Top

ಸಚಿನ್ ಪುತ್ರ ಅರ್ಜುನ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲದ ವಿಷಯ ಇಲ್ಲಿದೆ...

ಸಚಿನ್ ಪುತ್ರ ಅರ್ಜುನ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲದ ವಿಷಯ ಇಲ್ಲಿದೆ...
X

ಅರ್ಜುನ್ ತೆಂಡುಲ್ಕರ್ ಅಂದಕೂಡಲೇ ಎಲ್ಲರಿಗೂ ನೆನಪಿಗೆ ಬರುವುದು ಸಚಿನ್ ತೆಂಡುಲ್ಕರ್ ಪುತ್ರ ಅಂತ. ಇದೀಗ 19 ವರ್ಷದೊಳಗಿನವರ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಆದರೆ ಆತನನ್ನು ಹತ್ತಿರದಿಂದ ಬಲ್ಲವರು ಅಚ್ಚರಿ ಏನಲ್ಲ ಎನ್ನುತ್ತಾರೆ.

  • ಶ್ರೀಲಂಕಾ ವಿರುದ್ಧದ ಕಿರಿಯರ ಕ್ರಿಕೆಟ್​ಗೆ ಅರ್ಜುನ್ ತೆಂಡುಲ್ಕರ್ ಆಯ್ಕೆಯಾಗಿರುವುದು ಬ್ಯಾಟ್ಸ್​ಮನ್ ಆಗಿ ಅಲ್ಲ. ಬದಲಿಗೆ ಆಲ್​ರೌಂಡರ್ ಆಗಿ. ವೇಗದ ಬೌಲರ್ ಮತ್ತು ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟ್ಸ್​ಮನ್​ ಆಗಿ ಜಾಗ ಪಡೆದಿದ್ದಾರೆ.
  • ಅರ್ಜುನ್ ವೇಗದ ಎಡಗೈ ಬೌಲರ್​ ಆಗಿದ್ದು, ಸರಾಸರಿ 135 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 25 ವರ್ಷದೊಳಗಿನವರ ತಂಡದಲ್ಲಿ ಧರ್ಮಶಾಲಾದಲ್ಲಿ ಒಂದು ತಿಂಗಳಿನಿಂದ ತರಬೇತಿ ಪಡೆದಿದ್ದಾರೆ.
  • ಪುಣೆಯ ಮೂರನೇ ಹಂತದ ಕೋಚ್​ ಅತುಲ್ ಗಾಯಕ್ವಾಡ್ ಅವರ ಗರಡಿಯಲ್ಲಿ ಅರ್ಜುನ್ ತರಬೇತಿ ಪಡೆದಿದ್ದಾನೆ. ಬ್ಯಾಟಿಂಗ್​ನಲ್ಲಿ ಸ್ವತಃ ಸಚಿನ್ ತರಬೇತಿ ನೀಡಿದ್ದಾರೆ. ವಿದರ್ಭ ತಂಡದ ಸುಬ್ರತೊ ಬ್ಯಾನರ್ಜಿ ಕೂಡ ಕೋಚಿಂಗ್ ನೀಡಿದ್ದಾರೆ.
  • ಅರ್ಜುನ್​ಗೆ ತಂದೆ ಸಚಿನ್ ಬ್ಯಾಟಿಂಗ್ ಆದರ್ಶವಲ್ಲ. ಬದಲಿಗೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ ಮತ್ತು ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್​ರಂತೆ ಒಳ್ಳೆಯ ಬೌಲರ್ ಆಗುವ ಕನಸು ಕಂಡಿದ್ದಾರೆ.
  • ಇಂಗ್ಲೆಂಡ್​ನ ಲಾರ್ಡ್ಸ್​, ಶ್ರೀಲಂಕಾದ ಕೊಲಂಬೊ ಸೇರಿದಂತೆ ಜಗತ್ತಿನ ನಾನಾ ಕಡೆ ಬೌಲಿಂಗ್ ತರಬೇತಿ ಪಡೆದಿದ್ದಾರೆ. ಪಾಕಿಸ್ತಾನದ ದಂತಕತೆ ವಾಸಿಂ ಅಕ್ರಂ ಕೂಡ ಅರ್ಜುನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೌಲಿಂಗ್​ ಜೊತೆ ಫಿಟ್ನೆಸ್​ ಹಾಗೂ ಬೌಲಿಂಗ್ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ.
  • ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಭಾರತ ಮಹಿಳಾ ತಂಡಗಳಿಗೆ ಅರ್ಜುನ್ ಬೌಲಿಂಗ್ ಮಾಡಿದ್ದಾರೆ.

Next Story

RELATED STORIES