Top

#TV5 ViralReal ತಾಂಬೂಲ ರೋಗಗಳಿಂದ ದೂರ ಇಡುತ್ತದೆ : ಆಶ್ಚರ್ಯನಾ.? ಈ ಸುದ್ದಿ ಓದಿ

#TV5 ViralReal ತಾಂಬೂಲ ರೋಗಗಳಿಂದ ದೂರ ಇಡುತ್ತದೆ : ಆಶ್ಚರ್ಯನಾ.? ಈ ಸುದ್ದಿ ಓದಿ
X

ಇದು ವೈರಲ್ ಸುದ್ದಿಯ ರಿಯಲ್ ಕತೆ : ಎಲೆ ಅಡಿಕೆ ಆರೋಗ್ಯಕ್ಕೆ ಒಳ್ಳೆಯದೇ.? ಹೀಗಂತ ಯಾರನ್ನೇ ಕೇಳಿದ್ರೂ, ಓ ಒಳ್ಳೆಯದು, ಹಾಕೊಳ್ಳಿ ಅಂತಾರೆ. ಇದಲ್ಲದೇ ದಿನವೂ ಎಲೆ ಅಡಿಕೆ ಹಾಕ್ಕೊಳ್ಳಿ, ಇನ್ನೂ ಆರೋಗ್ಯ ಚೆನ್ನಾಗಿ ಇರುತ್ತದೆ. ರೋಗಗಳಿಂದ ಮುಕ್ತರಾಗಿ ಜೀವನ ಸಾಗಿಸಬಹುದು ಎನ್ನುತ್ತಿದೆ ಸೋಷಿಯಲ್ ಮೀಡಿಯಾ. ಅಷ್ಟಕ್ಕೂ ಇಂತಹ ಶಕ್ತಿ ಅಡಿಕೆ ಎಲೆಯನ್ನೂ ತಿನ್ನೋದ್ರಿಂದ ಇದ್ಯಾ.? ಇದ್ರಲ್ಲಿ ವೈರಲ್ ಯಾವುದು..? ರಿಯಲ್ ಯಾವುದು.? ಮುಂದೆ ಓದಿ...

ಅಡಿಕೆ, ಎಲೆ, ಸುಣ್ಣ...! ಹಾಕೊಂಡರೇ ಬಾಯಿ ಕೆಂಪಣ್ಣ..! ಜೀರ್ಣಕ್ರಿಯೆಗೆ ಸಹಕಾರಿ ಅಣ್ಣ..! ಇದು ಹಿರಿಯರು ಅಡಿಕೆ ಎಲೆಯ ಬಗ್ಗೆ ಹೇಳುವ ಸಲಹೆ. ಯಾವುದೇ ಸೈಟ್ ಎಫೆಕ್ಟ್ ಇಲ್ಲದೇ ಇರುವ ಜಗಿಯುವ ಜಟ ಅಂದ್ರೇ, ಅದು ಈ ಅಡಿಕೆ, ಎಲೆ ಹಾಕೊಳ್ಳೋದು.. ಈಗ ಅಧುನಿಕರಲ್ಲಿ ಇದರ ಬಗ್ಗೆ ಒಲವು ಕಡಿಮೆ ಎನಿಸಿದರೂ, ಪ್ರಾಚೀನ ಕಾಲಂದಿಂದಲೂ ಇದರ ಪ್ರಸಿದ್ದಿ ಬಲು ಜೋರು.

ಹೊಸ ಜೇತನ ನೀಡಿ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಹಳ್ಳಿಗಳಲ್ಲಿ ಊಟ ಆದನಂತ್ರ, ತಾಂಬೂಲ ಸೇವನೆ ಸರ್ವೇ ಸಾಮಾನ್ಯ. ಊಟ ಆದ ನಂತ್ರ ತಾಂಬೂಲ ಹಾಕೊಂಡರೇ, ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಹಲ್ಲುಗಳು ಗಟ್ಟಿಯಾಗುತ್ತವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ. ಇದು ಹಳ್ಳಿಗರಿಗೆ ಸಾಮಾನ್ಯ ಸಂಗತಿ ಕೂಡ..

ಅಂದಹಾಗೇ ತಾಂಬೂಲ ಪ್ರಾಚೀನ ಕಾಲದಿಂದ ರೂಢಿಸಿಕೊಂಡು ಬಂದಿರುವ ಪದ್ದತಿ. ಇದ್ರಿಂದ ಅನೇಕ ಲಾಭಗಳು ಇವೆ ಎನ್ನುತ್ತಾರೆ ಅನೇಕ ಪರಿಣಿತರು ಕೂಡ. ಅಲ್ಲದೇ ಇದೇ ವಿಚಾರವನ್ನು ವಿಜ್ಞಾನ ಕೂಡ ಸ್ಪಷ್ಟಪಡಿಸಿದೆ. ಈ ಮೂಲಕ ತಾಂಬೂಲ ಎಲ್ಲರಿಗೂ ಅಚ್ಚು ಮೆಚ್ಚಿನ ವಸ್ತುವಾಗಿದೆ.

ಸಣ್ಣವರಿಂದ ಹಿಡಿದು, ದೊಡ್ಡವರಾದಿಯಾಗಿ ತಾಂಬೂಲದ ಸವಿಯ ಮೆಲ್ಲದೇ ಇರೋರು ಇಲ್ಲ. ಕೊನೆಯ ಪಕ್ಷ ತಾಂಬೂಲ ಹಾಕೊಳ್ಳುವಾಗ ಮಕ್ಕಳು ಎದುರಿಗೆ ಇದ್ರೇ, ಇಳ್ಳೇದೆಲೆಯ ತೊಟ್ಟನ್ನು ತಿನ್ನೋಕೆ ಮಕ್ಕಳಿಗೆ ಬಾಯಿಗೆ ಹಾಕುತ್ತಾರೆ. ತಿಂದ್ರೆ ಒಳ್ಳೆದು ತಿನ್ನಲಿ ಮಕ್ಕಳು ಅಂತ ಅನೇಕರು ತಿನ್ನಿಸುತ್ತಾರೆ.

ಹೌದು ವೀಕ್ಷಕರೇ, ತಾಂಬೂಲದ ಜಗಿತ, ನಿಮಗೆ ಇಂತಹ ಆರೋಗ್ಯದಾಯಕ ಅಂಶಗಳನ್ನು ಒದಗಿಸುತ್ತದೆ. ಮಧುಮೇಹಿಗಳು ತಾಂಬೂಲ ಸೇವನೆ ಮಾಡಬೇಕು. ದಿನದಲ್ಲಿ ಎರಡು, ಮೂರು ಸಲ ಊಟ ಆದನಂತ್ರ ಹಾಕೊಂಡರೇ, ನಿಮ್ಮ ಆರೋಗ್ಯವನ್ನು ಸುಸ್ಥಿತವಾಗಿ ಇಡಲು ನೆರವಾಗುತ್ತಂತೆ.

ಬಾಯಿಯ ದುರ್ಗಂಧ ನಿವಾರಣೆ ಮಾಡುತ್ತೆ

ಬಾಯಾರಿಕೆ ಹಾಗೂ ಬಾಯಿಯ ದುರ್ಗಂಧ, ವಾಸನೆ ನಿವಾರಿಸಲು, ತಾಂಬೂಲಕ್ಕಿಂತ ಬೇರೊಂದು ಇಲ್ಲ. ಬಾಯಿಯ ವಾಸನೆ ನಿವಾರಿಸೋಕೆ ನೀವು ಆಗಾಗ ತಾಂಬೂಲ ಸೇವನೆ ಮಾಡಿದ್ರೇ, ಉತ್ತಮ ಉಪಚಾರ ಇದೆ ಎನ್ನುತ್ತಾರೆ ಹಿರಿಯರು. ಹೀಗಾಗಿ ನೀವು ಬಾಯಿಯ ವಾಸನೆ ಸಮಸ್ಯೆ ಅನುಭವಿಸ್ತಾ ಇದ್ರೇ, ತಾಂಬೂಲ ಹಾಕೊಳ್ಳೋದು ಒಳಿತಂತೆ.

[story-lines]

ಅಂದಹಾಗೇ ತಾಂಬೂಲ ಸೇವನೆಯನ್ನು ಯಾವಾಗಲೂ ಊಟ ಆದನಂತ್ರವೇ ಮಾಡೋದು ಉತ್ತಮ. ಕೇವಲ ತಾಂಬೂಲ ಹಾಕೊಳ್ಳದೇ, ಎಲೆ, ಅಡಿಕೆ, ಸುಣ್ಣಗಳ ಜೊತೆಗೆ, ಸುಗಂಧ ದ್ರವ್ಯಗಳಾದ ಲವಂಗ, ಏಲಕ್ಕಿ, ನಾಗಕೇಸರಿ ಮುಂದಾದವುಗಳನ್ನು ಸೇರಿಸಿ ಹಾಕೊಳ್ಳಿ. ಹೀಗೆ ಹಾಕೊಂಡು ಜಗಿದ್ರೇ, ಇದು ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ನಿಮ್ಮ ಮನಸ್ಸಿಗೆ ಆಹ್ಲಾದವನ್ನು ತಂದುಕೊಡುತ್ತಂತೆ.

ಇದಷ್ಟೇ ಅಲ್ಲದೇ ತಾಂಬೂಲ ಸೇವನೆಯಿಂದ ಬಾಯಿಗೆ ನಿರ್ಮಲ, ಪರಿಮಳತೆ ಒದಗುತ್ತದೆ. ಹೀಗೆ ಆಗಾಗ ತಾಂಬೂಲ ಸೇವನೆ, ಮುಖದ ಕಾಂತಿಗೆ, ಮೊಗದ ಪ್ರಸನ್ನತಂಗೂ ಕಾರಣವಂತೆ. ಸೋ ತಾಂಬೂಲದ ಸೇವನೆ ಊಟ ಆದನಂತ್ರ ಮಾಡೋದು ಮರೆಯ ಬಾರದು ಎನ್ನುತ್ತಾರೆ ಹಿರಿಯ ಅನುಭವಿಗಳು.

ದವಡೆ, ವಸಡುಗಳನ್ನು ಬಲಗೊಳಿಸುತ್ತೆ ತಾಂಬೂಲ

ಇನ್ನೂ ದವಡೆ, ಹಲ್ಲು, ವಸಡುಗಳಿಗೆ ತಾಂಬೂಲದ ಜಗಿತ, ಗಟ್ಟಿತನವನ್ನು ತಂದುಕೊಟ್ಟುತ್ತದೆ. ಹೀಗೆ ತಾಂಬೂಲದ ಸೇವನೆಯಿಂದ ಮಾಡುತ್ತಾ ಹೋದ್ರೇ, ನಿಮ್ಮ ಹಲ್ಲಿಗೆ ಬೇಕಾಗುವ ಕ್ಯಾಲ್ಸಿಯಂ ನ್ಯಾಚುರಲ್ ಆಗಿ ಸುಣ್ಣದ ಮೂಲಕ ದೊರೆಯುತ್ತದೆ. ಜೊತೆಗೆ ನಿಮ್ಮ ವಸಡು ಗಟ್ಟಿತನಕ್ಕೂ ತಾಂಬೂಲ ಕಾರಣವಾಗುತ್ತದೆ.

ಅಂದಹಾಗೇ ನಮ್ಮೆಲ್ಲರ ಬಾಯಿ ಸದಾ ಸಕ್ರೀಯವಾಗಿ ಕೆಲಸ ಮಾಡುವ ಅಂಗ. ಇಂತಹ ಅಂಗಕ್ಕೆ ಆಗಾಗ ಸೋಂಕು ತಗುಲುವುದು ಸಾಮಾನ್ಯ. ಹೀಗೆ ಸೊಂಕಿನಿಂದ ದೂರವಾಗಬೇಕು ಅಂದ್ರೇ, ಮತ್ತದೇ ಸರಳ ಉಪಾಯ ತಾಂಬೂಲ. ಬಾಯಿ ಮತ್ತು ಗಂಟಲುಗಳಿಗೆ ರೋಗ ನಿರೋಧಕ ಶಕ್ತಿಯನ್ನು ತಾಂಬೂಲ ಹೆಚ್ಚಿಸುತ್ತದೆ. ಹೀಗಾಗಿ ನೆಗಡಿ, ಗಂಟಲು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ನೀವು ದೂರಾಗಬಹುದಂತೆ.

ಜೀರ್ಣಕ್ರಿಯೆಗೆ ಸಹಕಾರಿ ಅಡಿಕೆ, ಎಲೆ, ಸುಣ್ಣದ ಕೆಂಪು

ಅನೇಕರನ್ನು ಸಹಜವಾಗಿ ಬಳಲಿಸೋ ರೋಗ ಅಂದ್ರೇ ಜೀರ್ಣಕ್ರಿಯೆ ಸಮಸ್ಯೆ. ಇಂತಹ ರೋಗಕ್ಕೆ ರಾಮಬಾಣ, ಸಿದ್ದ ಮನೆಯ ಮದ್ದೇ ತಾಂಬೂಲ. ಅಡಿಕೆ, ಎಲೆ, ಸುಣ್ಣ ಬೆತರೇ, ಇದರ ರಸದ ಸೇವನೆ ಜೀರ್ಣಾಂಗಗಳನ್ನು ಉದ್ದೀಪನ ಗೊಳಿಸುತ್ತದೆ. ಈ ಮೂಲಕ ನಿಮ್ಮನ್ನು ಅಜೀರ್ಣದಿಂದ ದೂರ ಇರಿಸೋದ್ರಲ್ಲಿ ಎರಡು ಮಾತಿಲ್ಲ. ಬೇಕಾದ್ರೇ ನೀವು ಒಮ್ಮೆ ಹಾಕಿಕೊಂಡು ನೋಡಿ..

SONY DSC

ಶರೀರದ ಉಷ್ಣತೆಯನ್ನು ಸಮತೋಲನಕ್ಕೆ ನೆರವಾಗುತ್ತೆ

ಪ್ರತಿದಿನ ತಾಂಬೂಲ ಸೇವನೆ ಮಾಡೋದ್ರಿಂದ ಆಗುವ ಮತ್ತೊಂದು ಉಪಯೋಗ ಅಂದ್ರೇ, ದೇಹದ ಉಷ್ಣಾಂಶದ ನಿಯಂತ್ರಣ. ಪ್ರತಿದಿನ ತಾಂಬೂಲ ಹಾಕೊಳ್ಳುತ್ತಾ ಹೋದಹಾಗೇ, ನಿಮ್ಮ ಶರೀರದ ಉಷ್ಣತೆಯನ್ನು ಸಮತೋಲನ ಗೊಳಿಸುತ್ತಂತೆ. ಅಲ್ಲದೇ ಮುಖದ ಕಾಂತಿಯನ್ನು ಹೆಚ್ಚು ಮಾಡಿ, ಮನಸ್ಸು ಪ್ರಸನ್ನಗೊಳಿಸಿ, ನಿಮ್ಮನ್ನು ಚುರುಕಿನಿಂದ ಕೆಲಸ ಮಾಡಲು ಹುರುಪು ಗೊಳಿಸಲು ಸಹಕಾರಿ.

ಹೀಗೆ ಸುದ್ದಿ ಈಗ ಎಲ್ಲೆಲ್ಲೂ ವೈರಲ್ ಆಗಿದೆ. ಅಲ್ಲದೇ ಇದು ಪ್ರಾಚೀನ ಕಾಲದಿಂದಲೂ ಜನಜನಿತ ಕೂಡ. ಇಂತಹ ಸುದ್ದಿಯೇ ಈಗ ವೈರಲ್ ಆಗಿದ್ದು, ಎಲ್ಲೆಲ್ಲೂ ಹರಿದಾಡುತ್ತಿದೆ. ಹಾಗಾದ್ರೇ ತಾಂಬೂಲ ಸೇವನೆಯಿಂದ ಇಷ್ಟು ಉಪಯೋಗ ಇದ್ಯಾ.? ಈ ಸುದ್ದಿಯಲ್ಲಿ ನಿಜವೆಷ್ಟು.? ಇದ್ರಲ್ಲಿ ವೈರಲ್ ಯಾವುದು.? ರಿಯಲ್ ಯಾವುದು.?

ಈ ಸುದ್ದಿ ಇಂದು ನಿನ್ನೆಯದಲ್ಲ. ಹಿರಿಯರಾಧಿಯಾಗಿ ಎಲ್ಲರೂ ಇದೇ ಮಾತನ್ನು ಹೇಳುತ್ತಿದ್ದಾರೆ. ಇದೇ ಈಗ ವೈರಲ್ ಆಗಿದ್ದು, ಎಲ್ಲರನ್ನೂ ತಾಂಬೂಲ ಸೇವನೆಗೆ ಪ್ರೇರೇಪಿಸುತ್ತಿದೆ. ಈ ಸುದ್ದಿ ಕಂಡ ನಮ್ಮ ಟಿವಿ5 ವೈರಲ್ ಯಾವುದು, ರಿಯಲ್ ಯಾವುದು ತಂಡ ಜಾಗೃತ ಆಯ್ತು. ವೈರಲ್ ಆಗಿರುವ ಸುದ್ದಿಯ ಹಿಂದೆ ಬಿತ್ತು.

ಡಾಕ್ಟರ್‌ ಹತ್ತಿರ ನೀವು ಹೋಗದಂತೆ ಮಾಡುತ್ತದೆ

ಈಗಾಗಲೇ ಹಿಂದಿನಿಂದಲೂ ಇದು ನಿಜವೆಂದು ಎಲ್ಲರೂ ಹೇಳುತ್ತಾ ಇದ್ದಾರೆ. ಈಗ ಸುದ್ದಿ ವೈರಲ್ ಆಗಿದೆ. ಇದು ನಿಜವೇ ಎಂಬ ತನಿಖಾ ವರಧಿಗಾರಿಕೆಗೆ ನಮ್ಮ ತಂಡ ಇಳೀತು. ಅನುಭವಿಗಳನ್ನು, ಹಿರಿಯರನ್ನು ನಮ್ಮ ತಂಡ ಭೇಟಿ ಮಾಡಿತು. ತಾಂಬೂಲ ಹಾಕೊಂಡ್ರೇ ರೋಗಗಳಿಂದ ಮುಕ್ತಿಯಂತೆ. ಡಾಕ್ಟರ್‌ ಚಿಕಿತ್ಸೆಯಿಂದ ದೂರವಂತೆ ನಿಜವೇ ಎಂದು ಪ್ರಶ್ನೆ ಮಾಡಿತು.

ಇನ್ನೂ ಮುಂದುವರೆದು ವೈದ್ಯರನ್ನು ನಮ್ಮ ತಂಡ ಭೇಟಿ ಮಾಡಿತು. ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಅನೇಕರಿಗೆ ತಾಂಬೂಲ ಒಂದು ಮನೆಯ ಮದ್ದು. ಹೀಗೆಂದು ಹಿಂದಿನಿಂದಲೂ ಪ್ರಚಾರದಲ್ಲಿದೆ. ಹಾಗಾದ್ರೇ, ತಾಂಬೂಲದಿಂದ ಇಷ್ಟು ಪ್ರಯೋಜನ ಇದ್ಯಾ ಎಂದು ಕೇಳಿದ್ವಿ. ವೈದ್ಯರು ಕೊಟ್ಟ ಉತ್ತರವನ್ನು ಪಡೆದುಕೊಂಡ್ವಿ.

ವೈರಲ್ ಸುದ್ದಿಯ ಅಸಲಿ ಕತೆ ಏನು.?

ಅಂದಾಹಾಗೇ ನಮ್ಮ ತಂಡ ಭೇಟಿ ಮಾಡಿದ ಎಲ್ಲಾ ಪರಿಣಿತರು ಕೊಟ್ಟಿದ್ದು ಒಂದೇ ಮಾಹಿತಿ. ಒಂದೇ ಉತ್ತರ... ಅದೇ... ಅದೇ... ನಾವು ಈಗಾಗಲೇ ಹೇಳಿದಂತೆ ತಿಳಿಸಿದ ಎಲ್ಲಾ ಉಪಯೋಗ ತಾಂಬೂಲದಿಂದ ಇದೆ ಅನ್ನೋದು. ಈ ಮೂಲಕ ಆರೋಗ್ಯವನ್ನು ಹತೋಟಿಗೆ ಇಡುವ ಕೆಲಸವನ್ನು ತಾಂಬೂಲ ಮಾಡುತ್ತದೆ. ಸೋ ತಾಂಬೂಲ ಸೇವನೆ ನಿಮ್ಮನ್ನು ಡಾಕ್ಟರ್‌ನಿಂದ ದೂರ ಇರಿಸುತ್ತದೆ ಅಂದ್ರು.

ಎಸ್ ವೀಕ್ಷಕರೇ ವೈರಲ್ ಆಗಿರುವ ಸುದ್ದಿಯಂತೆ ತಾಂಬೂಲ ಆರೋಗ್ಯಕ್ಕೆ ಉತ್ತಮ ಮನೆ ಮದ್ದು. ಆದ್ರೇ ತಾಂಬೂಲದ ಜೊತೆಗೆ ತಂಬಾಕು ಜಗಿಯೋದು ಮಾತ್ರ ಡೇಂಜರ್. ನೀವು ತಾಂಬೂಲದ ಜೊತೆಗೆ ಇಂತಹ ದುಶ್ಚಟಗಳಿಗೆ ದಾಸರಾಗಬೇಡಿ. ಕೇವಲ ಅಡಿಕೆ, ಇಳ್ಳೇದೆಲೆ, ಸುಣ್ಣ ಹಾಕೊಂಡು, ಆರೋಗ್ಯವಂತರಾಗಿರಿ. ವೈರಲ್ ಆಗಿಸುವ ಈ ಸುದ್ದಿ ನಿಜ.

ವಸಂತ ಬಿ ಈಶ್ವರಗೆರೆ, ನ್ಯೂಸ್‌ಡೆಸ್ಕ್, ಟಿವಿ5

Next Story

RELATED STORIES