Top

ಕೊನೆಗೂ ಬಚಾವಾದ "ಕರಿಚಿರತೆ" : ನಿರೀಕ್ಷಣಾ ಜಾಮೀನು ಪಡೆದ ದುನಿಯಾ ವಿಜಯ್

ಕೊನೆಗೂ ಬಚಾವಾದ ಕರಿಚಿರತೆ : ನಿರೀಕ್ಷಣಾ ಜಾಮೀನು ಪಡೆದ ದುನಿಯಾ ವಿಜಯ್
X

ಬೆಂಗಳೂರು : ಮಾಸ್ತಿಗುಡಿ ಸಿನಿಮಾ ನಿರ್ಮಾಪಕ ಸಂದರ್ ಪಿ ಗೌಡ ತಪ್ಪಿಸಿಕೊಳ್ಳಲು ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಿಚಿರತೆಗೆ ಜಾಮೀನು ಸಿಕ್ಕಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪಿ ಗೌಡ ಅವರನ್ನು ಪೊಲೀಸರು ಬಂಧಿಸಲು ಮನೆಗೆ ತೆರಳಿದ್ದರು. ಈ ವೇಳೆ ಅವರ ಮನೆಗೆ ತೆರಳಿದ್ದ ನಟ ದುನಿಯಾ ವಿಜಯ್, ಸುಂದರ್‌ ಪಿ ಗೌಡ ಕರೆತರುವುದಾಗಿ ಹೇಳಿ, ತಪ್ಪಿಸಿಕೊಳ್ಳಲು ನೆರವಾಗಿದ್ದರು. ಈ ಸಂಬಂಧ ತಾವರಕೆರೆ ಪೊಲೀಸ್ ಠಾಣೆಯಲ್ಲಿ ನಟ ದುನಿಯಾ ವಿಜಯ್ ವಿರುದ್ಧ ಸ್ವಯಂ ದೂರು ದಾಖಲಾಗಿತ್ತು. ಅಲ್ಲದೇ, ದುನಿಯಾ ವಿಜಯ್ ಬಂಧನಕ್ಕೆ ವಾರೆಂಟ್‌ ಹೊರಡಿಸಲಾಗಿತ್ತು.

ಈ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್‌ನನ್ನು ಖಚಿತ ಮಾಹಿತಿಯ ಮೇರೆಗೆ, ಪೊಲೀಸರು ತಮಿಳುನಾಡಿದ ಕೊಯಮತ್ತೂರು ಬಳಿಯ ಬಂಡೀಪುರ ರೆಸಾರ್ಟ್‌ನಲ್ಲಿ ಬಂದಿಸಿದ್ದರು. ಇಂದು ಬಂದಿಸಿ, ಬೆಂಗಳೂರು ಕರೆತರುತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾಮೀನು ಕೋರಿ ನಟ ದುನಿಯಾ ವಿಜಯ್ ಪರ ನಗರದ 65ನೇ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಒಬ್ಬ ಶೂರಿಟಿ ಜೊತೆಗೆ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಕೂಡಲೇ, ಸಹಿ ಮಾಡಿಸಿಕೊಂಡು ದುನಿಯಾ ವಿಜಯ್ ಆವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ಈ ಮೂಲಕ ಕರಿಚಿರತೆಗೆ ಬಿಡುಗಡೆಯ ಭಾಗ್ಯ ದೊರೆತಂತಾಗಿದೆ.

Next Story

RELATED STORIES