Top

ಅರ್ಜೆಂಟೀನಾ ಮುಡಿಗೆ ಫಿಫಾ ವಿಶ್ವಕಪ್: ಭವಿಷ್ಯ ನುಡಿದಿದ್ದು ಯಾರು ಗೊತ್ತಾ?

ಅರ್ಜೆಂಟೀನಾ ಮುಡಿಗೆ ಫಿಫಾ ವಿಶ್ವಕಪ್: ಭವಿಷ್ಯ ನುಡಿದಿದ್ದು ಯಾರು ಗೊತ್ತಾ?
X

ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಬಾರಿಯ ಚಾಂಪಿಯನ್ ಯಾರು ಎಂಬ ಕುತೂಹಲ ಕೂಡ ಹೆಚ್ಚಾಗಿದೆ. 220 ರಾಷ್ಟ್ರಗಳ ಪೈಕಿ ಸುಮಾರು 32 ತಂಡಗಳು ಅಂತಿಮ ಸುತ್ತಿನ ವಿಶ್ವಕಪ್ ಫೈನಲ್ಸ್ ಸುತ್ತಿನಲ್ಲಿ ಯಾರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂಬುದು ಕಾದು ನೋಡಬೇಕಿದೆ. ಹಾಗೆ ಕಾದು ಕೂರಲು ಆಗದೇ ಇದ್ದವರು ಭವಿಷ್ಯವಾಣಿಯ ಮೊರೆ ಹೋಗುತ್ತಿದ್ದಾರೆ.

[story-lines]

2010ರ ವಿಶ್ವಕಪ್​ನಲ್ಲಿ ಪಾಲ್ ಎಂಬ ಅಕ್ಟೋಪಸ್ ವಿಶ್ವಕಪ್ ಯಾರ ಮುಡಿಗೆ ಎಂದು ಹೇಳುವ ಮೂಲಕ ಇಡೀ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ಕಳೆದ ಬಾರಿ ಆನೆ ಈ ಕೆಲಸ ಮಾಡಿತ್ತು. ಆದರೆ ಇದೀಗ ಕ್ಲಿಯೊಪಾತ್ರ ಎಂಬ ಜಗತ್ತಿನ ಅತ್ಯಂತ ಸುಂದರಿಯ ಹೆಸರು ಹೊತ್ತ ಟ್ರೇಪರ್ ಎಂಬ ಪ್ರಾಣಿ ಭವಿಷ್ಯವಾಣಿ ನುಡಿದಿದೆ.

ರಷ್ಯಾದ ನಿಜ್ನಿ ನೊವ್​ಗ್ರಾಡ್​ನಲ್ಲಿರುವ ಲಿಂಪೂ ಮೃಗಾಲಯದಲ್ಲಿರುವ ಟೇಪರ್ ಎಂಬ ಪ್ರಾಣಿ ಭವಿಷ್ಯ ನುಡಿದಿದೆ. ಟೇಪರ್ ಹಂದಿಯ ಅಕಾರದಲ್ಲಿ ಇದ್ದರೂ ಆನೆಯಂಥ ಸಣ್ಣ ಸೊಂಡಿಲು ಇದೆ. ಇದು ಈ ಬಾರಿಯ ವಿಶ್ವಕಪ್ ಅರ್ಜೆಂಟೀನಾ ಪಾಲಾಗಲಿದೆ ಎಂದು ಭವಷ್ಯ ನುಡಿದಿದೆ.

ಕಳೆದ ಬಾರಿ ಸೆಮಿಫೈನಲ್​ನಲ್ಲಿ ಅರ್ಜೆಂಟೀನಾ ಸೋತ ಬೆನ್ನಲ್ಲೇ ಲಿಯೊನೆಲ್ ಮೆಸ್ಸಿ ಫುಟ್ಬಾಲ್​ಗೆ ವಿದಾಯ ಹೇಳಿದ್ದರು. ಆದರೆ ಅಭಿಮಾನಿಗಳು ಹಾಗೂ ಗಣ್ಯರ ಒತ್ತಡಕ್ಕೆ ಮಣಿದು ಫುಟ್ಬಾಲ್​ಗೆ ಮರಳಿದ್ದರು. ಇದೀಗ ಅರ್ಜೆಂಟೀನಾಗೆ ಪ್ರಶಸ್ತಿ ತಂದುಕೊಡುವ ಅವರ ಆಸೆ ಫಲಿಸುವುದು ಎಂದು ಕ್ಲಿಯೋಪಾತ್ರ ಭವಿಷ್ಯ ನುಡಿದಿದೆ.

ಕ್ಲಿಯೋಪಾತ್ರ ಆಯ್ಕೆ ಮಾಡಿದ್ದು ಹೇಗೆ?

ಫಿಫಾ ವಿಶ್ವಕಪ್​​ಗೆ ಭಾಗಿಯಾಗಿರುವ 32 ದೇಶಗಳ ಹೆಸರುಗಳನ್ನಿರುವ ಜಾರ್​ಗಳನ್ನ ಕ್ಲಿಯೋಪಾತ್ರ ಎದುರಲ್ಲಿ ಅದಕ್ಕೆ ಇಷ್ಟವಾದ ಆಹಾರಗಳನ್ನು ಇಡಲಾಗಿತ್ತು. ಟೇಪರ್​ಗಳು ಸಾಮಾನ್ಯವಾಗಿ ತಿನ್ನುವ ಆಹಾರಗಳಾದ ಬಾಳೆಹಣ್ಣು, ಕ್ಯಾರೆಟ್ ಅನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಎಲ್ಲಾ ಜಾರ್​ಗಳಲ್ಲೂ ಸಮಪ್ರಮಾಣದಲ್ಲಿ ಇರಿಸಲಾಗಿತ್ತು. ಕ್ಲಿಯೋಪಾತ್ರರನ್ನು ಜಾರ್​ನ ಬಳಿ ಬಿಟ್ಟಾಗ, ನೇರವಾಗಿ ಅರ್ಜೆಂಟೀನಾ ತಂಡದ ಧ್ವಜ ಅಂಟಿಸಿದ್ದ ಜಾರ್​ನಲ್ಲಿದ್ದ ಆಹಾರವನ್ನು ಸೇವಿಸಿದೆ. ಈ ಮೂಲಕ ಅರ್ಜೆಂಟೀನಾಗೆ ಈ ಬಾರಿ ಪ್ರಶಸ್ತಿ ಎಂದು ಭವಿಷ್ಯ ನುಡಿದಿದೆ.

ಅರ್ಜೆಂಟೀನಾ ಜಾರ್​​ನಲ್ಲಿದ್ದ ಆಹಾರ ತಿಂದ ಬಳಿಕ ಕ್ಲಿಯೋಪಾತ್ರ, ಸ್ಪೇನ್ ತಂಡದ ಧ್ವಜವಿದ್ದ ಜಾರ್​ನ ಆಹಾರ ಸೇವಿಸಿದೆ. ಇದರಿಂದಾಗಿ ವಿಶ್ವಕಪ್ ಫೈನಲ್​ನಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿದ್ದು, ಸ್ಪೇನ್​ 2ನೇ ಸ್ಥಾನ ಪಡೆಯಲಿದೆ ಎಂದು ಸುಳಿವು ನೀಡಿದೆ.

ಇನ್ನು 3ನೇ ಸ್ಥಾನದ ಕುರಿತಾಗಿ ಟೇಪರ್ ಕ್ಲಿಯೋಪಾತ್ರ ನುಡಿದಿರುವ ಭವಿಷ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ ತಂಡ 3ನೇ ಸ್ಥಾನ ಬರಲಿದೆ ಎನ್ನುವುದು ನಂಬಲಸಾಧ್ಯ ಆಯ್ಕೆ. ಅದಲ್ಲದೆ ಪ್ರತಿ ಪಂದ್ಯಕ್ಕೂ ಮುನ್ನ 9 ವರ್ಷದ ಕ್ಲಿಯೋಪಾತ್ರ ಭವಿಷ್ಯ ಹೇಳಲಿದೆ ಎಂದು ಮೃಗಾಲಯದ ನಿರ್ದೇಶಕರು ಕೂಡಾ ಹೇಳಿದ್ದಾರೆ.

Next Story

RELATED STORIES