Top

ಇದೊಂದು ಮನಕಲಕುವ ಘಟನೆ : ಆ್ಯಂಬುಲೆನ್ಸ್‌ಸಿಗದೇ 7 ಕಿಮೀ ಗರ್ಭಿಣಿಯನ್ನ ಹೊತ್ತೇ ಸಾಗಿದ್ರು

ಇದೊಂದು ಮನಕಲಕುವ ಘಟನೆ : ಆ್ಯಂಬುಲೆನ್ಸ್‌ಸಿಗದೇ 7 ಕಿಮೀ ಗರ್ಭಿಣಿಯನ್ನ ಹೊತ್ತೇ ಸಾಗಿದ್ರು
X

[story-lines]

ಪಾಲಕ್ಕಾಡು : ಗರ್ಭಿಣಿಯರ ಸಾವಿನ ಪ್ರಮಾಣವನ್ನು, ಶಿಶು ಮರಣವನ್ನು ತಡೆಗಟ್ಟಲು ರಾಜ್ಯ, ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ. ಅಲ್ಲದೇ, ಸಕಾಲದಲ್ಲಿ ವೈದ್ಯಕೀಯ ಸೇವೆ ಸಿಗುವಂತೆ ಹೆಚ್ಚು ಹೆಚ್ಚು ಒತ್ತನ್ನು ನೀಡಿ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿವೆ. ಆದರೂ, ಕೆಲವೊಂದು ವೇಳೆ ಸೂಕ್ತ ಸಮಯಕ್ಕೆ ವೈದ್ಯಕೀಯ ಸೇವೆ ದೊರೆಯೋದಿಲ್ಲ. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸೇವೆ ಸಿಗೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕೇರಳದ ಪಕ್ಕಾಡಿನಲ್ಲಿ 7 ಕಿಲೋಮೀಟರ್‌ ಆ್ಯಂಬುಲೆನ್ಸ್ ಸಿಗದೇ ಹೊತ್ತುಕೊಂಡೆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ.

ಕಳೆದ ಹಲವು ದಿನಗಳ ಹಿಂದೆ ಶವಸಾಗಿಸಲು ವಾಹನ ಸಿಗದೇ ಮಗಳನ್ನು 10 ಕಿಲೋಮೀಟರ್ ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಸಾಗಿ, ಮಣ್ಣು ಮಾಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಅಗಿತ್ತು. ಇಂತಹದ್ದೇ ಘಟನೆ ಪಾಲಕ್ಕಾಡು ಬಳಿಯ ಅತ್ತಪಡಿ ಹಳ್ಳಿಯಲ್ಲಿ ಮುಂದುವರೆದಿದೆ.

ಆ್ಯಂಬುಲೆನ್ಸ್ ಸಿಗದ ಕಾರಣಕ್ಕೆ, ಕುಟುಂಬಸ್ಥರು, ಗರ್ಭಿಣಿಯನ್ನು ಬೆಡ್‌ಶೀಟ್‌ನಿಂದ ತಯಾರಿಸಿದ ಜೋಲಿಯಲ್ಲಿ ಹೊತ್ತುಕೊಂಡು 7 ಕಿಲೋ ಮೀಟರ್ ಸಾಗಿದ್ದಾರೆ. ಹೀಗೆ ಸಾಗಿ ಸಮೀಪದ ಕೊಟ್ಟತಾರ ಎಂಬಲ್ಲಿದ್ದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿದೆ. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂದಹಾಗೇ, ಇಂತಹ ಘಟನೆ ಇದೇ ಮೊದಲಲ್ಲ. ಗರ್ಭಿಣಿಯರ ಹೆರಿಗೆ ನೋವಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸು ವಾಹನ ಅನೇಕ ಬಾರಿ ಸಿಕ್ಕಿಲ್ಲ. ಈ ಕಾರಣಕ್ಕೆ ಗರ್ಭಿಣಿಯರು ಸಾವನ್ನಪ್ಪಿದ್ದು ಉಂಟು. ಆದ್ರೇ, 7 ಕಿಲೋಮೀಟರ್ ಹೆರಿಗೆ ನೋವು ಬಂದ ತಕ್ಷಣ ಅ್ಯಂಬುಲೆನ್ಸ್‌ ಇಲ್ಲದೇ ಜೋಲಿಯಲ್ಲಿ ಹೊತ್ತೊಂದ ಕುಟುಂಬಸ್ಥರ ದೃಶ್ಯವನ್ನು ಸುದ್ದಿವಾಹಿನಿಯೊಂದು ಬಿತ್ತರಿಸಿತ್ತು. ಹೀಗೆ ಬಿತ್ತರವಾಗಿದ್ದೇ ತಡ, ಸಂಬಂಧಿಸದ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಆ್ಯಂಬುಲೆನ್ಸ್ ಸಿಬ್ಬಂದಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಕಾಲಕ್ಕೆ ಆಸ್ಪತ್ರೆಗೆ ಜೋಳಿಗೆಯಲ್ಲೇ ಕರೆತಂದ ಕುಟುಂಬಸ್ಥರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Next Story

RELATED STORIES