Top

ಮುಂಬೈನಲ್ಲಿ ಭಾರಿ ಅಗ್ನಿ ಅವಘಡ : ಹೊತ್ತಿ ಉರಿದ ನಾಲ್ಕು ಹಂತದ ಕಟ್ಟಡ

ಮುಂಬೈನಲ್ಲಿ ಭಾರಿ ಅಗ್ನಿ ಅವಘಡ : ಹೊತ್ತಿ ಉರಿದ ನಾಲ್ಕು ಹಂತದ ಕಟ್ಟಡ
X

[story-lines]

ಮುಂಬೈ : ಬೆಳ್ಳಂಬೆಳಗ್ಗೆ ಮುಂಬೈನಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ. ಮುಂಬೈ ಕೋಟೆಯ ಸಮೀಪದಲ್ಲಿರುವ ನಾಲ್ಕು ಹಂತಸ್ಥಿನ ಕಟ್ಟಡಕ್ಕೆ ತಗುಲಿದ ಬೆಂಕಿಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಮುಂಬೈನ ಪಟೇಲ್‌ ಛೇಂಬರ್ ಎನ್ನುವ ಕಟ್ಟಡ ಮುಂಬೈ ಕೋಟೆಯ ಸಮೀಪದಲ್ಲಿಯೇ ಇದೆ. ನಾಲ್ಕು ಹಂತದ ಕಟ್ಟಡ ಇದಾಗಿದ್ದು, ಆಕಸ್ಮಿಕವಾಗಿ ಉಂಟಾದ ಬೆಂಕಿಯಿಂದಾಗಿ ಇಡೀ ಕಟ್ಟಡವೇ ಕ್ಷಣ ಮಾತ್ರದಲ್ಲಿ ಹೊತ್ತಿ ಉರಿದಿದೆ. ನಾಲ್ಕು ಹಂತದ ಕಟ್ಟಡಕ್ಕೆ ಬೆಂಕಿ ತಗುಲಿದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 18ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಅಂದಹಾಗೇ ಕಟ್ಟಡಕ್ಕೆ ಬೆಂಕಿ ಹೇಗೆ ತಗುಲಿದ್ದರಿಂದಾಗಿ, ಇಡೀ ಕಟ್ಟಡವೇ ನೆಲಮನವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಬೆಂಕಿನಂದಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನು ಎಂಬುದು ಇನ್ನೂ ತನಿಖೆಯಿಂದ ತಿಳಿದು ಬರಬೇಕಿದೆ.

Next Story

RELATED STORIES