Top

ಯೂಟ್ಯೂಬ್‌ನಲ್ಲಿ"ಅವನೇ ನಂ.1 ಶ್ರೀಮನ್ನಾರಾಯಣ"

ಯೂಟ್ಯೂಬ್‌ನಲ್ಲಿಅವನೇ ನಂ.1 ಶ್ರೀಮನ್ನಾರಾಯಣ
X

ಅವನೇ ಶ್ರೀಮನ್ನಾರಾಯಣ... ಸದ್ಯ ಸೌತ್ ಸಿನಿದುನಿಯಾದ ಟಾಕ್ ಆಫ್ ದ ಟೌನ್ ಆಗಿರೋ ಸಿನಿಮಾ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ಬರ್ತ್​ ಡೇ ವಿಶೇಷ ರಿಲೀಸ್ ಆದ ಈ ಟೀಸರ್ ಸದ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸ್ತಿದೆ. ಇಷ್ಟಕ್ಕೂ ಶ್ರೀಮನ್ನಾರಾಯಣ ಅಂಥದ್ದೇನು ಮಾಡಿದ ಅನ್ನೋದನ್ನ ಡಿಟೈಲ್ಡ್ ಆಗಿ ಹೇಳ್ತೀವಿ. ಆದ್ರೆ ಅದಕ್ಕೂ ಮುನ್ನ ಸಿಂಪಲ್ ಸ್ಟಾರ್ ರಕ್ಷಿತ್ ಕುರಿತು ಒಂದು ಸ್ಮಾಲ್ ಇಂಟ್ರಡಕ್ಷನ್ ಕೊಟ್ಟುಬಿಡ್ತೀವಿ ಮುಂದಿ ಓದಿ..

ಸ್ಯಾಂಡಲ್​ವುಡ್​ನ ಯೂನಿಕ್​ ಮಲ್ಟಿ ಟ್ಯಾಲೆಂಟ್ ರಕ್ಷಿತ್

ರಕ್ಷಿತ್​ ಶೆಟ್ಟಿ ಕನ್ನಡದ ಯೂನಿಕ್ ನಟ ಮತ್ತು ನಿರ್ದೇಶಕ ಅಂದ್ರೂ ತಪ್ಪಾಗೋದಿಲ್ಲ..ಅವ್ರ ಸ್ಟೈಲ್​ ಆಫ್​ ಸಿನಿಮಾನೇ ಬೇರೆ. ಮೇಕಿಂಗ್​ ಸ್ಟೈಲೇ ಬೇರೆ.ಅವ್ರ ಯೋಚನೆಗಳೇ ಬೇರೆ.. ಒಂಥರಾ ಡಿಫ್ರೆಂಟು.ಸಿಂಪಲ್ಲಾಗ್​​ ಒಂದ್​ ಲವ್​ ಸ್ಟೋರಿ ಸಿನಿಮಾ ಮೂಲಕ ರಕ್ಷಿತ್​ ಬೆಳಕಿಗೆ ಬಂದ್ರೂ ಕೂಡ ಅವ್ರ ಹಿಂದಿನ ಎರಡು ಸಿನಿಮಾಗಳು ಕೂಡ ವಿಭಿನ್ನವಾಗೇ ಇದ್ವು.

ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ ಸೂಪರ್​ ಡೂಪರ್​ ಹಿಟ್ ಆಯ್ತು.ಆ ನಂತ್ರ ಉಳಿದವರು ಕಂಡಂತೆ ಚಿತ್ರದ ಮೂಲಕ, ತಮ್ಮದೇ ನಿರ್ದೇಶನದಲ್ಲಿ ಒಂದಷ್ಟು ಹೊಸ ಪ್ರಯೋಗಗಳನ್ನ ಮಾಡಿದ್ರು..ನಂತ್ರ ರಕ್ಷಿತ್​ ಶೆಟ್ಟಿಗೆ ದೊಡ್ಡ ಸಕ್ಸಸ್​ ತಂದುಕೊಟ್ಟಿದ್ದು ಕಿರಿಕ್ ಪಾರ್ಟಿ.

[story-lines]

ಕಿರಿಕ್ ಪಾರ್ಟಿಯಿಂದ ಬಾಕ್ಸ್ ಆಫೀಸ್​ನ ದೊಡ್ಡ ಪಾರ್ಟಿ

2016ರ ಕೊನೆಯಲ್ಲಿ ತೆರೆಕಂಡ ಕಿರಿಕ್ ಪಾರ್ಟಿ, ಕರಾವಳಿ ಹುಡುಗನಿಗೆ ದೊಡ್ಡ ನೇಮು ಫೇಮು ತಂದುಕೊಟ್ಟಿತ್ತು..ರಕ್ಷಿತ್​ ಶೆಟ್ಟಿಯಲ್ಲೊಬ್ಬ ಅದ್ಭುತ ಕಲಾವಿದನಿದ್ದಾನೆ, ಯಾರೂ ಅಳೆಯಲಾದ ತಂತ್ರಜ್ಞನಿದ್ದಾನೆ ಅನ್ನೋದನ್ನ ಈ ಚಿತ್ರ ಪ್ರೂವ್ ಮಾಡಿತ್ತು. ಚಿತ್ರ ರಿಲೀಸ್​ ಆದ ಹೊಸತರಲ್ಲಿ ಪರಭಾಷಾ ಸಿನಿಮಾಗಳಿಂದ ಕಥೆ ಕದ್ದಿದ್ದಾರೆ ಅನ್ನೋ ಆರೋಪ ಕೇಳಿಬಂದ್ರೂ, ಇದು ಕದ್ದಿರೋದಲ್ಲ, ಕೇವಲ ಸ್ಪೂರ್ತಿ ಪಡೆದಿರೋದು ಅಂತ ರಕ್ಷಿತ್ ಸಮರ್ಥಿಸಿಕೊಂಡ್ರು..ಅದೇನೇ ಇದ್ರೂ ಕಿರಿಕ್​ ಪಾರ್ಟಿ ಕನ್ನಡ ಇಂಡಸ್ಟ್ರಿ ಮಾತ್ರವಲ್ದೆ ಬೇರೆ ಭಾಷೆಯ ಚಿತ್ರರಂಗದವ್ರು ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ.

ಕಿರಿಕ್ ಪಾರ್ಟಿ.. ಸ್ಯಾಂಡಲ್ವುಡ್ ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದಂತ ಸಿನಿಮಾ.. ಅಷ್ಟೇ ಯಾಕೆ ರಕ್ಷಿತ್ ಶೆಟ್ಟಿ ಅನ್ನೋ ಸಿಂಪಲ್ ಹುಡುಗನನ್ನ ರಾತ್ರೋರಾತ್ರಿ ಸೂಪರ್ ಸ್ಟಾರ್ ನನ್ನಾಗಿ ಮಾಡಿತ್ತು..ಕಿರಿಕ್ ಪಾರ್ಟಿ ಈ ಮಟ್ಟಿಗೆ ಸಕ್ಸಸ್ ಆಗೋದಿಕ್ಕ ಏನಿರ್ಬಹುದು ರಹಸ್ಯ ಅಂತಾ ಹುಡುಕೋದಾದ್ರೆ, ಅಲ್ಲಿ ನೂರೆಂಟು ಕಾರಣಗಳಿವೆ.. ಸಿನಿಮಾ ಕಥೆ ಸಖತ್​ ಸಿಂಪಲ್​ ಆಗಿದ್ದು,ಅದೇಷ್ಟೋ ವರ್ಷಗಳ ನಂತ್ರ ಸಿನಿ ಪ್ರೇಕ್ಷಕರನನ್ನ ಕಾಲೇಜ್ ಕ್ಯಾಂಪಸ್ ನಲ್ಲಿ ಅಲೆಯಂತೆ ಮಾಡಿದ್ರು.. ಆ ಕಾಲೇಜ್ ಅಂಗಳಲ್ಲಿ ನಡೆಯುವ ಕತೆ, ತರ್ಲೆ-ತುಂಟಾಟ, ಹೊಡೆದಾಡ, , ಸಿನಿ ಅಭಿಮಾನಿಗಳಿಗೆ ಮತ್ತೆ ಅವ್ರ ಕಾಲೇಜು ದಿನಗಳನನ್ನ ನೆನಪು ಮಾಡುವಂತೆ ಮಾಡಿತ್ತು..ಚಿತ್ರದ ಪ್ರತಿ ಹಾಡು ಕಾಳೇಜು ಹುಡುಗರ ರಿಂಗ್ ಟ್ಯೂನ್​ ಕಾಲರ್​ ಟ್ಯೂನ್​ ಗಳಾದ್ವು.

https://www.youtube.com/watch?v=p86oUHE2IFA

ಅಷ್ಟೇ ಅಲ್ಲಾ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು.. 2016ರ ವರೆಗೂ ಕನ್ನಡದ ಯಾವೊಂದು ಚಿತ್ರವೂ ಮಾಡಿರದ ಕಲೇಕ್ಷನ್ ಅನ್ನ ಈ ಸಿನಿಮಾ ಮಾಡಿತ್ತು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿತ್ತು.. ಒಂದು ಅಂದಾಜಿನ ಪ್ರಕಾರ ಸರಿಸಮಾರು 75 ಕೋಟಿಯನ್ನ ಈ ಚಿತ್ರ ತನ್ನ ತೆಕ್ಕೆಗೆ ಹಾಕಿಕೊಂಡಿದೆ ಅನ್ನುತ್ತೆ ಗಾಂಧಿನಗ್ರ..

ನಂ.1 ಟ್ರೆಂಡಿಂಗ್​ನಲ್ಲಿದೆ ಶ್ರೀಮನ್ನಾರಾಯಣ ಟೀಸರ್

ಇತ್ತೀಚಿನ ದಿನಗಳಲ್ಲಿ ರಕ್ಷಿತ್ ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಅಲ್ಲೋಂದು ಕ್ಯೂರಿಯಾಸಿಟಿ ಯಾರಿಗೂ ಗೊತ್ತಿರದಂತೆ ಬಿಲ್ಡ್ ಆಗಿರುತ್ತೆ,, ಅದಕ್ಕೆ ತಕ್ಕ ಉದಾಹರಣೆ ಅವನೇ ಶ್ರೀಮನ್ ನಾರಾಯಣ ಚಿತ್ರ.. ಈ ಚಿತ್ರದ ಮೇಲೆ ನಿರೀಕ್ಷೆಗಳು ಹೇಗಿದೆ ಅಂತಾ ಬಿಡಿಸಿ ಹೇಳ್ಬೇಕಿಲ್ಲಾ ಬಿಡಿ.. ಅದ್ಯಾವಾ ಚಿತ್ರದ ಫಸ್ಟ್ ಲುಕ್ ಹೊರ ಬಂತೋ ನೋಡಿ, ಅಭಿಮಾನಿಗಳಲ್ಲಿ ಕ್ರೇಜ್ ಮತ್ತಷ್ಟು ಹೆಚ್ಚಾಯ್ತು.

ಇದೀಗ ರಕ್ಷಿತ್​ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಯಣ ಚಿತ್ರದ ಟೀಸರ್​ ರಿಲೀಸ್​ ಆಗಿದ್ದು, ಫನ್ನಿ ಪೊಲೀಸ್​ ಕಾಪ್​ ಪಾತ್ರದಲ್ಲಿ ರಕ್ಷಿತ್ ಮಿಂಚಿದ್ದಾರೆ..ಟೀಸರ್ ಕೂಡ ಅಷ್ಟೇ ಯೂನಿಕ್​ ಆಗಿದ್ದು,ಹ್ಯಾಪಿ ಬರ್ತ್ ಡೇ ಟು ಮಿ ಅಂತ ರಕ್ಷಿತ್ ಹೇಳಿಕೊಂಡಿರೋ ಕಾನ್ಸೆಪ್ಟ್​ ಕೂಡ ಡಿಫ್ರೆಂಟಾಗಿದೆ.

ಶ್ರೀಮನ್ನಾರಾಯಣನ ಅವತಾರಕ್ಕೆ ಫಿದಾ ಆದ ರಮ್ಯಾ..!

ಸದ್ಯ ಶ್ರೀಮನ್ನಾರಯಣ ಚಿತ್ರದ ಟೀಸರ್​ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, 2 ದಿನಗಳಿಂದ ಯೂಟ್ಯೂಬ್​ನ ನಂಬರ್ 1 ಟ್ರೆಂಡಿಂಗ್​ನಲ್ಲಿದೆ. ಅಷ್ಟೇ ಅಲ್ಲಾ ಎರಡೇ ದಿನಕ್ಕೆ ಹೆಚ್ಚು ಕಡಿಮೆ ಒಂದು ಕೋಟಿ ವೀವ್ಸ್​ ಕೂಡ ಪಡೆದುಕೊಂಡಿದೆ. ಈಗಾಗ್ಲೇ ಸಿನಿಪ್ರಿಯರು ಮತ್ತು ಇಂಡಸ್ಟ್ರಿಯವ್ರು ಟೀಸರ್ ನೋಡಿ ವಾವ್​ ಅಂದಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಸ್ಷೆಷಲ್​ ಪರ್ಸನ್ ಒಬ್ರು ಈ ಟೀಸರ್ ನೋಡಿ ಟ್ವೀಟ್ ಮಾಡಿದ್ದಾರೆ. ಯೆಸ್ ಅವ್ರೇ ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ.

ಯೆಸ್ ಶ್ರೀಮನ್ನಾರಯಣ ಚಿತ್ರದ ಟೀಸರ್​ಗೆ ನಟಿ ರಮ್ಯಾ ಕೂಡ ಫಿದಾ ಆಗಿದ್ದಾರೆ..ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗದಿಂದ ದೂರ ಉಳಿದು ರಾಜಕೀಯದಲ್ಲೇ ಬ್ಯುಸಿಯಾಗಿದ್ದ ರಮ್ಯಾ ಮೇಡಂ ಕೂಡ ಇದನ್ನು ಕಂಡು ಇಂಪ್ರೆಸ್ ಆಗಿದ್ದಾರೆ. ಟೀಸರ್ ನೋಡಿ ಥ್ರಿಲ್ ಆಗಿರೋ ಸ್ಯಾಂಡಲ್​ವುಡ್ ಪದ್ಮಾವತಿ ಟ್ವೀಟ್ ಮಾಡೋ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ‘ರಕ್ಷಿತ್ ಶೆಟ್ಟಿಯಂತ ಟ್ಯಾಲೆಂಟ್​ ನಮ್ಮ ಇಂಡಸ್ಟ್ರಿಗೆ ಬೇಕು. ನಿಮ್ಮ ಬೆಳವಣಿಗೆಗೆ ಖುಷಿ ಮತ್ತು ಹೆಮ್ಮೆ ಇದೆ. ಬೆಸ್ಟ್ ಆಫ್​ ಲಕ್’ ಅಂತ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ, ಸೂಪರ್ ಸ್ಟಾರ್ ರಜಿನೀಕಾಂತ್, ಸಲ್ಮಾನ್ ಖಾನ್, ಶಾರೂಖ್ ಖಾನ್​ರ ಟೀಸರ್ ಮತ್ತು ಟ್ರೈಲರ್​ಗಳ ರೀತಿ ನಮ್ಮ ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ ಟೀಸರ್​ಗೂ ವೀವ್ಸ್ ಸಿಕ್ತಿರೋದು ಮತ್ತು ಟ್ರೆಂಡಿಂಗ್​ನಲ್ಲಿರೋದು ಚಿತ್ರರಂಗದ ಮಟ್ಟಿಗೆ ಹೆಮ್ಮೆಯ ವಿಚಾರ.

Next Story

RELATED STORIES