Top

ಬಾಂಗ್ಲಾಗೆ 1 ರನ್ ಸೋಲು​: ಅಫ್ಘಾನ್​ ಮಡಿಲಿಗೆ ಟಿ20 ಸರಣಿ

ಬಾಂಗ್ಲಾಗೆ 1 ರನ್ ಸೋಲು​: ಅಫ್ಘಾನ್​ ಮಡಿಲಿಗೆ ಟಿ20 ಸರಣಿ
X

ಕೊನೆಯ ಓವರ್ನಲ್ಲಿ ಕಮಾಲ್​ ಮಾಡಿದ ಸ್ಪಿನ್ನರ್ ರಶೀದ್​ ಖಾನ್ ಬಾಂಗ್ಲಾದೇಶ ವಿರುದ್ಧ 1ರನ್​ಗಳ ರೋಚಕ ಗೆಲುವು ತಂದುಕೊಟ್ಟರು. ಇದರೊಂದಿಗೆ ಬಾಂಗ್ಲಾ ವಿರುದ್ಧ ಅಫ್ಘಾನಿಸ್ಥಾನ ವಿರುದ್ಧ 3-0 ಅಂತರದಿಂದ ಸರಣಿ ವೈಟ್​ವಾಶ್​ ಮಾಡಿದೆ.

ಉತ್ತರಾಖಂಡ್​ನ ಡೆಹ್ರಾಡೂನ್​ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫ್ಘಾನಿಸ್ತಾನ ತಂಡ 20ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್​ ಗಳಿಸಿತು. ಅಫ್ಘಾನ್ ಪರ ಆರಂಭಿಕ ಬ್ಯಾಟ್ಸ್ ಮನ್ ಮೊಹ್ಮದ್​ ಶಾಜಾದ್​ 26 ಹಾಗೂ ಸಮಿವುಲ್ಲಾ ಶೆನವಾರಿ ಅಜೇಯ 33 ರನ್ ಗಳಿಸಿದ್ರು.

ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ತಂಡ ಸಾಂಘಿಕ ದಾಳಿಗೆ ತತ್ತರಿಸಿತು. ಮುಷಿಫೀಕುರ್​ ರಹೀಂ 46, ಮೊಹ್ಮದುಲ್ಲಾ 45 ರನ್​ ಬಾರಿಸಿದ ಹೊರತಾಗಿಯೂ ಕೊನೆಯಲ್ಲಿ 1 ರನ್​ ಅಂತರದಿಂದ ಸೋಲು ಕಂಡಿತು.

Next Story

RELATED STORIES