Top

ಕೊಹ್ಲಿಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ರು ಅಭಿಮಾನಿಗಳು

ಕೊಹ್ಲಿಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ರು ಅಭಿಮಾನಿಗಳು
X

ಸ್ಪೋರ್ಟ್ಸ್ ಡೆಸ್ಕ್ : ವಿರಾಟ್​ ಕೊಹ್ಲಿ ಅಭಿಮಾನಿಗಳ ಪಾಲಿಗೆ ನಿನ್ನೆ ಮರೆಯಲಾಗದ ದಿನ. ಏಕೆಂದ್ರೆ ತನ್ನ ನೆಚ್ಚಿನ ಆಟಗಾರನ ಪ್ರತಿಮೆ ನಿನ್ನೆ ಅನಾವರಣಗೊಂಡಿದೆ. ಹೀಗಾಗಿ ಇನ್ನು ಮುಂದೆ ವಿರಾಟ್ ಕೊಹ್ಲಿಯನ್ನ ಹುಡುಕಿಕೊಂಡು ಹೋಗಬೇಕಿಲ್ಲ. ರಾಷ್ಟ್ರ ರಾಜಧಾನಿ ಡೆಲ್ಲಿಗೆ ಹೋದ್ರೆ ಸಾಕು ಅಲ್ಲಿ ಕೊಹ್ಲಿ ಸಿಗ್ತಾರೆ. ಸೆಲ್ಫಿಗಾಗಿ ಕೊಹ್ಲಿಗಾಗಿ ಕಾದು ಕುಳಿತುಕೊಳ್ಳಬೇಕಿಲ್ಲ. ಕೊಹ್ಲಿ ಮೇಣದ ಪ್ರತಿಮೆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..

ಕಳೆದ ಎರಡು ಮೂರು ದಶಗಳಲ್ಲಿ ಅದೆಷ್ಟೋ ಆಟಗಾರರು ಟೀಂ ಇಂಡಿಯಾದಲ್ಲಿ ಆಡಿ ಇಂದು ಲೆಜೆಂಡ್​ಗಳಾಗಿ ಮೆರೆದಾಡಿದ್ದಾರೆ. ಇಂಥ ಶ್ರೇಷ್ಠ ಆಟಗಾರರಿಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳಿಂದಲೇ ದೈತ್ಯರಾಗಿದ್ದಾರೆ. ಜನರಿಗೆ ರೋಲ್​ ಮಾಡಲ್​ಗಳಾಗಿ ಗುರುತಿಸಿಕೊಂಡಿದ್ದಾರೆ.

ಸ್ಟಾರ್​ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಲು ಕೆಲವೇ ಮಂದಿಗೆ ಮಾತ್ರ. ಇನ್ನು ಕೆಲವು ಅಭಿಮಾನಿಗಳಿದ್ದಾರೆ ಅವರು ತಮ್ಮ ನೆಚ್ಚಿನ ಆಟಗಾರನ Statue, ಫ್ಲೆಕ್ಸ್ ಮುಂದೆ ನಿಂತು ಫೋಟೋ ತೆಗೆಸಿಕೊಂಡು ತೃಪ್ತಿಪಟ್ಟುಕೊಳ್ಳುತ್ತಾರೆ.

ಕೆಂಪುಕೋಟೆಯಲ್ಲಿದ್ದಾರೆ ಕ್ರಿಕೆಟ್​ ದಿಗ್ಗಜರು

ರಾಷ್ಟ್ರರಾಜಧಾನಿ ಕೆಂಪುಕೋಟೆಯಲ್ಲಿ ಕ್ರಿಕೆಟ್​ ದಿಗ್ಗಜರಿದ್ದಾರೆ. ಇವರೆಲ್ಲ ಇರೋದು ಮ್ಯಾಡಮ್​ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿದ್ದಾರೆ. ಇವರ್ಯಾರು ಮಾತಡಲ್ಲ. ಬಂದ ಅತಿಥಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸುತ್ತಾರೆ. ಈ ಮ್ಯೂಸಿಯಂನಲ್ಲಿ ಗಮನಸೆಳೆಯೋದು ಕಪಿಲ್​ದೇವ್​ ಮತ್ತು ಸಚಿನ್​ ತೆಂಡೂಲ್ಕರ್​ ಅವರ ಪ್ರತಿಮೆ. ಇದು ಮೇಣದಿಂದ ಮಾಡಿದ ಪ್ರತಿಮೆ. ಶತಕ ಸಿಡಿಸಿದಾಗ ಸಚಿನ್ ನಿಂತ ಕ್ಷಣ ಹಾಗೂ ಭಾರತ ಕ್ಕೆ ಮೊದಲ ವಿಶ್ವಕಪ್ ತಂಡದುಕೊಟ್ಟ ಕಪಿಲ್​ದೇಚ್ ಅವರ ಬೌಲಿಂಗ್​ ಭಂಗಿ ಈ ಪ್ರತಿಂಎಗಳನ್ನ ನೋಡಲು ಅಭಿಮಾನಿಗಳು ದೇವರ ದರ್ಶನಕ್ಕೆ ಬಂದವರಂತೆ ಸಾಗರದಂತೆ ಬರುತ್ತಾರೆ.

ಮೇಣದ ಪ್ರತಿಮೆ ಸ್ಥಾಪನೆಗೆ ಇನ್ನು ಕಾಲ ಕೂಡಿ ಬಂದಿಲ್ಲ

ಕಪಿಲ್​ ದೇವ್, ಸಚಿನ್ ತೆಂಡೂಲ್ಕರ್ ನಂತರ ಖ್ಯಾತಿ ಪಡೆದವರೆಂದರೆ ಅದು 3 ಐಸಿಸಿ ಟ್ರೋಫಿ ಗೆದ್ದುಕೊಟ್ಟ ಮಿಸ್ಟರ್​ ಕೂಲ್ ಎಂ.ಎಸ್​.ಧೋನಿ ಮಹೇಂದ್ರ ಸಿಂಗ್ ಧೋನಿ ಹಾಗೂ ಮಾಜಿ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಅವರ ಮೇಣದ ಪ್ರತಿಮೆ ಸ್ಥಾಪನೆಗೆ ಇನ್ನು ಕಾಲ ಕೂಡಿ ಬಂದಿಲ್ಲ. ಆದ್ರೆ ಇವರೆಲ್ಲರಗಿಂತ ಮೊದಲು ವಿರಾಟ್​ ಕೊಹ್ಲಿಗೆ ಮೇಣದ ಪ್ರತಿಮೆ ಸ್ಥಾಪನೆಯಾಗಿದೆ. ಇದಕ್ಕೆ ಸ್ವತಃ ವಿರಾಟ್ ಕೂಡ ಖುಷಿಯಾಗಿದ್ದಾರೆ.

ಕೊಹ್ಲಿಗೆ ಸಿಕ್ಕಿತ್ತು ದೇವರ ಮುಂದೆ ನಿಲ್ಲುವ ಚಾನ್ಸ್..!

ಡೆಲ್ಲಿಯಲ್ಲಿರುವ ಈ ಮ್ಯೂಸಿಯಂನಲ್ಲಿ ಕಪಿಲ್​ ದೇವ್, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ಅವರ ಮೇಣದ ಪ್ರತಿಮೆ ಈಗಾಗಲೇ ಮಾಡಲಾಗಿದೆ. ಇದೀಗ ರನ್​ ಮಷಿನ್ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನ ಮಾಡಲಾಗಿದೆ. ಇದಕ್ಕಾಗಿ ಲಂಡನ್​ ಪರಿಣಿತರ ತಂಡ ಕೊಹ್ಲಿಯ 200ನಿರ್ದೀಷ್ಟ ಅಳತೆ ಪಡೆಯಲಾಗಿದೆ. ಜೊತೆಗೆ ಕೊಹ್ಲಿಯ ಸಾಕಷ್ಟು ಫೋಟೋಗಳನ್ನ ತೆಗೆದುಕೊಂಡು ಹೋಗಿದ್ದರು.

ಅಭಿಮಾನಿಗಳಿಗೆ ಸಿಕ್ತು ಬಿಗ್ ಗಿಫ್ಟ್...!

ತಮ್ಮ ನೆಚ್ಚಿನ ನಾಯಕ ವಿರಾಟ್ ಕೊಹ್ಲಿ ಅವರ ಪ್ರತಿಮೆ ಅನಾವರಣಗೊಂಡಿದೆ. ವಿಶ್ವದ್ಯಾಂತ ಕೊಹ್ಲಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳು ತಮ್ಮ ಜೀವನದಲ್ಲಿ ಕೊಹ್ಲಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಪ್ರತಿಮೆ ಅನಾವರಣ ಆಗಿರೋದ್ರಿಂದ ಅಭಿಮಾನಿಗಳು ಡೆಲ್ಲಿಗೆ ಹೋಗಿ ಕೊಹ್ಲಿಯ ಮೇಣದ ಪ್ರತಿಮೆ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ. ಇದೀಗ ಅಭಿಮಾನಿಗಳು ಕೊಹ್ಲಿಯ ಮೇಣದ ಪ್ರತಿಮೆಯಲ್ಲಿ ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಒಟ್ಟಾರೆ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಅಭಿಮಾನಿಗಳಿಗೆ ಕೊಹ್ಲಿ ನಮಗೆ ಸಿಗೊದಿಲ್ಲ ಹೇಳುವಂತಿಲ್ಲ.

ಚೇತನ್ ಕಡೂರು, ಸ್ಪೋರ್ಟ್ಸ್ ಬ್ಯರೋ ಟಿವಿ5

Next Story

RELATED STORIES