Top

ಪ್ಲಾಸ್ಟಿಕ್ ಬಾಟಲ್ ಬಳಸಿ ನಗೆಪಾಟಲಿಗೊಳಗಾದ 'ಮಹಾ' ಸರ್ಕಾರ..!

ಪ್ಲಾಸ್ಟಿಕ್ ಬಾಟಲ್ ಬಳಸಿ ನಗೆಪಾಟಲಿಗೊಳಗಾದ ಮಹಾ ಸರ್ಕಾರ..!
X

[story-lines]

ಮಹಾರಾಷ್ಟ್ರ:ಮೊನ್ನೆ ಮೊನ್ನೆ ತಾನೆ ನಾವು ವಿಶ್ವ ಪರಿಸರ ದಿನವನ್ನ ಆಚರಣೆ ಮಾಡಿದ್ವಿ. ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಹಲವೆಡೆ ಕಾರ್ಯಕ್ರಮಗಳು, ಅಭಿಯಾನಗಳು ಕೂಡಾ ನಡೆಯಿತು.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪ್ಲಾಸ್ಟಿಕ್ ಮುಕ್ತ ಭಾರತ ಮಾಡಿ ಎಂಬ ಕೂಗು ಕೇಳಿಬಂತು.

ಇನ್ನು ಕೆಲವರು ಪ್ರಧಾನಿ ಮೋದಿಯವರ ಸ್ವಚ್ಛಭಾರತ ಅಭಿಯಾನವನ್ನ ಸಕ್ಸಸ್ ಗೊಳಿಸೋಕ್ಕೆ, ಪ್ಲಾಸ್ಟಿಕ್ ಮುಕ್ತ ಭಾರತ ಮಾಡೋಕ್ಕೆ ಮುಂದಾಗಿದ್ದಾರೆ.ಆದರೆ ಸ್ವತಃ ಬಿಜೆಪಿ ಸರ್ಕಾರವೇ ಮೋದಿಯವರ ಅಭಿಯಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಹೌದು ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರ್ಕಾರ ಇಂತಹದ್ದೊಂದು ಎಡವಟ್ಟು ಮಾಡಿ ನಗೆಪಾಟಲಿಗೀಡಾಗಿದೆ.

ಮಹಾರಾಷ್ಟ್ರ ಗವರ್ನ್ಮೆಂಟ್ ಕೂಡ ಈ ಬಗ್ಗೆ ಸಭೆ ನಡೆಸಿದ್ದು, ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡುವುದರ ಬಗ್ಗೆ ಚರ್ಚೆ ನಡೆಸಿತ್ತು. ಆದರೆ ಪ್ಲಾಸ್ಟಿಕ್ ಬ್ಯಾನ್ ಮಾಡುವ ಬಗ್ಗೆ ನಡೆದ ಸಭೆಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿ, ಮಹಾರಾಷ್ಟ್ರ ಸರ್ಕಾರ ನಗೆಪಾಟಲಿಗೀಡಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದ್ದು, ಹಲವರ ಟೀಕೆಗೆ ಗುರಿಯಾಗಿದೆ.ಪ್ಲಾಸ್ಟಿಕ್ ಬ್ಯಾನ್ ಮಾಡಬೇಕೆಂದು ತೋರಿಕೆಯ ಸಭೆ ಮಾಡುವ ಅವಶ್ಯಕತೆ ಏನಿದೆ ಎಂದು ಕೆಲವರು ಪ್ರಶ್ನಿಸಿದರೆ, ಪ್ಲಾಸ್ಟಿಕ್ ಬಾಟಲ್ ಆನ್ ದಿ ಟೇಬಲ್ ಮಿನಿಸ್ಟರ್ ಎಂದು ಕೆಲವರು ಟೀಕಿಸಿದ್ದಾರೆ.

Next Story

RELATED STORIES