Top

ಏರ್‌ಇಂಡಿಯಾ ಬಳಿ ಸಿಬ್ಬಂದಿಗಳಿಗೆ ವೇತನ ಕೊಡೋಕೆ ದುಡ್ಡಿಲ್ಲ.!!

ಏರ್‌ಇಂಡಿಯಾ ಬಳಿ ಸಿಬ್ಬಂದಿಗಳಿಗೆ ವೇತನ ಕೊಡೋಕೆ ದುಡ್ಡಿಲ್ಲ.!!
X

ನವದೆಹಲಿ : ಸರ್ಕಾರಿ ಒಡೆತನದ ಏರ್‌ಇಂಡಿಯಾ ಇದೀಗ ನಷ್ಟದಲ್ಲಿ ಮುನ್ನಡೆಯುತ್ತಿದೆಯಂತೆ. ಹೀಗಾಗಿ ಸಂಸ್ಥೆಯಲ್ಲಿ ಕೆಲಸ ಮಾಡೋ ಸಿಬ್ಬಂದಿಗೆ ಸಂಬಳ ಕೊಡೋಕು ತನ್ನ ಬಳಿ ದುಡ್ಡಿಲ್ವಂತೆ.

ಇದೇನು ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾದ ಸ್ಥಿತಿ ಹೀಗಾ ಅಂತ ಯೋಚಿಸ್ಬೇಡಿ. ಎಸ್ ಇದು ಏರ್‌ಇಂಡಿಯಾದ ಸದ್ಯದ ಪರಿಸ್ಥಿತಿ. ಕಳೆದ ಮೇ ತಿಂಗಳಿನಿಂದ ಇಲ್ಲಿಯ ತನಕ ತನ್ನ ಸಿಬ್ಬಂದಿಗೆ ವೇತನ ನೀಡಿಲ್ಲ. ಈ ಕುರಿತು ಸಂಸ್ಥೆಯ ಮುಖ್ಯಸ್ಥರನ್ನು ಸಿಬ್ಬಂದಿಗಳು ಕೇಳಿದ್ರೇ, ಜೂನ್‌ 15ರ ವರೆಗೆ ಕಾಯಿರಿ ಎಂದು ತಿಳಿಸಿದೆಯಂತೆ.

[story-lines]

ಇನ್ನೂ ಮೇ ತಿಂಗಳ ಸಂಬಳ ಜೂನ್‌15ರ ರಂದು ಆದ್ರೂ ಸಿಗಬಹುದು ಎಂಬ ನಿರೀಕ್ಷೇಯಲ್ಲಿ ಇದ್ದ ನೌಕರರಿಗೆ ಸಂಸ್ಥೆಯ ಕಷ್ಟದ ಹಣಕಾಸಿ ಸಂಕಷ್ಟ ಹೊರಬಿದ್ದಿದೆ. ಏರ್‌ಇಂಡಿಯಾ ಸಂಸ್ಥೆ ಸಂಕಷ್ಟದಲ್ಲಿದ್ದೂ, ಸಿಬ್ಬಂದಿಗಳಿಗೆ ವೇತನ ಕೊಡೋಕಾದರೂ ಸಾಲ ಕೊಡಿ ಅಂತ, ಒಂದು ಸಾವಿರ ಕೋಟಿಗಾಗಿ ಅರ್ಜಿ ಸಲ್ಲಿಸಿದೆಯಂತೆ. ಈ ಅರ್ಜಿಗೆ ಒಗೊಟ್ಟು, ಸಾಲ ದೊರೆತರೇ ಮಾತ್ರ, ಸಂಸ್ಥೆಯಲ್ಲಿನ ನೌಕರರಿಗೆ ಸಂಬಳ ಕೊಡೋಕೆ ಸಾಧ್ಯ ಅಂತ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ನಡುವೆ ಏರ್‌ಇಡಿಯಾದ ಶೇ.76ರಷ್ಟು ಷೇರು ಮಾರಾಟ ಮಾಡಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಈ ಹಿನ್ನಲೆಯಲ್ಲೂ ಏರ್‌ಇಂಡಿಯಾ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ಪ್ರಯಾಣಿಕರನ್ನು ಆಕರ್ಷಿಸಲು ಸರ್ಕಾರ ರೂಪಿಸಿದ ಹಲವು ಟ್ರಾವೆಲಿಂಗ್ ಪ್ಯಾಕೇಜ್‌ಗಳೂ ಕೂಡ ಕೈಕೊಟ್ಟ ಕಾರಣದಿಂದಾಗಿ, ದಿನೇ ದಿನೇ ಆರ್ಥಿಕ ಸಂಕಷ್ಟದ ಹೊರೆಯನ್ನು ಎದುರಿಸುತ್ತಿದೆ.

ಅದೇನೇ ಆದ್ರೂ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿರುವ ಏರ್‌ಇಂಡಿಯಾ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿ ಮುನ್ನೆಡೆಯುತ್ತಿದೆ. ಈ ಸಂಕಷ್ಟ ಸಿಬ್ಬಂದಿಗಳಿಗೆ ವೇತನ ಕೊಡೋಕು ಕಷ್ಟದ ಮಟ್ಟಕ್ಕೆ ತಲುಪಿದೆ. ಒಂದು ವೇಳೆ ಸಂಸ್ಥೆ ತಿಳಿಸಿದಂತೆ ಜೂನ್‌ 15ರಂದು ವೇತನ ಕೊಡದೇ ಹೋದ್ರೆ, ಸಿಬ್ಬಂದಿಗಳ ಮುಷ್ಕರದ ಬಿಸಿ ತಟ್ಟೋದಂತು ಗ್ಯಾರಂಟಿ.

Next Story

RELATED STORIES