ದಾಖಲೆಯ 11ನೇ ಬಾರಿ ಫ್ರೆಂಚ್ ಓಪನ್ಗೆ ಮುತ್ತಿಟ್ಟ ಸ್ಪೇನ್ ಗೂಳಿ

ವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್ನ ರಾಫೆಲ್ ನಡಾಲ್ ದಾಖಲೆಯ 11ನೇ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ ಕೋರ್ಟ್ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ಸ್ನಲ್ಲಿ ನಡಾಲ್ 6-4, 6-4, 6-2 ನೇರ ಸೆಟ್ಗಳಿಂದ ಆಸ್ಟ್ರೀಯಾದ ಡೊಮಿನಿಕ್ ಥೀಮ್ ಅವರನ್ನು ಸೋಲಿಸಿ ಆವೆ ಅಂಕಣದಲ್ಲಿ ತಮಗೆ ಸರಿಸಾರಿ ಯಾರೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇದರೊಂದಿಗೆ ಡೊಮಿನಿಕ್ ಅವರ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಕನಸು ಭಗ್ನಗೊಂಡಿತು.
ಯಾವುದೇ ಒಂದು ಗ್ರ್ಯಾನ್ಸ್ಲಾಮ್ನಲ್ಲಿ ಯಾವುದೇ ಆಟಗಾರ ಇಷ್ಟು ಸಂಖ್ಯೆಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ರಾಫೆಲ್ ನಡಾಲ್ ಅದ್ಭುತ ರೀತಿಯಲ್ಲಿ ತಮ್ಮ ನೆಚ್ಚಿನ ಅಂಕಣದಲ್ಲಿ ವಾಪಸ್ಸಾಗಿದ್ದಾರೆ. ಇದು ನಡಾಲ್ಗೆ 17ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದ್ದು, ಅತಿ ಹೆಚ್ಚು ಬಾರಿ ಫ್ರೆಂಚ್ ಓಪನ್ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿಯನ್ನು 2005, 2006, 2007, 2008, 2010, 2011, 2012, 2013, 2014, 2017, 2018 ರಲ್ಲಿ ಗೆದ್ದುಕೊಂಡಿದ್ದಾರೆ.