Top

ಪಾಕ್​ ಮಣಿಸಿದ ಭಾರತ ವನಿತೆಯರು: ಏಷ್ಯಾಕಪ್ ಟಿ-20 ಫೈನಲ್​ಗೆ ಜಿಗಿತ

ಪಾಕ್​ ಮಣಿಸಿದ ಭಾರತ ವನಿತೆಯರು: ಏಷ್ಯಾಕಪ್ ಟಿ-20 ಫೈನಲ್​ಗೆ ಜಿಗಿತ
X

ಕೌಲಾಲಂಪುರ: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ 7 ವಿಕೆಟ್​ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಏಕ್ತಾ ಬಿಸ್ಟ್ ದಾಳಿಗೆ ತತ್ತರಿಸಿ 20 ಓವರ್​ ಗಳಲ್ಲಿ 7 ವಿಕೆಟ್​ಗೆ 72 ರನ್ ಗಳಿಸಷ್ಟೇ ಶಕ್ತವಾಯಿತು. ಸುಲಭ ಗುರಿ ಬೆಂಬತ್ತಿದ ಭಾರತ 16.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಭಾರತ ಟೂರ್ನಿಯಲ್ಲಿ ಸತತ 7ನೇ ಗೆಲುವು ದಾಖಲಿಸಿದ ಸಾಧನೆ ಮಾಡಿತು. ಭಾರತದ ಪರ ನಾಯಕ ಹರ್ಮನ್​ಪ್ರೀತ್ ಕೌರ್ 34 ಮತ್ತು ಸ್ಮೃತಿ ಮಂದಣ್ಣ 38 ರನ್ ಗಳಿಸಿದರು. ಬಾಂಗ್ಲಾ ಅಥವಾ ಮಲೇಷ್ಯಾ ಫೈನಲ್​ನಲ್ಲಿ ಮುಖಾಮುಖಿ ಆಗುವ ಸಾಧ್ಯತೆ ಇದೆ.

  • ಸಂಕ್ಷಿಪ್ತ ಸ್ಕೋರ್
  • ಪಾಕಿಸ್ತಾನ 20 ಓವರ್ 7 ವಿಕೆಟ್ 72 (ನಾಹಿದಾ 18, ಸಾನಾ ಮಿರ್ 20, ಬಿಸ್ಟ್ 14/3).
  • ಭಾರತ 16.1 ಓವರ್ 3 ವಿಕೆಟ್​ 75 (ಸ್ಮೃತಿ ಮಂದಣ್ಣ 38, ಹರ್ಮನ್​ಪ್ರೀತ್ ಅಜೇಯ 34,ಅನಾಮ್ 20/2).

Next Story

RELATED STORIES