Top

ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಸರಗಳ್ಳಿಯರ ಕಾಟ

ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಸರಗಳ್ಳಿಯರ ಕಾಟ
X

[story-lines]

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಷ್ಟು ದಿನ ಸರಗಳ್ಳರ ಕಾಟವಿತ್ತು. ಆದರೆ ಈಗ ಸರಗಳ್ಳಿಯರ ಕಾಟ ಶುರುವಾಗಿದೆ. ಅಡ್ರೆಸ್ ಕೇಳೋ ನೆಪದಲ್ಲಿ ಬಂದ ಚಾಲಾಕಿ ಸರಗಳ್ಳಿ, ವ್ಯಕ್ತಿಯ ಸರವನ್ನ ಕದ್ದೊಯ್ದಿದ್ದಾಳೆ.

ಇಂದಿರಾನಗರದ 100ಫೀಟ್ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಹೈ ಫೈ ಬಟ್ಟೆ ಧರಿಸಿದ ಯುವತಿ, ಮೊಬೈಲ್ ನಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಚೇತನ್ ಎಂಬುವರ ಬಳಿ ಅಡ್ರೆಸ್ ಕೇಳಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಚೇತನ್ ಸೀಟ್ ಬೆಲ್ಟ್ ಹಾಕೊಂಡು ರೋಡ್ ಸೈಡ್ ಗ್ಲಾಸ್ ಇಳಿಸಿ, ಮೊಬೈಲ್‌ನಲ್ಲಿ ಮಾತನಾಡುತ್ತಾ, ಅಡ್ರೆಸ್ ಹೇಳುತ್ತಿದ್ದಂತೆ ಸರ ಕದ್ದು ಆಟೋದಲ್ಲಿ ಎಸ್ಕೇಪ್ ಆಗಿದ್ದಾಳೆ.

ಸೀಟ್ ಬೆಲ್ಟ್ ಹಾಕಿದ್ದ ಹಿನ್ನಲೆ ತಕ್ಷಣ ಕಾರಿಂದ ಇಳಿಯಲಾಗದೆ ಚೇತನ್ ಪರದಾಡಿದ್ದು, ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Next Story

RELATED STORIES