Top

ಬೀದಿ ನಾಯಿಗೆ ಬಂತು ಬಂಪರ್ ಬೆಲೆ : "ಕಾಲಾ"ದಲ್ಲಿ ನಟಿಸಿದ "ಮಣಿ"ಗೆ 2 ಕೋಟಿ.!

ಬೀದಿ ನಾಯಿಗೆ ಬಂತು ಬಂಪರ್ ಬೆಲೆ : ಕಾಲಾದಲ್ಲಿ ನಟಿಸಿದ ಮಣಿಗೆ 2 ಕೋಟಿ.!
X

ತಮಿಳುನಾಡು : ಪ್ರತಿಯೊಂದು ನಾಯಿಗೂ ಒಂದಲ್ಲ ಒಂದು ದಿನ ಬೆಲೆ ಬಂದೇ ಬರುತ್ತದೆ ಎಂಬ ಗಾದೆಯೊಂದಿದೆ. ಈ ಮಾತು ಇದೀಗ ನಿಜವಾಗಿದೆ. ಹಲವು ಪ್ರತಿಭಟನೆಗಳ ನಡುವೆ ಬಿಡುಗಡೆಯಾದ ಕಾಲಾ ಚಿತ್ರದಲ್ಲಿ ಇಂತಹ ಗಾದೆ ಮಾತು ನಿಜವಾಗಿದೆ.

ಬಂಗಾರದ ಬೆಲೆ ಕಂಡ ಬೀದಿ ನಾಯಿ

ಅಂದಾಹಾಗೇ, ಸೂಪರ್ ಸ್ಟಾರ್‌ ರಜನಿಕಾಂತ್ ಅಭಿನಯದ ಕಾಲಾ ಜೂ.7ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿತ್ತು. ಈ ಚಿತ್ರದಲ್ಲಿ ರಜನಿಕಾಂತ್‌ ಜೊತೆಗೆ ಬೀದಿನಾಯಿಯೊಂದು ಕಾಣಿಸಿಕೊಂಡಿದೆ. ಇಂತಹ ಬೀದಿನಾಯಿಗೆ ಇಂದು ಬಂಗಾರದ ಬೆಲೆ ಬಂದಿದೆ. ಸುಮಾರು 2 ಕೋಟಿ ಬೆಲೆಯನ್ನು ಬಾಚಿಕೊಳ್ಳುವ ಹಂತಕ್ಕೆ ಬೆಳೆದು ನಿಂತಿದೆ..

[story-lines]

ಅದೇಗಪ್ಪಾ ಅಂತ ಯೋಚನೆನಾ..?

ಕಾಲಾ ಚಿತ್ರದಲ್ಲಿ ರಜನಿಕಾಂತ್‌ ಜೊತೆಗೆ ಕಾಣಿಸಿಕೊಂಡಿದ್ದ ಮಣಿ ಹೆಸರಿನ ಬೀದಿ ನಾಯಿಗೆ, ಅದರ ಮಾಲೀಕ ಸೈಮನ್‌ ವಿಶೇಷ ತರಬೇತಿ ನೀಡದ್ದರು. ಈ ವೀಡಿಯೋವನ್ನು ಎಕ್ಸ್‌ಪ್ರೆಸ್‌ ಎಂಬ ಸಂಸ್ಥೆ ಪ್ರಕಟಿಸಿತ್ತು. ಅಲ್ಲದೇ ಇದರ ಜೊತೆಗೆ, ಚಿತ್ರದಲ್ಲಿ ನಿರ್ದೇಶಕ ಪ.ರಂಜಿತ್‌ ಮಣಿಯನ್ನು ಈ ಪಾತ್ರಕ್ಕೆ ಅಂತಿಮಗೊಳಿಸುವ ಮುನ್ನಾ ಸುಮಾರು 30 ಬೀದಿನಾಯಿಗಳ ಆಡಿಷನ್‌ ನೆಡೆಸಿದ್ದಾಗಿಯೂ ಹೇಳಿಕೊಂಡಿದ್ದರು.

ಮಣಿ ವೀಡಿಯೋ ವೈರಲ್‌ಗೆ ಫಿದಾ ಆದ ಅಭಿಮಾನಿಗಳು

ಹೀಗೆ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಆಗುತ್ತಿದ್ದಂತೆ, ವೀಡಿಯೋ ವೈರಲ್ ಆಗಿದೆ. ಬೀದಿನಾಯಿಯನ್ನು, ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೊತೆಗೆ ಕಾಣಿಸಿಕೊಂಡ ನಾಯಿಯನ್ನು ಕೊಂಡುಕೊಳ್ಳೋಕೆ ಹಲವರು ಮುಂದಾಗಿದ್ದಾರಂತೆ. ಅಲ್ಲದೇ ಒಬ್ಬಬ್ಬೊರು ವೀಡಿಯೋ ನೋಡಿಯೇ ಬಿಡ್ ಮಾಡ್ತಾ ಇದ್ದಾರಂತೆ. ಇದರಲ್ಲಿ ಬರೋಬ್ಬರಿ 2 ಕೋಟಿಗೆ ಒಬ್ಬರು ಕೊಂಡು ಕೊಳ್ಳುವ ಹಿಂಗಿತವನ್ನು ವ್ಯಕ್ತಪಡಿಸಿದ್ದಾರಂತೆ.

ಬಿಸ್ಕೆಟ್‌ ಮಣಿ ಎಂದೇ ಸೆಟ್‌ನಲ್ಲಿ ಪರಿಚಿತ

ಇನ್ನೂ ರಜನಿಕಾಂತ್‌ ಜೊತೆಗೆ ಕಾಣಿಸಿಕೊಂಡಿದ್ದ ಮಣಿಯನ್ನು ಮಾರೋಕೆ ಇಷ್ಟ ಇಲ್ಲ. ನನಗೆ ಬೀದಿನಾಯಿಯಾದ ಮಣಿ ಒಳ್ಳೆಯ ಸ್ನೇಹಿತನಂತಾಗಿದ್ದಾನೆ. ನಾನು ಬೆಳಿಗ್ಗೆ ಎದ್ದ ತಕ್ಷಣ ಮಣಿಯ ಮುಖ ನೋಡ್ತೇನೆ. ಹೀಗಾಗಿ ನನಗೆ ಹಣ ಮುಖ್ಯವಲ್ಲ ಮಣಿ ಮುಖ್ಯ ಅಂತಾರೆ ಮಾಲೀಕ ಸೈಮನ್.

ಅದೇನೇ ಆದ್ರೂ, ಕಾಲಾ ಚಿತ್ರದಲ್ಲಿ ಗುರ್ತಿಸಿಕೊಂಡಿರುವ ಮಣಿ, ಸೆಟ್‌ನಲ್ಲಿ ಬಿಸ್ಕೆಟ್‌ ಮಣಿಯಂತಲೇ ಗುರ್ತಿಸಿಕೊಂಡಿತ್ತಂತೆ. ಎಲ್ಲರೂ ಬೀದಿನಾಯಿಯಾಗಿದ್ದ ಮಣಿಗೆ ಬಿಸ್ಕೆಟ್‌ ಹಾಕಿ, ಪ್ರೀತಿಯಿಂದ ಮುದ್ದು ಮಾಡ್ತಾ ಇದ್ರಂತೆ. ಇಂತಹ ನಾಯಿಗೆ ಕೋಟಿ ಕೋಟಿ ಬೆಲೆಯ ಆಫರ್ ಬಂದಿರೋದು ಎಲ್ಲರನ್ನೂ ಬೆರಗೂ ಗೊಳಿಸ್ತಾ ಇದೆ. ಅದ್ಕೆ ಏನೋ ಹೇಳೋದು, ನಾಯಿಗೂ ಒಂದು ಕಾಲ ಅಂತ ಇರಬೇಕು.

Next Story

RELATED STORIES