Top

ರಾಷ್ಟ್ರಪತಿ ಭವನದಲ್ಲಿ ಈ ವರ್ಷ ಇಫ್ತಿಯಾರ್‌ ಕೂಟ ಇಲ್ಲ

ರಾಷ್ಟ್ರಪತಿ ಭವನದಲ್ಲಿ ಈ ವರ್ಷ ಇಫ್ತಿಯಾರ್‌ ಕೂಟ ಇಲ್ಲ
X

[story-lines]

ನವದೆಹಲಿ : ರಂಜಾನ್‌ ಪ್ರಯುಕ್ತ ಮುಸ್ಲೀಂ ಭಾಂದವರಿಂದ ಇಫ್ತಿಯಾರ್‌ ಕೂಟ ಏರ್ಪಡಿಸೋದು ಮಾಮೂಲಿ. ಅದೇ ರೀತಿ ಪ್ರತಿ ವರ್ಷ ರಾಷ್ಟ್ರಪತಿ ಭವದಲ್ಲೂ ಏರ್ಪಡಿಸಲಾಗುತ್ತದೆ. ಆದರೇ ಅನಿವಾರ್ಯ ಕಾರಣಗಳಿಂದಾಗಿ ಈ ಬಾರಿ ರಾಷ್ಟ್ರಪತಿ ಭವದಲ್ಲಿ ಇಫ್ತಿಯರ್ ಕೂಟ ಆಯೋಜನೆ ರದ್ದುಗೊಳಿಸಲಾಗಿದೆ.

ಅಂದಹಾಗೇ ರಂಜಾನ್‌ ಉಪವಾಸದ ಕೊನೆಯ ದಿನದಂದು ರಾಷ್ಟ್ರಪತಿ ಭವದಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು, ಮುಸ್ಲೀಂ ಧಾರ್ಮಿಕ ಸಂಘಟನೆಗಳ ಮುಖಂಡರನ್ನು ಕರೆಸಿ, ಇಫ್ತಿಯಾರ್ ಕೂಟ ಏರ್ಪಡಿಸಲಾಗುತ್ತಿತ್ತು. ಇದೇ ಸಂಪ್ರದಾಯ ಹಲವು ವರ್ಷಗಳಿಂದ ಮುಂದುವರೆದುಕೊಂಡು ಬಂದಿತ್ತು. ಆದರೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಈ ಬಾರಿ ಔತಣಕೂಟ ಏರ್ಪಡಿಸದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರಂತೆ. ಈ ಹಿನ್ನಲೆಯಲ್ಲಿ ರಂಜಾನ್‌ ಉಪವಾಸದ ಕೊನೆಯ ದಿನದಂದು ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗುತ್ತಿದ್ದ ಇಫ್ತಿಯಾರ್‌ ಕೂಟ ರದ್ದಗೊಂಡಿದೆ.

ಇನ್ನೂ ಇಲ್ಲಿ ನಾವು ಸ್ಮರಿಸಲೇ ಬೇಕಾದ ಮತ್ತೊಂದು ವಿಚಾರ ಅಂದ್ರೇ, ಈ ಹಿಂದೆ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಕೂಡ, ಇಫ್ತಿಯಾರ್‌ ಕೂಟವನ್ನು ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸೋದನ್ನು ರದ್ದು ಪಡಿಸಿದ್ದರು. ಅಲ್ಲದೇ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್‌ ಕೂಟ ಏರ್ಪಡಿಸಲು ತಗುಲುತ್ತಿದ್ದ ವೆಚ್ಚವನ್ನು ಅನಾಥಾಶ್ರಮಗಳಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಈಗಲೂ ಅದೇ ರೀತಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನಡೆದುಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.

Next Story

RELATED STORIES