Top

ನ್ಯಾಯಮೂರ್ತಿಗೆ ಚಾಕು ಇರಿದ ಪ್ರಕರಣ : ದೋಷಾರೋಪ ಪಟ್ಟಿ ಸಲ್ಲಿಕೆ

ನ್ಯಾಯಮೂರ್ತಿಗೆ ಚಾಕು ಇರಿದ ಪ್ರಕರಣ : ದೋಷಾರೋಪ ಪಟ್ಟಿ ಸಲ್ಲಿಕೆ
X

ಬೆಂಗಳೂರು : ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಅಂದ್ರೆ ಅದು, ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿದ ಪ್ರಕರಣ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ತಮ್ಮ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಮಾರ್ಚ್‌ 7, 2018ರಂದು ಲೋಕಾಯುಕ್ತ ಕಚೇರಿಗೆ ತೆರಳಿದ್ದ ತೇಜ್‌ರಾಜ್‌ ಎಂಬಾತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿಯವರಿಗೆ ಚಾಕುವಿನಿಂದ ಇರಿದಿದ್ದನು. ಈ ಸಂಬಂಧ ತುಮಕೂರಿನ ತೇಜ್‌ರಾಜ್‌ನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ತನಿಖೆಯನ್ನು ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, ಸುಮಾರು 600 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ದೋಷಾರೋಪ ಪಟ್ಟಿಯಲ್ಲಿ ಆರೋಪಿ ತೇಜ್‌ರಾಜ್‌ ಅವರು, ಎಷ್ಟು ಬಾರಿ ವಿಶ್ವನಾಥ್ ಶೆಟ್ಟಿ ಅವರ ಬಳಿಗೆ ಹೋದ್ರು ಕೂಡ ಅವರು ಸರಿಯಾಗಿ ಉತ್ತರ ನೀಡ್ತಾ ಇರ್ಲಿಲ್ಲ. ನಾನು ಪ್ರಶ್ನೆ ಮಾಡಿದ್ರೆ ನಗು ಮುಖದಲ್ಲಿ ಉತ್ತರಿಸೋದು ನನಗೆ ಕೋಪ ತರ್ತಿತ್ತು. ಅದಕ್ಕೆ ಸಂಡೇ ಬಜಾರ್ ರಾಮಣ್ಣನ ಬಳಿ 60. ರೂಪಾಯಿಗೆ ಚಾಕು ಖರೀದಿ ಮಾಡಿದೆ. 60 ರೂಪಾಯಿ ಕೊಟ್ಟರೂ ರಾಮಣ್ಣ ನಂಗೆ ಮೋಸ ಮಾಡಿದ್ದಾನೆ ಎಂಬುದಾಗಿ ಹೇಳಿರುವುದಾಗಿ ತಿಳಿದು ಬಂದಿದೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿ ತೇಜ್‌ರಾಜ್‌, ನ್ಯಾಯಕ್ಕಾಗಿ ನಾನು ನನ್ನ ಜೀವವನ್ನು ಕೊಡೋದಕ್ಕೆ ಸಿದ್ಧ. ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಈ ರೀತಿ ಮಾಡಿದೆ. ಭಗವದ್ಗೀತೆಯಲ್ಲಿ ಹೇಳಿದ ಹಾಗೆ ಅಧರ್ಮದ ವಿರುದ್ಧ ನಾನು ಹೋರಾಟ ಮಾಡಿದ್ದೀನಿ. ವಕೀಲರನ್ನು ಇಟ್ಟುಕೊಳ್ಳದೆ ನಾನೇ ವಾದ ಮಾಡುವುದಾಗಿ ಹೇಳಿಕೊಂಡಿರೋ ತೇಜರಾಜ್ ತಿಳಿದು ಬಂದಿದೆ.

Next Story

RELATED STORIES