Top

490 ರನ್ ಪೇರಿಸಿ ಕಿವೀಸ್ ವಿಶ್ವದಾಖಲೆ: ಪುರುಷರ ದಾಖಲೆ ಮೀರಿದ ವನಿತೆಯರು

490 ರನ್ ಪೇರಿಸಿ ಕಿವೀಸ್ ವಿಶ್ವದಾಖಲೆ: ಪುರುಷರ ದಾಖಲೆ ಮೀರಿದ ವನಿತೆಯರು
X

ಪುರುಷರಿಗಿಂತ ನಾವು ಎಷ್ಟೋ ಮೇಲು ಎಂದು ಮಹಿಳೆಯರು ಸಾಧಿಸಿ ತೋರಿಸುತ್ತಲೇ ಬಂದಿದ್ದಾರೆ. ಇದೀಗ ಕ್ರಿಕೆಟ್​ನಲ್ಲೂ ಪುರುಷರೂ ಮಾಡಲಾಗದ ದಾಖಲೆಯನ್ನು ವನಿತೆಯರು ಮಾಡಿ ವಿಶ್ವದಾಖಲೆ ಮೆರೆದಿದ್ದಾರೆ.

[story-lines]

ಹೌದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 4 ವಿಕೆಟ್​ಗೆ 490 ರನ್ ದಾಖಲಿಸಿದ ನ್ಯೂಜಿಲೆಂಡ್ ವನಿತೆಯರ ತಂಡ ವಿಶ್ವದಾಖಲೆ ಬರೆದಿದೆ. ಡಬ್ಲಿನ್​ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಈ ಸಾಧನೆ ಮಾಡಿದೆ.

ನ್ಯೂಜಿಲೆಂಡ್ ತಂಡದ ನಾಯಕಿ ಸೂಜಿ ಬ್ಯಾಟ್ಸ್ 151 ರನ್ ಸಿಡಿಸಿ ಈ ದಾಖಲೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಸೂಜಿ 94 ಎಸೆತಗಳಲ್ಲಿ 24 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಮ್ಯಾಡಿ ಗ್ರೀನ್ 77 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 121 ರನ್​ ಗಳಿಸಿದರು.

ಇದಕ್ಕೂ ಮುನ್ನ ಇದೇ ನ್ಯೂಜಿಲೆಂಡ್ ವನಿತೆಯರು 21 ವರ್ಷಗಳ ಹಿಂದೆ ಪಾಕಿಸ್ತಾನ ವಿರುದ್ಧ 5 ವಿಕೆಟ್​ಗೆ 455 ರನ್ ಗಳಿಸಿತ್ತು. ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ 3 ವಿಕೆಟ್​ಗೆ 444 ರನ್ ಗಳಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

Next Story

RELATED STORIES