ಮೊದಲ ದಿನವೇ 50 ಕೋಟಿ ಬಾಚಿದ ಕಾಲಾ: ಕಬಾಲಿ ದಾಖಲೆ ಮುರಿಯಲಿಲ್ಲ!
ರಜನಿಕಾಂತ್ ಚಿತ್ರಗಳೆಂದರೆ ಹಾಗೆ ಬಿಡುಗಡೆಯ ಮುನ್ನ ಎಷ್ಟು ಸುದ್ದಿ ಮಾಡುತ್ತೋ, ಬಿಡುಗಡೆ ನಂತರ ಅದಕ್ಕಿಂತ ದೊಡ್ಡ ಸುದ್ದಿ ಮಾಡುತ್ತೆ. ಈ ಬಾರಿ ಕೂಡ ಪಾ ರಂಜಿತ್ ನಿರ್ದೇಶನದಲ್ಲಿ ಸತತ ಎರಡನೇ ಚಿತ್ರವೂ ಕೂಡ ಸುದ್ದಿ ಮಾಡುತ್ತಿದೆ.
ಕರ್ನಾಟಕದ ಬಹುತೇಕ ಬಿಡುಗಡೆಗೆ ಅಡ್ಡಿಯಾಗಿದ್ದರೂ ರಜನಿಕಾಂತ್ ಅವರ ಕಾಲಾ ಚಿತ್ರ ಮೊದಲ ದಿನವೇ ಸುಮಾರು 50 ಕೋಟಿ ರೂ. ಬಾಚಿಕೊಂಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಏರಿಕೆಯ ಸೂಚನೆ ನೀಡಿದೆ.
ಕಾಲಾ 50 ಕೋಟಿ ರೂ. ಬಾಚಿದರೂ ಈ ಹಿಂದಿನ ಕಬಾಲಿ ಚಿತ್ರದ ದಾಖಲೆ ಮುರಿಯಲು ವಿಫಲವಾಗಿದೆ. ಪಾ ರಂಜಿತ್ ನಿರ್ದೇಶನದ ಕಬಾಲಿ ಮೊದಲ ದಿನವೇ 87.5 ಕೋಟಿ ರೂ. ಬಾಚಿಕೊಂಡು ದಾಖಲೆ ಬರೆದಿತ್ತು.
ಕಾಲಾ ಚಿತ್ರದ ತಮಿಳುನಾಡು, ಆಂಧ್ರಪ್ರದೇಶ ಗಳಿಕೆ ಕಬಾಲಿಗಿಂತ ಹೆಚ್ಚಾಗಿದೆ. ಆದರೆ ಕರ್ನಾಟಕ, ಕೇರಳ, ಮುಂಬೈ ಹಾಗೂ ವಿದೇಶಗಳಲ್ಲಿ ಚಿತ್ರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದರಿಂದ ಮೊದಲ ದಿನ ಗಳಿಕೆ ಇಳಿದಿದ್ದರೂ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.