Top

ಫೋಟೋ ಕ್ಲಿಕ್ಕಿಸಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಫೋಟೋ ಕ್ಲಿಕ್ಕಿಸಿ ಪ್ರಾಣ ಕಳೆದುಕೊಂಡ ವ್ಯಕ್ತಿ
X

[story-lines]

ಚೆನ್ನೈ: ಇಂದಿನ ಯುವ ಪೀಳಿಗೆಯವರಿಗೆ ವಿವಿಧ ತರಹದ ಕುತೂಹಲ. ಯಾವುದರ ಬಗ್ಗೆಯಾದರೂ ತಿಳಿದುಕೊಳ್ಳಬೇಕೆಂದರೆ ಹಲವು ತರಹದ ಪ್ರಯೋಗಗಳನ್ನು ಮಾಡುತ್ತಾರೆ.ಇಂತಹ ಪ್ರಯೋಗಗಳನ್ನು ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇದೇ ರೀತಿ ಕುತೂಹಲದಿಂದ ಫೋಟೋ ಕ್ಲಿಕ್ಕಿಸಲು ಹೋಗಿ, ಓರ್ವ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಈಗಿನ ಕಾಲದಲ್ಲಿ ಯುವ ಪೀಳಿಗೆಯವರಿಗೆ ಫೋಟೋ ಕ್ಲಿಕ್ಕಿಸುವುದು ಒಂದು ಸ್ಟೈಲ್ ಆಗಿ ಬಿಟ್ಟಿದೆ.ಸಿಕ್ಕ ಸಿಕ್ಕಲ್ಲಿ ಫೋಟೋ ಕ್ಲಿಕ್ಕಿಸುವುದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು. ಅದಕ್ಕೆಷ್ಟು ಲೈಕ್ಸ್, ಕಮೆಂಟ್ಸ್ ಬಂತೆಂದು ನೋಡುವುದು, ಇದೆಲ್ಲ ಸಾಮಾನ್ಯವಾಗಿದೆ. ಇದೇ ರೀತಿ ಮಿಂಚು ಬರುತ್ತಿದ್ದ ವೇಳೆಯಲ್ಲಿ ತಮಿಳುನಾಡಿನ ಚೆನ್ನೈ ನಿವಾಸಿಯಾದ ರಮೇಶ್(43) ಅದರ ಫೋಟೋ ಕ್ಲಿಕ್ಕಿಸಿದ್ದಾನೆ. ಈ ವೇಳೆ ಆತನ ಮುಖಕ್ಕೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ಈ ಮೂಲಕ ಆತನ ಉತ್ಸಾಹವೇ ಆತನಿಗೆ ಮಾರಕವಾಗಿ ಮಾರ್ಪಟ್ಟಿದೆ.

Next Story

RELATED STORIES