಹಾಗಾಗಿ ನಾನು ಹೋಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಎಂ.ಬಿ.ಪಾಟೀಲ್ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾವುದೇ ಡಿಸಿಎಂ ಸ್ಥಾನ ಇನ್ನು ಸೃಷ್ಢಿಯಾಗೋದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅಂತಿಮ ನಿಧಾ೯ರ ತೆಗೆದುಕೊಳ್ಳಲಿದ್ದಾರೆ. ಇದರಲ್ಲಿ ನಾನು ಯಾರಿಗೂ ಬೆಂಬಲ ನೀಡುವುದಿಲ್ಲ. ರಾಹುಲ್ ಗಾಂಧಿ ಕರೆದು ಕೇಳಿದರೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ಅಷ್ಟೇ ಎಂದು ಸಿದ್ದರಾಮಯ್ಯ ವಿವರಿಸಿದರು.

Next Story

RELATED STORIES