Top

"ದಲಿತ" ಪದ ಬಳಸದಂತೆ ಮಾಧ್ಯಮಗಳಿಗೆ ನಾಗ್ಪುರ ಹೈಕೋರ್ಟ್‌ ಪೀಠ ಸೂಚನೆ

ದಲಿತ ಪದ ಬಳಸದಂತೆ ಮಾಧ್ಯಮಗಳಿಗೆ ನಾಗ್ಪುರ ಹೈಕೋರ್ಟ್‌ ಪೀಠ ಸೂಚನೆ
X

ನಾಗ್ಪುರ : ಮಾಧ್ಯಮದ ವರದಿಗಳಲ್ಲಿ "ದಲಿತ" ಎಂಬ ಶಬ್ಧವನ್ನು ಬಳಸದಿರಲು ಸೂಚನೆಗಳನ್ನು ನೀಡಬೇಕು ಎಂದು ಕೇಂದ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ವಿಭಾಗೀಯ ಪೀಠ ಆದೇಶಿಸಿದೆ.

ಅಂದಹಾಗೇ, ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ದಲಿತ ಎಂಬ ಪದದ ಬದಲಿಗೆ "ಪರಿಶಿಷ್ಟ ಜಾತಿ" ಹಾಗೂ "ಪರಿಶಿಷ್ಟ ಪಂಗಡ" ಎಂದು ಉಲ್ಲೇಖಿಸುವ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಇಲಾಖೆಯ ಮಾ.15ರ ಸುತ್ತೋಲೆಯನ್ನು ಹೊರಡಿಸಿತ್ತು. ಈ ಕುರಿತು ನ್ಯಾಯಮೂರ್ತಿಗಳಾದ ಭೂಷಣ್‌ ಧರ್ಮಾಧಿಕಾರಿ ಹಾಗೂ ಜಕ ಹಕ್‌ ಅವರಿದ್ದ ವಿಭಾಗೀಯ ಪೀಠ ಗಮನ ಸೆಳೆಯಿತು. ಈ ಬಗ್ಗೆ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನಾಗ್ಬುರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಇನ್ನೂ ಹೈಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯಿಸಿರುವ, ಸರ್ಕಾರದ ಪರ ವಕೀಲರು, ಕೇಂದ್ರ ಸರಕಾರದ ಸುತ್ತೋಲೆಯ ಆಧಾರದ ಮೇರೆಗೆ ಬಾಂಬೆ ಸರಕಾರ 4 ವಾರಗೊಳಗಾಗಿ ಅಧಿಸೂಚನೆ ಪ್ರಕಟಿಸುವುದಾಗಿ ಕೋರ್ಟ್‌ಗೆ ತಿಳಿಸಿದ್ದಾರೆ.

Next Story

RELATED STORIES