Top

ಪತ್ನಿ ಜೊತೆ ಅಕ್ರಮ ಸಂಬಂಧ, ವ್ಯಕ್ತಿಯ ಭೀಕರ ಕೊಲೆ

ಪತ್ನಿ ಜೊತೆ ಅಕ್ರಮ ಸಂಬಂಧ, ವ್ಯಕ್ತಿಯ ಭೀಕರ ಕೊಲೆ
X

[story-lines]

ಹಾಸನ: ಪತ್ನಿಯೊಂದಿಗೆ ಆಕ್ರಮ ಸಂಬಂಧ ಶಂಕೆ ಹಿನ್ನಲೆ ತಮ್ಮ ಹತ್ತಿರದ ಸಂಬಂಧಿಯನ್ನೇ ಹತ್ಯೆಮಾಡಿ ತೋಟದಲ್ಲಿ ಹೂತಿದ್ದ ಪ್ರಕರಣ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.. ಜಿಲ್ಲೆಯ ಅರಸೀಕೆರೆ ತಾಲೂಕಿನ ದುದ್ದ ಗ್ರಾಮದ ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಕೆ.ಜವರೇಗೌಡ ಅವರಿಗೆ ಸೇರಿದ ತೆಂಗಿನ ತೋಟದಲ್ಲಿ ಈ ಘಟನೆ ನಡೆದಿದ್ದು,ಮೃತನನ್ನು ಬೇಲೂರು ತಾಲೂಕಿನ ಸವಾಸಿಹಳ್ಳಿ ನಿವಾಸಿ ಬಸವರಾಜು(45) ಎಂದು ಗುರುತಿಸಲಾಗಿದೆ... ಬಸವರಾಜು ಹತ್ಯೆಗೆ ಅಕ್ರಮ ಸಂಬಂಧ ಕಾರಣ ಎನ್ನಲಾಗಿದ್ದು. ತನ್ನ ಪತ್ನಿಯ ಅಕ್ಕ ಅಂದರೆ ದೇವರಾಜು ಪತ್ನಿ ಜೊತೆ ಬಸವರಾಜು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಇದೇ ಕಾರಣಕ್ಕೆ ದೇವರಾಜು ಮತ್ತು ಬಸವರಾಜು ನಡುವೆ ಜಗಳ ನಡೆದಿದ್ದು, ಅದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಎರಡು ವಾರಗಳ ಹಿಂದೆ ಏಕಾಏಕಿ ಕಾಣೆಯಾಗಿದ್ದ ಬಸವರಾಜು. ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಮನೆಯವರು, ಹಳೇಬೀಡು ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕೇಸ್ ನೀಡಿದ್ದರು. ಆದರೂ ಕೂಡ ಬಸವರಾಜ್ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ದುದ್ದ ಬಳಿ ಇರುವ ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಕೆ.ಜವರೇಗೌಡ ಅವರಿಗೆ ಸೇರಿದ ತೆಂಗಿನ ತೋಟದ ಮನೆಯ ಪಕ್ಕದಲ್ಲಿ ಶವ ಹೂತಿದ್ದು ಪತ್ತೆಯಾಗಿದೆ.

ಇನ್ನು ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇವರಾಜುನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.. ಬಸವರಾಜು ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ.

Next Story

RELATED STORIES