Top

ಕಿಚ್ಚನಿಗೆ ಅಂಬಿಯನ್ನ ಅನುಕರಿಸೋದು ಕಷ್ಟವಂತೆ..!

ಕಿಚ್ಚನಿಗೆ ಅಂಬಿಯನ್ನ ಅನುಕರಿಸೋದು ಕಷ್ಟವಂತೆ..!
X

[story-lines]

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಚಿತ್ರರಂಗದ ಎರಡು ಜನರೇಷನ್​ನ ಸ್ಟಾರ್ ದಿಗ್ಗಜರು. ಬಹುದೊಡ್ಡ ಅಭಿಮಾನಿ ಬಳಗವಿರೋ ಎವರ್ ಗ್ರೀನ್ ಸ್ಟಾರ್ಸ್​. ಇನ್ನು ಇವರಿಬ್ಬರ ಬಾಂಧವ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುದೀಪ್​ಗೆ ಚಿತ್ರರಂಗದಲ್ಲಿ ಗಾಡ್ ಫಾದರ್ ಅಂತ ಇದ್ರೆ ಅದು ಅಂಬರೀಶ್ ಮಾತ್ರ. ಅಂಬಿ ಹಾಕಿದ ಗೆರೆಯನ್ನ ಕಿಚ್ಚ ದಾಟೋದಿರಲಿ, ಅದ್ರ ಹತ್ತಿರ ಕೂಡ ಸುಳಿಯಲ್ಲ. ಅಷ್ಟರ ಮಟ್ಟಿಗೆ ಕಿಚ್ಚನಿಗೆ ಅಂಬಿ ಮೇಲೆ ಅಭಿಮಾನ, ಗೌರವ, ಪ್ರೀತಿ.

ಕಿಚ್ಚ ಸುದೀಪ್‌, ರೆಬಲ್ ಸ್ಟಾರ್ ಅಂಬರೀಶ್ ಎವರ್‌ ಗ್ರೀನ್ ಸ್ಟಾರ್ಸ್

ಮೊದಲಿನಿಂದಲೂ ಅಂಬರೀಶ್​ರಂತೆ ತನ್ನದೇ ಆದಂತಹ ಸ್ಟೈಲು ಮ್ಯಾನರಿಸಂನಿಂದ ಗಮನ ಸೆಳೆದ ಕಲಾವಿದ ಸುದೀಪ್. ಚಿತ್ರರಂಗದಲ್ಲಿ ವಿಭಿನ್ನವಾದಂತಹ ಗತ್ತು ಗೈರತ್ತು ಕಾಯ್ದುಕೊಂಡಿರೋ ನಟ. ಯಾರು ಏನೇ ಅಂದ್ರೂ ತಲೆಕೆಡಿಸಿಕೊಳ್ಳದ ಕಿಚ್ಚ, ತನ್ನದೇ ಶೈಲಿಯಲ್ಲಿ ಲೈಫ್ ಲೀಡ್ ಮಾಡ್ತಾರೆ.

ಕಿಚ್ಚ ಇದೀಗ ಅಂಬರೀಶ್​ರನ್ನ ಅನುಕರಿಸಿದ್ದಾರೆ. ಅದೂ ಸಿನಿಮಾ ಮೂಲಕ. ಹೌದು, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಮೂಲಕ ಅಂಬಿಯನ್ನ ಮತ್ತೆ ಬೆಳ್ಳಿಪರದೆಗೆ ವಾಪಸ್ಸು ಕರೆತಂದಿದ್ದಾರೆ ಕಿಚ್ಚ. ಅಷ್ಟೇ ಅಲ್ಲ, ಯಂಗ್ ರೆಬೆಲ್ ಸ್ಟಾರ್ ಪಾತ್ರದಲ್ಲಿ ತಾವೇ ನಟಿಸೋ ಮೂಲಕ, ಅಂಬಿಯ ಯೂತ್ ದಿನಗಳನ್ನ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ.

ರೆಬೆಲ್ ಸ್ಟಾರ್‌ ಈಗ "ಅಂಬಿ ನಿಂಗ್‌ ವಯಸ್ಸಾಯ್ತೋ" ಚಿತ್ರದಲ್ಲಿ ಬಣ್ಣ

ಹೌದು... ಗುರುದತ್ತ ಗಾಣಿಗ ಅನ್ನೋ ಯುವ ನಿರ್ದೇಶಕ ಸಾರಥ್ಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಅಂಬರೀಶ್ ಜೊತೆ ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ. ಅಂಬಿ ಮೇಲೆಯೇ ಇಡೀ ಸಿನಿಮಾ ಫೋಕಸ್ ಆದ್ರೂ, ಅಂಬಿಯ ಯಂಗ್ ಏಜ್ ದಿನಗಳಲ್ಲಿ ಕಿಚ್ಚ ಕಾಣಲಿದ್ದಾರೆ. ಈಗಾಗ್ಲೇ ಅದ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿರೋ ಕಿಚ್ಚ, ‘ಅಂಬಿ ನಿಂಗ್ ವಯಸ್ಸಾಯ್ತೋ ಮುಗಿಸಿದ್ದೇನೆ. ಯಂಗ್ ಏಜ್ ಅಂಬರೀಶ್ ಪಾತ್ರ ನಿರ್ವಹಿಸಿದ್ದು ನಿಜಕ್ಕೂ ಅದ್ಭುತ ಅನುಭವ. ಆದ್ರೆ ಅವ್ರನ್ನ ಅನುಕರಿಸೋದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಹಾಗಾಗಿ ನನ್ನದೇ ಶೈಲಿಯಲ್ಲಿ ಅದಕ್ಕೊಂದು ರೂಪ ಕೊಟ್ಟಿದ್ದೇನೆ. ನಿಜಕ್ಕೂ ಅಂಬರೀಶ್ ಆಗೋದು ಕಷ್ಟದ ಕೆಲಸ’ ಎಂದಿದ್ದಾರೆ.

https://www.youtube.com/watch?v=7NWawbAiKLc

ಹೌದು, ಇದು ಖುದ್ದು ಸುದೀಪ್ ಅವರೇ ಅಂಬಿ ಬಗ್ಗೆ ಹೇಳಿಕೊಂಡಿರೋ ಮಾತು. ಅಂದಹಾಗೆ ಸ್ಯಾಂಡಲ್​ವುಡ್‌ಲ್ಲಿ ಅಂಬಿಯದ್ದು ಒಂಥರಾ ರಹದಾರಿ. ಅವ್ರ ಸ್ಟೈಲ್​ನ ಕಾಪಿ ಮಾಡೋದು ಸುಲಭದ ಮಾತೇ ಅಲ್ಲ. ಅದ್ರಲ್ಲೂ ಸುದೀಪ್ ಅಂತಹ ಅಭಿನಯ ಚತುರನಿಗೇ ಅದು ಕಷ್ಟಸಾಧ್ಯವಾಗಿರೋದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಅಂಬಿ, ಸುದೀಪ್‌ ಜೊತೆಯಾಗಿ ನಟನೆ

ಅಂದಹಾಗೆ ಸುದೀಪ್ ಮತ್ತು ಅಂಬಿ ಈ ಹಿಂದೆ ವೀರ ಪರಂಪರೆ ಸಿನಿಮಾದಲ್ಲಿ ತಂದೆ- ಮಗನಾಗಿ ಮಿಂಚು ಹರಿಸಿದ್ರು. ಕರುನಾಡಿನ ಸಿನಿಪ್ರಿಯರಿಂದ ಶಿಳ್ಳೆ ಚಪ್ಪಾಳೆಯ ಜೊತೆಗೆ ಅಭಿಮಾನದ ಮಹಾಸಾಗರವೇ ಹರಿದುಬಂದಿತ್ತು. ಅದಕ್ಕೂ ಮುನ್ನ ಕುತ್ತೇ ಕನ್ವರ್​ಲಾಲ್ ಅನ್ನೋ ಹೆಸ್ರಲ್ಲಿ ಅಂಬಿ ಮತ್ತು ಸುದೀಪ್ ಸಿನಿಮಾ ಮಾಡೋಕೆ ಸಜ್ಜಾಗಿದ್ರು. ಅದು ಕಾರಣಾಂತರಗಳಿಂದ ಸಾಕಾರವಾಗಲಿಲ್ಲವಾದ್ದರಿಂದ ವೀರ ಪರಂಪರೆ ಮೂಲಕ ಹೊಸ ದಾಖಲೆ ಬರೆದಿದ್ದರು.

ಸದ್ಯ ಸುದೀಪ್ ಪೈಲ್ವಾನ್ ಸಿನಿಮಾದ ಒಂದು ಹಂತದ ಶೂಟಿಂಗ್ ಮುಗಿಸಿ, ಕೋಟಿಗೊಬ್ಬ-3 ಸಿನಿಮಾದ ಶೂಟಿಂಗ್​ಗಾಗಿ ಸರ್ಬಿಯಾಗೆ ಹಾರಲಿದ್ದಾರೆ. 40 ದಿನದ ಲಾಂಗ್ ಶೆಡ್ಯೂಲ್​ ನಲ್ಲಿ ಶೇಕಡಾ 30ರಷ್ಟು ಶೂಟಿಂಗ್ ಮುಗಿಸೋ ಬರೋ ಸನ್ನಾಹದಲ್ಲಿದ್ದಾರೆ ಅಭಿನಯ ಚಕ್ರವರ್ತಿ.

Next Story

RELATED STORIES