Top

ಬಾಂಗ್ಲಾ ಏಷ್ಯಾ ಚಾಂಪಿಯನ್: ಕೊನೆ ಎಸೆತದಲ್ಲಿ ಸೋತ ಭಾರತ ವನಿತೆಯರು

ಬಾಂಗ್ಲಾ ಏಷ್ಯಾ ಚಾಂಪಿಯನ್: ಕೊನೆ ಎಸೆತದಲ್ಲಿ ಸೋತ ಭಾರತ ವನಿತೆಯರು
X

[story-lines]

ಪಂದ್ಯದ ಕೊನೆಯ ಎಸೆತದಲ್ಲಿ ಅಗತ್ಯವಿದ್ದ ಎರಡು ರನ್ ಕದಿಯುವ ಮೂಲಕ ಬಾಂಗ್ಲಾದೇಶ ವನಿತೆಯರು ಮೊದಲ ಬಾರಿ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ 6 ಬಾರಿಯ ಚಾಂಪಿಯನ್​ ಭಾರತದ ವನಿತೆಯರು ಕೊನೆಯ ಹಂತದಲ್ಲಿ ಎಡವಿ ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಭಾನುವಾರ ನಡೆದ ಫೈನಲ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 9 ವಿಕೆಟ್​ಗೆ 112 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಬಾಂಗ್ಲಾ ತಂಡ ಅಂತಿಮ ಎಸೆತದಲ್ಲಿ 7 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಬಾಂಗ್ಲಾ ಅಂತಿಮ ಓವರ್​ನಲ್ಲಿ 9 ರನ್ ಗಳಿಸಬೇಕಿತ್ತು. ಗಾಯಗೊಂಡ ದೀಪ್ತಿ ಶರ್ಮ ಬದಲು ಕೊನೆಯ ಓವರ್​ನ 3 ಎಸೆತ ಎಸೆದ ಹರ್ಮನ್​ಪ್ರೀತ್ ಕೌರ್ 2 ವಿಕೆಟ್ ಪಡೆದರಾದರೂ ಅಂತಿಮ ಎಸೆತದಲ್ಲಿ ಅಗತ್ಯವಿದ್ದ 2 ರನ್​ ಬಿಟ್ಟುಕೊಟ್ಟರು.

Next Story

RELATED STORIES