Top

ನಾನು ಆಗ್ಲೆ ಹೇಳಿದ್ದೆ.. ನೋಡಿ ಈಗ ಏನು ಮಾಡಿದ್ದಾರೆ..!

ನಾನು ಆಗ್ಲೆ ಹೇಳಿದ್ದೆ.. ನೋಡಿ ಈಗ ಏನು ಮಾಡಿದ್ದಾರೆ..!
X

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್​ಎಸ್​ಎಸ್ ಆಹ್ವಾನ ಮನ್ನಿಸಿ ನಾಗ್ಪುರದ ಕಾರ್ಯಕ್ರಮಕ್ಕೆ ತೆರಳಿದ್ದರು. ಇದೀಗ ಪ್ರಣಬ್ ಮುಖರ್ಜಿ ಅವರ ನೈಜ ಫೋಟೋ ಬದಲಿಸಿ ಆರ್​ಎಸ್​ಎಸ್​ ಕಾರ್ಯಕರ್ತರಂತೆ ನಮಸ್ಕರಿಸುತ್ತಿರುವ ನಕಲಿ ಫೋಟೋವೊಂದು ಈಗ ವೈರಲ್ ಆಗಿದೆ.

ಆರ್​ಎಸ್ಎಸ್ ಕಾರ್ಯಕ್ರಮಕ್ಕೆ ಹೋಗಬೇಡಿ. ಅವರ ತಂತ್ರಗಳಿಗೆ ಬಲಿಯಾಗಬೇಡಿ ಎಂದು ಪುತ್ರಿ ಶ್ರಮಿಷ್ಠ ಮುಖರ್ಜಿ ಎಂದು ಸಲಹೆ ನೀಡಿದ್ದರು. ಆದರೆ ಪ್ರಣಬ್ ಮುಖರ್ಜಿ ನಾಗ್ಪುರದಲ್ಲಿನ ಆರ್​ಎಸ್​ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದ್ದೂ ಅಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ಕೆಲವೇ ಗಂಟೆಗಳಲ್ಲಿ ಆರ್​ಎಸ್​ಎಸ್ ಕಾರ್ಯಕರ್ತರಂತೆ ಪ್ರಣಬ್ ನಮಸ್ಕರಿಸುತ್ತಿರುವ ನಕಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಆರ್​ಎಸ್​ಎಸ್​ ಮತ್ತು ಬಿಜೆಪಿಯ ಕೀಳುಮಟ್ಟದ ಪ್ರಚಾರ ತಂತ್ರ ಇದು ಎಂದು ಪ್ರಣಬ್ ಪುತ್ರಿ ಶ್ರಮಿಷ್ಠ ಮುಖರ್ಜಿ ಆರೋಪಿಸಿದ್ದಾರೆ.

Next Story

RELATED STORIES