Top

ವಾರ್ ಗೆ ತೆರೆ ಎಳೆದ ರಾಕಿಂಗ್ ಸ್ಟಾರ್..!

ವಾರ್ ಗೆ ತೆರೆ ಎಳೆದ ರಾಕಿಂಗ್ ಸ್ಟಾರ್..!
X

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಯಶ್- ಸುದೀಪ್ ಫ್ಯಾನ್ಸ್ ವಾರ್ ಗೆ ನಟ ಯಶ್ ತೆರೆ ಎಳೆದಿದ್ದಾರೆ. ಫೇಸ್ ಬುಕ್ ಮೂಲಕ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ ಯಶ್, ಇದನ್ನು ಇಷ್ಟಕ್ಕೆ ಬಿಟ್ಟುಬಿಡಿ, ನನಗೆ ಗೌರವ ತೋರುವ ನಿಟ್ಟಿನಲ್ಲಿ ಸುದೀಪ್‌ರನ್ನ ಅಗೌರವದಿಂದ ಕಾಣಬೇಡಿ ಎಂದಿದ್ದಾರೆ.

ಅಲ್ಲದೇ ನಾನು ಸರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟಂತಲ್ಲ, ಹಾಗೆಯೇ ಸರ್ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಡಿಮೆಯಾದಂತಲ್ಲ, ನಾನು ಅವರನ್ನು ತುಂಬಾ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

https://www.youtube.com/watch?v=YuKFk9zH-2I

ಕೆಲ ದಿನಗಳ ಹಿಂದೆ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಚಾಲೆಂಜ್ ವಿವಾದ ಸೃಷ್ಟಿಸಿತ್ತು. ಸುದೀಪ್ ನೀಡಿದ್ದ ಚಾಲೆಂಜ್ ಆಕ್ಸೆಪ್ಟ್ ಮಾಡಿದ್ದ ಯಶ್, ವಿಡಿಯೋನಲ್ಲಿ ಹಾಯ್ ಸುದೀಪ್ ಎಂದಿದ್ದರು. ಈ ಕಾರಣಕ್ಕೆ ಸುದೀಪ್ ಫ್ಯಾನ್ಸ್, ಸುದೀಪ್‌ರನ್ನು ಏಕವಚನದಲ್ಲಿ ಮಾತನಾಡಿಸಿದ್ದು ತಪ್ಪು.ಅವರಲ್ಲಿ ಕ್ಷಮೆ ಕೇಳಿ ಎಂದು ಹೇಳಿದ್ದರು.ಹೀಗೆ ಯಶ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಮುಂದುವರೆದ ಕಾರಣಕ್ಕೆ, ಯಶ್ ಮನವಿ ಮಾಡುವ ಮೂಲಕ ಈ ವಾರ್ ಗೆ ತೆರೆ ಎಳೆದಿದ್ದಾರೆ.

Next Story

RELATED STORIES