Top

ಕೊಹ್ಲಿ ಮೇಣದ ಪ್ರತಿಮೆಗೆ ಹಾನಿ

ಕೊಹ್ಲಿ ಮೇಣದ ಪ್ರತಿಮೆಗೆ ಹಾನಿ
X

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಅವರ ಮೇಣದ ಪ್ರತಿಮೆಗೆ ಹಾನಿಯಾಗಿದ್ದರಿಂದ ದೆಹಲಿಯ ಮೇಡಂ ಟುಸ್ಸಾಡ್ಸ್​ ವಸ್ತುಸಂಗ್ರಹಾಲಯುದಿಂದ ತೆರವುಗೊಳಿಸಲಾಗಿದೆ.

ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಸಣ್ಣದಾಗಿ ಹಾನಿಗೊಳಗಾಗಿದೆ. ಪ್ರತಿಮೆ ಅನಾವರಣಗೊಳಿಸಿದ ಎರಡೇ ದಿನದಲ್ಲಿ ಈ ಅನಾಹುತ ಸಂಭವಿಸಿದ್ದು, ಸಂಘಟಕರು ಕೂಡಲೇ ಅದನ್ನು ತೆರವುಗೊಳಿಸಿ ದುರಸ್ತಿಗೊಳಿಸಿ ಮರುಸ್ಥಾಪನೆ ಮಾಡಿದ್ದಾರೆ.

ಘಟನೆಯನ್ನು ಒಪ್ಪಿಕೊಂಡ ವಸ್ತು ಸಂಗ್ರಹಾಲಯದ ಅಧಿಕಾರಿಗಳು, ಕಿವಿಯ ಬಳಿ ಸ್ವಲ್ಪ ಹಾನಿಯಾಗಿತ್ತು. ಕೂಡಲೇ ತೆರವುಗೊಳಿಸಿ, ಸರಿಪಡಿಸಲಾಗಿದೆ. ಈಗ ಮತ್ತೆ ಪ್ರದರ್ಶನಕ್ಕಿಡಲಾಗಿದೆ ಎಂದು ತಿಳಿಸಿದರು.

Next Story

RELATED STORIES