Top

#Tv5 ViralReal ಜೇನುತುಪ್ಪ ಕೂದಲಿಗೆ ಹಚ್ಚಿದ್ರೇ ಬಿಳಿ ಆಗುತ್ತಾ.?

#Tv5 ViralReal ಜೇನುತುಪ್ಪ ಕೂದಲಿಗೆ ಹಚ್ಚಿದ್ರೇ ಬಿಳಿ ಆಗುತ್ತಾ.?
X

ಇದು ವೈರಲ್ ಸುದ್ದಿಯ ರಿಯಲ್ ಕತೆ : ಜೇನು ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ. ಇದು ಎಲ್ಲರಿಗೂ ತಿಳದ ವಿಚಾರ ಕೂಡ. ಆದ್ರೇ ಜೇನುತುಪ್ಪದಿಂದ ಆಗೋ ಹಲವು ಉಪಯೋಗಗಳು ಕೆಲವರಿಗೆ ಗೊತ್ತೇ ಇರೋದಿಲ್ಲ. ಲಾಭ ಅಷ್ಟೇ ಅಲ್ಲದೇ ಜೇನುತುಪ್ಪದಿಂದ ಅನೇಕ ನಷ್ಟ ಕೂಡ ಇದೆ. ಅದ್ರಲ್ಲಿ ಒಂದು ಜೇನುತುಪ್ಪ ತಲೆಗೆ ಹಚ್ಚಬೇಡಿ. ಹಚ್ಚಿಕೊಂಡ್ರೇ, ಕೂದಲು ಬೆಳ್ಳಗಾಗುತ್ತೆ ಅನ್ನೋದು. ಹಾಗಾದ್ರೇ ಜೇನುತುಪ್ಪ ತಲೆಗೆ ಹಚ್ಚಿಕೊಂಡ್ರೇ, ಕೂದಲು ಬಿಳಿ ಆಗುತ್ತಾ.? ಸತ್ಯ ಏನು ಅಂತ ಮುಂದೆ ಓದಿ..

ದೇಹಕ್ಕೆ ಜೇತನ ನೀಡುವ ಶಕ್ತಿ ಜೇನುತುಪ್ಪಕ್ಕೆ ಇದೆ

ಜೇನುತುಪ್ಪ...! ಜೀವಾಮೃತವೆಂದೇ ಕರೆಯಲಾಗುವ ದ್ರವರೂಪದ ಶಕ್ತಿ ವರ್ಧಕ. ಇಂತಹ ಜೇನಿನಲ್ಲಿ ಸಾಕಷ್ಟು ಷೋಷಕಾಂಶಗಳು ಇರುತ್ತಾವೆ. ಕೊಬ್ಬು, ನಾರು, ಪ್ರೋಟೀನ್, ವಿಟಮಿನ್‌ ಸಿ, ಕಬ್ಬಿಣ ಹಾಗೂ ಇತರೆ ಶರ್ಕರಗಳು ಹೇರಳವಾಗಿ ಜೇನುತುಪ್ಪ ಸೇವಿಸೋದ್ರಿಂದ, ನಿಮ್ಮ ದೇಹಕ್ಕೆ ಸಿಗ್ತಾವೆ...

ನೀವು ಜೇನುತುಪ್ಪವನ್ನು ಪ್ರತಿದಿನ ಸೇವಿಸುತ್ತಾ ಹೋದಂತೆ ಅನೇಕ ಪ್ರಯೋಜನಗಳಿವೆ. ಅದ್ರಲ್ಲೂ ಜೇನಿನ ಸೇವನೆಯಿಂದ ನಿಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಧುಮೇಹ ರೋಗಿಗಳನ್ನು ಹೊರತು ಪಡಿಸಿದ್ರೇ, ಇದನ್ನು ಎಲ್ಲರೂ ಸೇವಿಸಬಹುದು ಎನ್ನುತ್ತಾರೇ ಅನೇಕ ಪರಿಣಿತರು...

ಜೇನುತುಪ್ಪ ಹಚ್ಚಿದ್ರೇ ಮುಖದ ಕಾಂತಿ ಹೆಚ್ಚುತ್ತದೆ

ಇನ್ನೂ ಜೇನುತುಪ್ಪವನ್ನು ಚರ್ಮದ ಕಾಂತಿಗೆ, ಮುಖದ ಸೌಂದರ್ಯ ಹೆಚ್ಚು ಮಾಡಿಕೊಂಡು, ಗ್ಲಾಮರ್ ಆಗಿ ಕಾಣೋಕೆ ಅನೇಕ ಹೆಂಗಳೆಯರು ಬಳಸುತ್ತಾರೆ. ದಿನವೊಂದಕ್ಕೋ, ವಾರಕ್ಕೊ ಒಮ್ಮೆ ಜೇನುತುಪ್ಪದಿಂದ ಮುಖಕ್ಕೆ ಮಸಾಜ್ ಮಾಡ್ತಾರೆ. ಈ ಮೂಲಕ ಮುಖದ ಕಾಂತಿಯನ್ನು ಹೆಚ್ಚಿಸಿಕೊಂಡು, ಸುಂದರವಾಗಿ ಕಾಣುವಂತಾಗುತ್ತದೆ...

ಜೇನುತುಪ್ಪ ಕೆಮ್ಮು ನಿವಾರಿಸುತ್ತದೆ.!

ಇಂತಹ ಪ್ರಯೋಜನವಲ್ಲದೇ, ಬಾಯಿಹುಣ್ಣು, ಮಲಬದ್ದತೆ, ಚರ್ಮವ್ಯಾಧಿಗಳಿಗೆ, ಮೂತ್ರ ಸಂಬಂಧಿ ಸಮಸ್ಯೆಗೆ ಜೇನುತುಪ್ಪ ಮನೆಯಲ್ಲಿನ ಸಿದ್ದ ಔಷಧ. ಕೆಮ್ಮು, ಗಂಟಲು ಸಂಬಂಧಿಸಿದ ರೋಗಕ್ಕೂ ಜೇನು ಪರಿಹಾರ. ನೆಗಡಿ, ಕೆಮ್ಮು, ಮೂಗು ಕಟ್ಟೋದಕ್ಕೂ ಜೇನುತುಪ್ಪದ ಸೇವನೆ, ರಾಮಬಾಣ.

ಹೌದು ವೀಕ್ಷಕರೇ, ಜೇನುತುಪ್ಪಕ್ಕೆ ನಿಮ್ಮನ್ನು ಅತಿಯಾಗಿ ಕಾಡಿಸುವ ಕೆಮ್ಮು ನಿವಾರಿಸುವ ಶಕ್ತಿ ಇದೆ. ಅಲ್ಲದೇ ಶ್ವಾಸಕೋಶ ಸಂಬಂಧಿ ಸೋಂಕುಗಳನ್ನು ಪರಿಹಾರ ಮಾಡುವ ಶಕ್ತಿ ಇದೆಯಂತೆ. ಹೀಗಾಗಿ ಕೆಮ್ಮಿನಿಂದ ಬಳಲುತ್ತಾ ಇರೋರು ಜೇನುತುಪ್ಪ ಸೇವನೆ ಮಾಡಿ. ಈ ಮೂಲಕ ನಿಮ್ಮ ಕೆಮ್ಮು ಕಡಿಮೆ ಆಗುತ್ತೆ ಅಂತಾರೆ ಹಿರಿಯರು. ಹೀಗೆ ಜೇನುತುಪ್ಪ ಸೇವನೆ ಮಾಡಿದರೇ, ನಿಮ್ಮ ಕೆಮ್ಮು ಕಡಿಮೆಯಾಗುತ್ತದೆ ಅಂತ ಹಿಂದಿನ ಕಾಲದಿಂದಲೂ ನಂಬಿಕೆ...

inside beehive

ಮಾರಣಾಂತಿಕ ಬ್ಯಾಕ್ಟೀರಿಯಾ, ಶಿಲೀಂದ್ರ ವಿರೋಧಿಯಾಗಿ ಕೆಲಸ ಮಾಡುತ್ತೆ

ಇನ್ನೂ ಮನುಷ್ಯರನ್ನು ಕಾಡುವ ಸೋಂಕುಗಳ ವಿರುದ್ದ ಹೋರಾಡುವ ಶಕ್ತಿ, ಜೀನಿಗೆ ಇದೆ. ಮಾರಣಾಂತಿಕ ಕಾಯಿಲೆಯಿಂದ ನಿಮ್ಮನ್ನು ಕಾಪಾಡುತ್ತದೆ ಜೇನುತುಪ್ಪದ ಸೇವನೆ. ಅದ್ರಲ್ಲೂ, ಮನುಷ್ಯನಿಗೆ ಮಾರಣಾಂತಿಕವಾಗಿ ಕಾಡುವ ಬ್ಯಾಕ್ಟೀರಿಯಾ, ಶಿಲೀಂದ್ರಗಳ ಸಮಸ್ಯೆಗೆ ವಿರೋಧಿಯಾಗಿ ಕೆಲಸ ಮಾಡುತ್ತದೆ. ಈ ಮೂಲಕ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ದೇಹ ರೋಗಗಳ ವಿರುದ್ದ ಸಕ್ರೀಯವಾಗಿ ಹೋರಾಡುವಂತೆ ಮಾಡುತ್ತದೆ ಜೇನುತುಪ್ಪ...

ತೂಕ ಇಳಿಕೆಗೆ ಮನೆ ಮದ್ದು ಜೇನುತುಪ್ಪ ಸೇವನೆ

ಈ ಗುಣವಲ್ಲದೇ ನೀವು ನಿಶ್ಯಕ್ತಿಯಿಂದ ಬಳಲುತ್ತಾ ಇದ್ದಾಗ, ಜೇನುತುಪ್ಪವನ್ನು ಒಂದು ಸ್ಪೂನ್‌ ಅಷ್ಟು ತಿಂದ್ರೇ ಸಾಕು, ತಕ್ಷಣವೇ ಉತ್ತೇಜನ ನಿಮ್ಮ ದೇಹಕ್ಕೆ ದೊರೆಯುತ್ತದೆ. ಇನ್ನೂ ಬೊಜ್ಜಿನಿಂದ ಬಳಲುತ್ತಿರುವವರಿಗೆ ಅಂಗೈನಲ್ಲಿನ ಮದ್ದು, ಜೇನುತುಪ್ಪದ ಸೇವನೆ. ಈ ಜೇನುತುಪ್ಪವನ್ನು ಪ್ರತಿನಿತ್ಯ ಸೇವಿಸುತ್ತಾ ಹೋದಹಾಗೇ, ನಿಮ್ಮ ಬೊಜ್ಜು ಕರಗಿ, ಸ್ಲೀಂ ಆಗ್ತೀರಿ. ಹೀಗಂತ ಅನೇಕ ವೈದ್ಯರು ಕೂಡ ಜೇನಿನ ಸೇವನೆಯ ಸಲಹೆ ಮಾಡ್ತಾರೆ...

ಹೀಗೆ ಜೇನುತುಪ್ಪದ ಅನೇಕ ಪ್ರಯೋಜನ ನಿಮಗೆ ಆದ್ರೂ, ಅಷ್ಟೇ ಮಾರಕ ತೊಂದರೆ ಜೇನಿನಿಂದ ಇದೆ. ಆ ತೊಂದರೇ ಹಿಂದಿನಿಂದಲೂ ಹಿರಿಯರೂ ಹೇಳುತ್ತಾ ಬರ್ತಾ ಇದ್ದಾರೆ. ಅದೇ ಅದೇ ಜೇನುತುಪ್ಪ ತಲೆಯ ಕೂದಲಿಗೆ ಸೋಂಕದಂತೆ ಬಳಸಬೇಕು. ತಲೆಗೆ ಏನಾದರೂ ಸೋಂಕಿದ್ರೇ, ನಿಮ್ಮ ಕೂದಲು ಬಿಳಿ ಆಗುತ್ತದೆ. ಸೋ ಎಚ್ಚರಿಕೆ ಇರಲಿ ಅಂತ ಸಾರಿ ಸಾರಿ ಹೇಳ್ತಾರೆ....

ಜೇನುತುಪ್ಪ ಕೂದಲಿಗೆ ಹಚ್ಚಿದ್ರೇ ಬಿಳಿ ಆಗುತ್ತಾ.?

ಹಿರಿಯ ಮಾತಿನ ನೆನಪು ನಿಮಗೆ ಹಿಂದಿನಿಂದಲೂ ನೆನಪಿದೆ. ಈ ನಿಟ್ಟಿನಲ್ಲಿ ರಂಗು ರಂಗಿನ ಬದುಕಿನ ರಂಗದಲ್ಲಿ, ರಂಗಾಗಿ ಕಾಣಬೇಕು ಅಂತ ನಾವು ನೀವೆಲ್ಲಾ ಬಯಸುತ್ತೀರಿ. ಲಿವಿಂಗ್ ಸ್ಟೈಲ್‌ನಲ್ಲೂ ಬದಲಾವಣೆ ಮಾಡಿಕೊಂಡು, ಅಂದವಾಗಿ ನೋಡುಗರನ್ನು ಸೆಳೆಯುತ್ತಾ ಓಡಾಡುತ್ತೇವೆ. ಸೌಂದರ್ಯ ನಿಂತ ನೀರಲ್ಲ. ಇದು ವಯೋ ಸಹಜ ಮಾನವಾಗಿ ಬದಲಾಗುವ ಚರ್ಯೆ. ವಯಸ್ಸಾದಂತೆ ದೇಹ ಮಾಸುತ್ತಾ ಹೋಗುತ್ತದೆ. ಸೌಂದರ್ಯ ಸುಕ್ಕು ಗಟ್ಟಿ, ಮಾಗಿ, ಹಣ್ಣಾಗುತ್ತದೆ...

ಬ್ಯೂಸಿ ಲೈಫ್‌ನಲ್ಲಿ, ಕೂದಲು ಬಿಳಿ ಆಗೋದು ಮಾಮೂಲಿ. ನಾವು ಇಂದು ತಿನ್ನುತ್ತಿರುವ ಆಹಾರ, ಜೀವನ ಕ್ರಮ ಇದಕ್ಕೆಲ್ಲ ಕಾರಣವಾಗಿದೆ. ಜೊತೆಗೆ ಇಂದು ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಕೂದಲು ಬೆಳ್ಳಗಾಗೋದು ಇಂದು ಕಾಮನ್. ಇದಕ್ಕೆ ಕಾರಣ, ಇಂದಿನ ಬದುಕಿನ ಕ್ರಮ ಎಂದಾದರೂ, ಅಷ್ಟೇ ವಂಶಾಣುಗಳಲ್ಲಿನ ವತ್ಯಾಸ ಕೂಡ ಕಾರಣವಾಗ್ತಾ ಇದೆ ಎಂದು ಆತಂಕ ವ್ಯಕ್ತಪಡಿಸ್ತಾರೆ ಅನೇಕ ವೈದ್ಯರು...

ವಯಸ್ಸು ಆದಹಾಗೇ ತಲೆ ಬೆಳ್ಳಗೆ ಆಗೋದು ಮಾಮೂಲಿ

ವಯಸ್ಸು ಆಗ್ತಾ ಹೋದ ಹಾಗೇ, ವಯೋ ಸಹಜವಾಗಿ ತಲೆ ಬೆಳಗಾಗುತ್ತೆ ಕಣ್ರೀ. ಮೊದ ಮೊದಲು ಒಂದೋ ಎರಡೋ ಬಿಳಿ ಕೂದಲು ಕಾಣಿಸಿಕೊಂಡ್ರೇ ಸಾಕು. ಅದನ್ನು ಹೇಗಾದರೂ ಮಾಡಿ ಕಾಣದ ಹಾಗೆ ಕಟ್ ಮಾಡೋದೋ, ಕಿತ್ತು ಬಿಡೋದು ಮಾಡ್ತೀವಿ. ಹೀಗೆ ಕೀಳೋದು ತಪ್ಪು. ನೀವು ಹೀಗೆ ಕೀಳ್ತಾ ಹೋದ್ರೇ, ಇನ್ನೂ ಬಿಳಿ ಕೂದಲು ಜಾಸ್ತಿ ಆಗ್ತಾವೆ ಅಂತ ಯಾರಾದರೂ ಹೇಳಿದರೇ, ಆಗ ನಿಲ್ಲಿಸೋದು. ನಿಲ್ಲಿಸಿದ ನಂತ್ರ, ಏನ್ ಮಾಡೋದು ಅಂತ ಪರ್ಯಾಯ ಮಾರ್ಗಗಳಿಗಾಗಿ ಹುಡುಕಾಡೋದು.

[story-lines]

ಅನೇಕರಿಗೆ ಸ್ಮಾರ್ಟ್ ಆಗಿ ಕಾಣುವ ಆಸೆ

ಹೀಗೆ ಬ್ಲಾಕ್ ಹೇಲ್, ಕಲರ್‌ಪುಲ್ ಆಗಿ ಕಾಣಬೇಕು. ಎಲ್ಲರಿಗಿಂತ ಸ್ಮಾರ್ಟ್ ಆಗಿ ಕಾಣಬೇಕು ಅಂತ ಬಯಸೋರು. ಬಿಳಿಕೂದಲಿಗೆ ಹೇರ್ ಡೈ ಮೊರೆ ಹೋಗ್ತಾರೆ. ಇನ್ನೂ ಕೆಲವರು, ಅಯ್ಯೋ ಬಂದರೇ ಬಂದೀತು. ಹಾಗೆ ಇರಲಿ ಬಿಡ್ರೀ. ಅವೇನ್ ಮಾಡ್ತಾವೆ ಅಂತ ತಲೆನೂ ಕೆಡಿಸಿಕೊಳ್ಳೋದಿಲ್ಲ. ಇದಕ್ಕೆ ಬದಲಾಗಿರೋ ಅನೇಕರು. ಸೌಂದರ್ಯದ ಬಗ್ಗೆ ಕಾಳಸಿ ಮಾಡೋರು. ಬಿಳಿ ಕೂದಲಿಗೆ ಕಂಡುಕೊಳ್ಳೋದೇ ಹೇರ್ ಡೈಯ್.

ಅಂದಹಾಗೇ ಹೇರ್‌ಡೈ ಮೊರೆ ಹೋಗುವ ಅನೇಕರು, ಕೆಲವೊಮ್ಮೆ ಜೇನುತುಪ್ಪ ನಮ್ಮ ಕೂದಲಿಗೆ ತಾಕಿತು. ಹೀಗಾಗಿ ನಮ್ಮ ಕೂದಲು ಬಿಳಿ ಬೇಗ ಆಯ್ತು ಅಂತಾನೂ ಗೊಣಗುತ್ತಾರೆ. ಇದೇ ಮಾತನ್ನು ನಿಮಗೆ ಚಿಕ್ಕ ವಯಸ್ಸಿನಿಂದ, ದೊಡ್ಡವರಾದ್ರೂ, ಹಿರಿಯರು ಸಲಹೆ ಮಾಡ್ತಾರೆ. ಜೇನುತುಪ್ಪ ಕೂದಲಿಗೆ ತಾಗಿಸಬೇಡಿ. ನೀವು ಏನಾದ್ರೂ ತಾಕಿಸಿದ್ರೇ ಕೂದಲೂ ಬಿಳಿಯಾಗುತ್ತದೆ ಅಂತ ಸಾರಿ ಸಾರಿ ಹೇಳುತ್ತಾರೆ.. ಇದೇ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಓದುಗರೇ.., ನಾವು ನೀವೆಲ್ಲಾ ಹಿಂದಿನಿಂದಲೂ ಇದೇ ಸುದ್ದಿ ಕೇಳಿದ್ದೇವೆ. ಇದೇ ವಿಚಾರವನ್ನು ಹಿರಿಯರೂ ಹೇಳುತ್ತಾ ಬಂದಿದ್ದಾರೆ. ಆದ್ರೇ ಯಾರೊಬ್ಬರೂ ಇದಕ್ಕೆ ಕಾರಣ ಏನು ಅಂತ ವೈಜ್ಞಾನಿಕವಾಗಿ ನಿಜ ಸತ್ಯ ಹೇಳಿಲ್ಲ. ಆದರೂ ಈ ಸುದ್ದಿಯನ್ನು ನಂಬಿದ ನಾವು ನೀವೆಲ್ಲಾ ಜೇನುತುಪ್ಪ ತಲೆಯ ಕೂದಲಿಗೆ ಹಚ್ಚಿಲ್ಲ. ಹಚ್ಚೋಕು ಬಿಡದೇ ಎಚ್ಚರಿಕೆ ವಹಿಸಿದ್ದೇವೆ. ಇದೇ ಸುದ್ದಿ ಈಗ ವೈರಲ್ ಆಗಿದೆ.

ಅಸಲಿಗೆ ಜೇನಿನಿಂದ ಕೂದಲು ಬಿಳಿ ಆಗುತ್ತಾ.?

ಈ ಸುದ್ದಿ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ, ಪ್ರಾಚೀನ ಕಾಲದಿಂದಲೂ ಒಬ್ಬರಿಂದ ಮತ್ತೊಬ್ಬರಿಗೆ ಹರಿದು ಬಂದಿದೆ. ಇಂತಹ ಸುದ್ದಿ ಈಗ ವೈರಲ್ ಆಗಿದ್ದು, ಓ ಇದು ನಿಜವೇ ಇರಬೇಕು ಅಂತ ಎಚ್ಚರಿಕೆ ನೀಡುತ್ತಿದೆ. ಇದೇ ಸುದ್ದಿನ ನಮ್ಮ ಟಿವಿ5 ವೈರಲ್ ಯಾವುದು, ರಿಯಲ್ ಯಾವುದು ತಂಡವನ್ನು ಎಡತಾಕಿತು. ಓ ಹೌದಲ್ವಾ..? ಪ್ರಾಚೀನ ಕಾಲದಿಂದ ನಮ್ಮ ಹಿರಿಯರು ನಮಗೂ ಹೀಗೆ ಹೇಳುತ್ತಾ ಇದ್ದರು. ಇದಕ್ಕೆ ಕಾರಣ ಏನು, ಇದು ವೈರಲ್ಲೋ, ರಿಯಲ್ಲೋ ಎಂಬ ಬಗ್ಗೆ ಸಕ್ರೀಯವಾಗುವಂತೆ ನಮ್ಮ ತಂಡವನ್ನು ಮಾಡಿತು...

ನಮ್ಮ ತಂಡಕ್ಕೆ ಈ ಸುದ್ದಿ ಸಿಕ್ಕಿದ್ದೇ ತಡ, ತನಿಖೆಗೆ ಶುರುವಾದ್ವಿ. ಮೊದಲು ಬಿಳಿ ಕೂದಲು ಜೇನುತುಪ್ಪ ಹಚ್ಚಿಕೊಂಡ ಮೇಲೆ ಬಂದ ಯಾವುದಾದರೂ ಪ್ರಕರಣ ಇದ್ಯಾ.? ಎಲ್ಲಾದರೂ ಯಾರಿಗಾದರೂ ಆಗಿದ್ಯಾ ಅಂತ ಹುಡುಕಾಡಿದ್ವಿ. ಎಲ್ಲೇ ಹುಡುಕಿದರೂ, ಬಿಳಿ ಕೂದಲು ಬರುತ್ತೆ ಅಂತ ಕೇಳಿದ್ದೇವೆ ವಿನಹ, ನಮಗೂ ತಿಳಿದಿಲ್ಲ ಅನ್ನೋ ಉತ್ತರ ಸಿಕ್ಕಿತು.

ಜೇನಿಗೂ ಕೂದಲು ಬಿಳಿ ಆಗೋದಕ್ಕೂ ಸಂಬಂಧ ಏನು.?

ಇಲ್ಲಿಗೆ ಸುಮ್ಮನಾಗದ ನಮ್ಮ ವೈರಲ್ ಯಾವುದು ರಿಯಲ್ ಯಾವುದು ತಂಡ, ಮತ್ತಷ್ಟು ತನಿಖಾ ವರದಿಗಾರಿಕೆಗೆ ಇಳೀತು. ಕೂದಲು ತಜ್ಞರನ್ನು ಭೇಟಿ ಮಾಡಿತು. ಸರ್ ಹೀಗೆ ಒಂದು ಸುದ್ದಿ ಹಿಂದಿನಿಂದಲೂ ಹೇಳ್ತಾ ಬಂದಿದ್ದಾರೆ. ಈಗ ವೈರಲ್ ಆಗಿದೆ. ಜೇನುತುಪ್ಪ ಕೂದಲಿಗೆ ಸೋಂಕಿದ್ರೇ, ಬಿಳಿ ಕೂದಲು ಹುಟ್ಟುತ್ತಂತೆ ನಿಜವೇ ಅಂದ್ವಿ. ಹೇರ್‌ಸ್ಪೆಷಲಿಸ್ಟ್ ಕೊಟ್ಟ ಉತ್ತರವನ್ನು ಪಡೆದುಕೊಂಡ್ವಿ...

ಈ ಸುದ್ದಿಯಲ್ಲಿ ವೈರಲ್ ಯಾವುದು.? ರಿಯಲ್ ಯಾವುದು.?

ಇನ್ನೂ ವೈದ್ಯರನ್ನು ನಮ್ಮ ತಂಡ ಭೇಟಿ ಮಾಡಿತು. ಪರಿಣಿತರನ್ನು ಸಂಪರ್ಕಿಸಿ ಇದೇ ವಿಚಾರವಾಗಿ ಮಾಹಿತಿ ಪಡೆಯಿತು. ಆದ್ರೇ ಎಲ್ಲರೂ ಕೊಟ್ಟಿದ್ದು, ಎಲ್ಲಾ ಪರಿಣಿತರು ಹೇಳಿದ ಉತ್ತರ ಒಂದೇ ಆಗಿತ್ತು.... ಆ ಮಾಹಿತಿಯೇ... ಇದು ಸುಳ್ಳು... ಹೀಗೆ ಯಾರಿಗೂ ಆಗಿಲ್ಲ. ಜೇನುತುಪ್ಪದಿಂದ ಅನೇಕ ಪ್ರಯೋಜನ ಇದೆ. ಕೂದಲಿಗೆ ಜೇನುತುಪ್ಪ ತಾಕಿದ್ರೂ ಬಿಳಿಕೂದಲು ಬರೋದಿಲ್ಲ. ಇದೊಂದು ವದಂತಿ. ಇದೊಂದು ಸುಳ್ಳು ಸುದ್ದಿ ಅಂದ್ರು....

ಹೌದು ವೀಕ್ಷಕರೇ.. ಹಿರಿಯರು ಹಿಂದಿನಿಂದಲೂ ಹೇಳುತ್ತಾ ಇರುವ ಈ ಸುದ್ದಿ ಸುಳ್ಳು. ಇಂತಹ ಯಾವುದೇ ಘಟನೆ ಎಲ್ಲಿಯೂ ಆಗಿಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಕೇವಲ ಇದೊಂದು ವೈರಲ್ ಸುದ್ದಿ ಆಗಿದ್ದು, ಈಗ ಮತ್ತಷ್ಟು ವೈರಲ್ ಆಗಿದೆ... ಸೋ ಇದೊಂದು ಫೇಕ್‌ನ್ಯೂಸ್.

ವಸಂತ ಬಿ ಈಶ್ವರಗೆರೆ, ನ್ಯೂಸ್‌ಡೆಸ್ಕ್, ಟಿವಿ5

Next Story

RELATED STORIES