ಕ್ರಿಕೆಟ್ ಲೋಕದಲ್ಲಿ ಮತ್ತೆ ಕೇಳಿಬರಲಿದೆ ತೆಂಡೂಲ್ಕರ್ ಹೆಸರು..!

ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಮುಂದಿನ ತಿಂಗಳು ಕಿರಿಯರ ತಂಡ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದ್ದು ನಾಲ್ಕು ದಿನಗಳ ಎರಡು ಪಂದ್ಯ ಹಾಗೂ 5 ಏಕದಿನ ಪಂದ್ಯಗಳನ್ನ ಆಡಲಿದೆ.
18 ವರ್ಷದ ಅರ್ಜುನ್ ಅಂಡರ್ 19 ಕ್ರಿಕೆಟರ್ಗಳಿಗೆ ವಲಯ ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಗ್ಲೋಬಲ್ ಅರ್ಜುನ್ ಆಲ್ರೌಂಡ್ ಪರ್ಫಾಮನ್ಸ್ ನೀಡಿ ಗಮನ ಸೆಳೆದಿದ್ದರು. ಅರ್ಜುನ್ 4 ವಿಕೆಟ್ ಪಡೆದಿದ್ದನ್ನ ಅಸ್ಟ್ರೇಲಿಯಾ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.
ಅರ್ಜುನ್ ಕ್ರಿಕೆಟ್ ಜೀವನದಲ್ಲಿ ಮೈಲುಗಲ್ಲು: ಸಚಿನ್
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಅಂಡರ್ 19 ತಂಡಕ್ಕೆ ಸಚಿನ್ ಆಯ್ಕೆಯಾಗಿದ್ದು ನನಗೆ ಖುಷಿ ನೀಡಿದೆ. ಇದು ಅವನ ಜೀವನದಲ್ಲಿ ದೊಡ್ಡ ಮೈಲುಗಲ್ಲಾಗಿದೆ. ಅವನ ಆಯ್ಕೆಯನ್ನ ನಾನು ಯಾವಗಲೂ ಬೆಂಬಲಿಸುತ್ತೇನೆ ಮತ್ತು ಅವನಿಗೆ ಸಕ್ಸಸ್ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.