Top

ಪ್ರಧಾನಿ ಮೋದಿ ಹತ್ಯೆಗೆ ಸಂಚು : ಪುಣೆ ಪೊಲೀಸರಿಂದ ಸ್ಪೋಟಕ ಮಾಹಿತಿ ಬಹಿರಂಗ.!

ಪ್ರಧಾನಿ ಮೋದಿ ಹತ್ಯೆಗೆ ಸಂಚು : ಪುಣೆ ಪೊಲೀಸರಿಂದ ಸ್ಪೋಟಕ ಮಾಹಿತಿ ಬಹಿರಂಗ.!
X

[story-lines]

ಪುಣೆ : ಇಡೀ ದೇಶವೇ ಬೆಚ್ಚಿ ಬೀಳಿಸುವಂತ ಸುದ್ದಿಯೊಂದು ಬಹಿರಂಗವಾಗಿದೆ. ದೇಶದ ಪ್ರಧಾನಿ, ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪುಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಹತ್ಯೆಗೆ ಸಂಚು ರೂಪಿಸಿ ಬರೆದಿದ್ದ, ಪತ್ರ ಪುಣೆ ಪೊಲೀಸರಿಗೆ ಲಭ್ಯವಾಗಿದೆ. ಕಳೆದ ಬುಧವಾರ ನಿಷೇಧಿತ ನಕ್ಸಲ್‌ ಸಂಘಟನೆ ಮಾವೋಯಿಸ್ಟ್ ಜೊತೆಗೆ ಸಂಬಂಧ ಹೊಂದಿದ್ದಾರೆ ಎನ್ನುವ ಆಧಾರದ ಮೇಲೆ ಐವರನ್ನು ಬಂಧಿಸಲಾಗಿತ್ತು. ಈ ಬಂಧಿತರಿಂದ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪತ್ರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಪತ್ರದಲ್ಲಿ ರಾಜೀವ್‌ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಡ್‌ ಶೋ ವೇಳೆ ಕೊಲ್ಲುವ ಸಂಚು ರೂಪಿಸಿರುವ ವಿಷಯ ಪ್ರಸ್ತಾಪಿಸಲಾಗಿದೆ. ಈ ಪತ್ರವನ್ನು ಪುಣೆಯ ಪೊಲೀಸರು ಸೆಷನ್‌ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಅಂದಹಾಗೇ ಎಲ್ಗರ್ ಪರಿಷದ್‌ ಎಂಬುವರೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಭೀಮ ಕೊರೆಗಾನ್‌ ಕೋಸ್ಟ್‌ ರಾಯಿಟ್ಸ್ ಜಿಲ್ಲೆಯಲ್ಲಿ ಮುಂಬೈನ ಸುದೀರ್ ಧವಾಲೇ, ದೆಹಲಿಯ ರೋನಾ ಜಾಕಬ್, ವಕೀಲ ಸುರೇಂದ್ರ ಗಾಡ್ಲಿಂಗ್, ಸೋಮಸೇನ್ ಮತ್ತು ನಾಗಪುರದ ಮಹೇಶ್ ರಾವೋತ್ ಎಂಬುವರನ್ನು ಬಂಧಿಸಲಾಗಿತ್ತು.

ಈ ಬಂಧಿತ ಆರೋಪಿಗಳನ್ನು ಕಳೆದ ನಿನ್ನೆ ಪುಣೆಯ ಸೆಷನ್‌ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಪುಣೆಯ ಸೆಷನ್‌ ಕೋರ್ಟ್‌ ಆರೋಪಿಗಳನ್ನು ಜೂನ್‌ 14ರ ವರೆಗೆ ಪೊಲೀಸರ ಬಂಧನಕ್ಕೆ ನೀಡಿ ಆದೇಶಿಸಿತ್ತು. ಅಂದಹಾಗೇ, ಕೋರ್ಟ್‌ಗೆ ಹಾಜರುಪಡಿಸುವ ಮುನ್ನಾ ವಕೀಲ ಉಜ್ಜಲ್‌ ಪವಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪತ್ರ ರೋನಾ ಜಾಕಬ್ ವಿಲ್ಸನ್‌ ಎಂಬುವರಿಂದ ದೆಹಲಿಯ ಮನಿಕರ್‌ನಲ್ಲಿರುವ ಡಿಡಿಎ ಪ್ಲಾಟ್‌ನಲ್ಲಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಮೂಲಗಳು ಕೂಡ ಮಾಹಿತಿ ಬಿಚ್ಚಿಟ್ಟಿದ್ದು, ಮೋದಿ ಇತ್ತೀಚಿಗೆ 15 ರಾಜ್ಯಗಳಲ್ಲಿ ಕೇಸರಿ ಆಡಳಿತ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಹೀಗೆ ಮುಂದುವರೆದರೇ, ದೇಶದಲ್ಲಿ ಮಾವೋಯಿಸ್ಟ್ ಕಾರ್ಯಚಟುವಚಿಕೆಗೆ ಬ್ರೇಕ್‌ ಬೀಳಲಿದೆ. ಹೀಗಾಗಿ ಮೋದಿಯವರನ್ನು ರಾಜೀವ್‌ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಕೊಲ್ಲಲು ಸಂಚು ರೂಪಿಸಿರುವ ಬಗ್ಗೆ ಪ್ರಸ್ತಾಪಿಸಲಾಗಿರುವು ಬಗ್ಗೆ ಪತ್ರದಲ್ಲಿ ಉಲ್ಲೇಖವಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಅಂದಹಾಗೇ, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿರುವ ಮಾವೋಯಿಸ್ಟ್‌ ಮತ್ತು ನಕ್ಸಲ್‌ ಪಡೆಗಳು ಇದಕ್ಕಾಗಿ ಎಂ 4 ರೈಫಲ್‌ ಖರೀದಿಸುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆಯಂತೆ. ಇದಕ್ಕಾಗಿ ಸುಮಾರು 8 ಕೋಟಿಯಷ್ಟು ಹಣವನ್ನು ಕಲೆಹಾಕುವ ಚಿಂತನೆಯ ಪ್ರಸ್ತಾಪವನ್ನು ಉಲ್ಲೇಖಿಸಲಾಗಿದೆ ಎಂಬ ಸ್ಪೋಟಕ ಮಾಹಿತಿ ಇದೆ ಎಂದು ತಿಳಿದು ಬಂದಿದೆ.

Next Story

RELATED STORIES