Top

ಗುಂಡು ಹಾರಿಸಿ ಉದ್ಯಮಿ ಕಿಡ್ನಾಪ್​ಗೆ ಯತ್ನ!

ಗುಂಡು ಹಾರಿಸಿ ಉದ್ಯಮಿ ಕಿಡ್ನಾಪ್​ಗೆ ಯತ್ನ!
X

ಉದ್ಯಮಿಯನ್ನು ಅಪಹರಿಸಿ ಸುಲಿಗೆ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ.

ಜುಬೇರ್ ಪಾಷ, ಮೆಹ್ತಾಬ್, ನಿಯಾಮತುಲ್ಲಾ, ಸೈಯದ್ ಅಪ್ಜಲ್ ಬಂಧಿತ ಆರೋಪಿಗಳು.

ಫ್ರೇಜರ್ ಟೌನ್ ಪೀಠೋಪಕರಣ ವ್ಯಾಪಾರಿ ಮಸೂದ್ ಅಲಿ ಕಾರಿಗೆ ಕಾರಿಗೆ ಡಿಕ್ಕಿ ಹೊಡೆದಿದ್ದ ಆರೋಪಿಗಳು. ಕಾರು ಡಿಕ್ಕಿ ಪ್ರಶ್ನಿಸಲು ಬಂದ ಮಸೂದ್ ಬಂದಾಗ ಬಲವಂತವಾಗಿ ಕಾರಿನ ಒಳಗೆ ತಳ್ಳಿ ಅಪಹರಿಸಲು ಯತ್ನಿಸಿದ್ದರು.

ಈ ವೇಳೆ ತಪ್ಪಿಸಿಕೊಳ್ಳಲು ಮುಂದಾದಾಗ ಉದ್ಯಮಿಯತ್ತ ಗುಂಡು ಹಾರಿಸಿ, ಎಸ್ಕೇಪ್ ಆಗಿದ್ದರು. ಗುಂಡು ತಗುಲಿ ಉದ್ಯಮಿ ಅಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಮುಖ ಆರೋಪಿ ಜುಬೇರ್, ಉದ್ಯಮಿ ಬಳಿ ಫ್ಲಾಟ್ ಪಡೆದಿದ್ದು, ಆಗಾಗ ಉದ್ಯಮಿ ಮಸೂದ್ ಮನೆಗೆ ಹೋಗಿ ಬರುತ್ತಿದ್ದ. ಹಣದ ಮೇಲೆ ಕಣ್ಣಿಟ್ಟಿದ್ದ ಜುಬೇರ್​ ಸ್ನೇಹಿತರೊಂದಿಗೆ ಸೇರಿ ಕಿಡ್ನಾಪ್ ಮಾಡಿ 5 ಕೋಟಿ ರೂ. ವಸೂಲು ಮಾಡಲು ಯೋಜಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

Next Story

RELATED STORIES