Top

46 ಬಾರಿ ಸಿನಿಮಾ ನೋಡಿದ ಅಭಿಮಾನಿ: ಅವನಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ?

46 ಬಾರಿ ಸಿನಿಮಾ ನೋಡಿದ ಅಭಿಮಾನಿ: ಅವನಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ?
X

ಈಗಿನ ಸಿನಿಮಾ ಒಂದು ಬಾರಿ ನೋಡೋದೇ ಹೆಚ್ಚು. ಚೆನ್ನಾಗಿದೆ ಅಂದರೆ ಎರಡು ಬಾರಿ. ತುಂಬಾ ಚೆನ್ನಾಗಿದೆ ಅಂದರೆ ನಾಲ್ಕೈದು ಬಾರಿ ನೋಡಬಹುದು. ಆದರೆ ಇಲ್ಲೊಂದು ಚಿತ್ರ ಬಿಡುಗಡೆ ಆದಾಗಿನಿಂದ ಸತತವಾಗಿ 46 ಬಾರಿ ವೀಕ್ಷಿಸಿ ಅಸಾಧಾರಣ ಅಭಿಮಾನಿಯಾಗಿದ್ದಾನೆ.

ಎವೆಂಜರ್ಸ್: ಇನ್ಫೆನಿಟಿ ವಾರ್​ ಚಿತ್ರವನ್ನು ಅಮೆರಿಕದ ಈ ಅಭಿಮಾನಿ 46 ಬಾರಿ ವೀಕ್ಷಿಸಿದ್ದಾನೆ. ಥಿಯೇಟರ್​ಗಳಲ್ಲಿ ಎಷ್ಟು ದಿನ ಇರುತ್ತೋ ಅಷ್ಟೂ ದಿನವೂ ನೋಡುತ್ತೇನೆ ಎಂದು ಪಣ ತೊಟ್ಟಿದ್ದಾನೆ. ಈತ 'ಹುಚ್ಚುಗಾರಿಕೆ' ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಚಿತ್ರ ಅಭಿಮಾನಿ ನೆಮ್​ ಅವರ ಈ ಅತಿಯಾದ ಅಭಿಮಾನ ರುಸ್ಸೊ ಬ್ರದರ್ಸ್ ಗಮನಕ್ಕೂ ಬಂದಿದೆ. ರುಸ್ಸೊ ಸೋದರರು ಈತನಿಗೆ ಏವೆಂಜರ್ಸ್​-4 ಚಿತ್ರದ ಪ್ರೀಮಿಯರ್ ಶೋಗೆ ಆಹ್ವಾನ ನೀಡುವ ಮೂಲಕ ವಿಶೇಷ ಉಡುಗೊರೆ ನೀಡಿದ್ದಾರೆ.

ಏವೆಂಜರ್ಸ್​: ಇನ್ಫೆನಿಟಿ ವಾರ್​ ಚಿತ್ರದ ಎರಡನೇ ಭಾಗ ಮುಂದಿನ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Next Story

RELATED STORIES