Top

ರಾಜ್ಯದ ಗಡಿ ದಾಟೋಕೆ ತಿಣುಕಾಡುತ್ತಿರುವ ‘ಕಾಲಾ’..!

ರಾಜ್ಯದ ಗಡಿ ದಾಟೋಕೆ ತಿಣುಕಾಡುತ್ತಿರುವ ‘ಕಾಲಾ’..!
X

[story-lines]

ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗ್ತಿದೆ. ತೆರೆಮೇಲೆ ಕಾಲಾ ದರ್ಬಾರ್ ನೋಡೊಕೆ ರಜಿನಿಕಾಂತ್ ಅಭಿಮಾನಿಗಳು ಥಿಯೇಟರ್​ ಮತ್ತು ಮಲ್ಟಿಫ್ಲೆಕ್ಸ್​ಗಳ ಮುಂದೆ ಕಾದು ಕುಳಿತಿದ್ದಾರೆ. ಹೈಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದಾಗ್ಯೂ ಸಿನಿಮಾ ರಿಲೀಸ್ ವಿರೋಧಿಸಿ ಕನ್ನಡಪರ ಸಂಘಟನೆಗಳು ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸ್ತಿದ್ದಾರೆ.

ಈಗಾಗಲೇ ಕಾಲಾ ಚಿತ್ರ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಹ ಸಿಕ್ಕಿದ್ದು, ಕಾಲಾ ಆರ್ಭಟಕ್ಕೆ ಬಾಕ್ಸಾಫೀಸ್ ಶೇಕ್ ಆಗ್ತಿದೆ. ಆದ್ರೆ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ, ಚಿತ್ರಮಂದಿರಕ್ಕೆ ನುಗ್ಗಿ ದಾಂಧಲೆ ನಡೆಸೋದಾಗಿ ಕನ್ನಡ ಪರ ಸಂಘಟನೆಗಳು ಬೆದರಿಕೆ ಹಾಕುತ್ತಿರೋದ್ರಿಂದ ಭಾರಿ ಗೊಂದಲ ಉಂಟಾಗಿದೆ. ತಮಿಳು ಚಿತ್ರಗಳು ಹೆಚ್ಚಾಗಿ ತೆರೆಕಾಣುವ ಕೆಲ ಚಿತ್ರಮಂದಿರಗಳಲ್ಲಿ ಕಾಲಾ ಪ್ರದರ್ಶನ ಇಲ್ಲ ಅನ್ನೋ ಬೋರ್ಡ್ ಹಾಕಲಾಗಿದೆ. ಎಂಜಿ ರಸ್ತೆಯ ಲಿಡೋ, ತಾವರೆಕೆರೆಯ ಬಾಲಾಜಿ ಮತ್ತು ಊವರ್ಶಿ ಚಿತ್ರಮಂದಿರ ಸೇರಿದಂತೆ ಹಲವು ಕಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸ್ತಿವೆ.

Watch Video : Rajini Fans reaction Live from Theatres!

ಕೆಲ ಚಿತ್ರಮಂದಿರದ ಮಾಲೀಕರು ಸಿನಿಮಾ ಬಿಡುಗಡೆ ಮಾಡಲ್ಲ ಅಂತ ಹೇಳುತ್ತಿದ್ದು, ಮತ್ತೆ ಕೆಲವು ಚಿತ್ರಮಂದಿರಗಳಲ್ಲಿ ಪ್ರರ್ದಶನ ಶುರುವಾಗೋದಾಗಿ ಚಿತ್ರ ವಿತರಕರು ಹೇಳ್ತಿದ್ದಾರೆ. ಒಟ್ಟಾರೆ ರಜಿನಿಕಾಂತ್ ಕಾಲಾ ಚಿತ್ರಕ್ಕೆ ರಾಜ್ಯದಲ್ಲಿ ಆರಂಭಿಕ ಹಿನ್ನಡೆ ಉಂಟಾಗಿರೋದು ಸುಳ್ಳಲ್ಲ.

Next Story

RELATED STORIES