Top

ಹಾಲೆಪ್​ಗೆ ಒಲಿದ ಫ್ರೆಂಚ್ ಓಪನ್ ಕಿರೀಟ

ಹಾಲೆಪ್​ಗೆ ಒಲಿದ ಫ್ರೆಂಚ್ ಓಪನ್ ಕಿರೀಟ
X

ಮೂರು ಬಾರಿ ಗ್ರ್ಯಾನ್​ಸ್ಲಾಮ್ ಓಪನ್ ಫೈನಲ್​ ತಲುಪಿದರೂ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದ್ದ ಸಿಮೊನಾ ಹಾಲೆಪ್ ಫ್ರೆಂಚ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಪ್ರಶಸ್ತಿ ಬರ ನೀಗಿಸಿಕೊಂಡಿದ್ದಾರೆ.

ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್​ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ರೊಮೆನಿಯಾದ ಸಿಮೊನಾ ಹಾಲೆಪ್ ಮೊದಲ ಸೆಟ್​ನಲ್ಲಿ ಆಘಾತ ಅನುಭವಿಸಿದರೂ ಅಂತಿಮವಾಗಿ 3-6, 6-4, 6-1 ಸೆಟ್​ಗಳಿಂದ 10ನೇ ಶ್ರೇಯಾಂಕಿತೆ ಅಮೆರಿಕದ ಸ್ಲೊನಿ ಸ್ಟೆಫಾನ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿದರು.

ಹಾಲೆಪ್​ ಇದಕ್ಕೂ ಮುನ್ನ 2014ರಲ್ಲಿ ಮಾರಿಯಾ ಶರಪೋವಾ ವಿರುದ್ಧ, 2017ರಲ್ಲಿ ಜೆಲೆನಾ ಓಸ್ಟೊಪೆಂಕಾ ವಿರುದ್ಧ ಹಾಗೂ ಆಸ್ಟ್ರೇಲಿಯನ್ ಓಪನ್​ನಲ್ಲಿ ಕೆರೊಲಿನಾ ವೊಜ್ನಿಯಾಕಿ ವಿರುದ್ಧ ಫೈನಲ್​ಗಳಲ್ಲಿ ಸೋಲುಂಡಿದ್ದರು.

Next Story

RELATED STORIES