Top

‘ಕಾಲಾ’ ಫಸ್ಟ್ ರಿವ್ಯೂ

‘ಕಾಲಾ’ ಫಸ್ಟ್ ರಿವ್ಯೂ
X

[story-lines]

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಕನ್ನಡಪರ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಹಿನ್ನಡೆಯಾಗಿದೆ. ಉಳಿದಂತೆ ರಜಿನಿಕಾಂತ್ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್​ ಸಿಕ್ತಿದೆ. ಕಬಾಲಿ ನಂತ್ರ ಬಹಳ ಗ್ಯಾಪ್ ತಗೊಂಡು ರಜಿನಿಕಾಂತ್ ನಟಿಸಿರೋ ಸಿನಿಮಾ ಕಾಲಾ. ಅದ್ರಲ್ಲೂ ಭಾಷಾ, ಕಬಾಲಿ ನಂತ್ರ ಸೂಪರ್ ಸ್ಟಾರ್ ಡಾನ್ ಅವತಾರದಲ್ಲಿ ಮಿಂಚಿರೋ ಸಿನಿಮಾ ಅನ್ನೋ ಕಾರಣಕ್ಕೆ ಕಾಲಾ ಇನ್ನಿಲ್ಲದ ಕುತೂಹಲ ಕೆರಳಿಸಿತ್ತು. ಅದಕ್ಕೆ ತಲೈವಾ ಕಾಲಾ ಕರಿಕಾಲನ್ ಅಬ್ಬರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಚಿತ್ರ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಹಾಗಾದ್ರೆ ಕಾಲಾ ಕರಿಕಾಲನ್ ಕಥೆ ಏನು..? ಸಿನಿಮಾ ಹೇಗಿದೆ..? ಮುಂದೆ ಓದಿ.

ಕಾಲಾ ಸಿನಿಮಾ ಕಥೆ:

ಕಾಲಾ ಕರಿಕಾಲನ್ ಸಿನಿಮಾ ಕಥೆ ಬಹಳ ಸಿಂಪಲ್. ತಮಿಳುನಾಡಿನ ತಿರುನಲ್​ವೇಲಿಯ ಯುವಕ ಕರಿಕಾಲನ್(ರಜಿನಿಕಾಂತ್) ಕಾರಣಾಂತರಗಳಿಂದ ಮುಂಬೈನ ಧಾರಾವಿ ಕೊಳೆಗೇರಿಗೆ ಸೇರಿಕೊಳ್ತಾನೆ. ಅಲ್ಲಿನ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅವರ ನಾಯಕನಾಗಿ ಬೆಳೀತಾನೆ. ಅಲ್ಲಿ ಕಾಲಾನ ಸಣ್ಣ ಲವ್ ಸ್ಟೋರಿ. ಆದ್ರೆ, ಆ ಲವ್ ಸ್ಟೋರಿ ಸಕ್ಸಸ್ ಆಗಲ್ಲ. ಕೊನೆಗೆ ಆತ ಸೆಲ್ವಿ(ಈಶ್ವರಿ ರಾವ್)ನ ಮದುವೆ ಮಾಡಿಕೊಳ್ತಾನೆ. ಇನ್ನೂ ಧಾರಾವಿ ಭೂಮಿ ಬಡವರಿಗೆ ಸೇರಿದ್ದು. ಅಲ್ಲಿರೋ ಹಿಂದೂ-ಮುಸಲ್ಮಾನರು ಸಹೋದರರಂತೆ ಒಟ್ಟಾಗಿ ಜೀವನ ಸಾಗಿಸುತ್ತಿರ್ತಾರೆ. ಆದ್ರೆ ಆ ಪ್ರದೇಶವನ್ನ ವಶಪಡಿಸಿಕೊಳ್ಳಬೇಕು ಅಂತ ಹರಿನಾಥ್ ದೇಸಾಯಿ(ನಾನಾ ಪಾಟೇಕರ್) ರೀತಿಯ ರಾಜಕೀಯ ನಾಯಕರು ಪ್ರಯತ್ನ ಮಾಡ್ತಿರ್ತಾರೆ. ಆದ್ರೆ ಬಡವರು ಅಲ್ಲಿಂದ ಎಲ್ಲಿ ಹೋಗೋದು. ಬೇರೆ ದಾರಿ ಕಾಣದೇ ಕಾಲಾ ನಾಯಕತ್ವದಲ್ಲಿ ಎಲ್ಲರೂ ತಿರುಗಿ ಬೀಳ್ತಾರೆ. ಹಾಗಂತ ರಾಜಕೀಯ ನಾಯಕರು ಸುಮ್ಮನಿರ್ತಾರಾ..? ಅಲ್ಲಿನ ಜನರ ನಡುವೆ ಜಗಳ ತಂದಿಡುತ್ತಾರೆ. ಆಗ ಕಾಲಾ ಏನ್ ಮಾಡ್ತಾನೆ..? ಅಲ್ಲಿನ ಜನರನ್ನೆಲ್ಲಾ ಒಟ್ಟುಸೇರಿಸಿ ಹೇಗೆ ಹೋರಾಡ್ತಾನೆ ಅನ್ನೋದು ಗೊತ್ತಾಗ್ಬೇಕು ಅಂದ್ರೆ ಸಿನಿಮಾ ನೋಡಬೇಕು.

ಕಾಲಾ ಪ್ಲಸ್ ಪಾಯಿಂಟ್ಸ್:

ಇಡೀ ಸಿನಿಮಾದ ಆಧಾರಸ್ತಂಭ ಸೂಪರ್ ಸ್ಟಾರ್ ರಜಿನಿಕಾಂತ್. ಎರಡು ವರ್ಷಗಳ ನಂತ್ರ ರಜಿನಿಕಾಂತ್ ನಟಿಸಿರೋ ಕಾಲಾ ಸಿನಿಮಾ, ಅವ್ರ ರಾಜಕೀಯ ರಂಗಪ್ರವೇಶಕ್ಕೆ ಸಹಾಯಕವಾಗುವಂತಿದೆ. ಅದಕ್ಕೆ ಕಾರಣ ಚಿತ್ರದಲ್ಲಿ ಚರ್ಚಿಸಿರೋ ಪ್ರಧಾನ ವಿಚಾರ ಭೂಮಿ. ದೇಶಕ್ಕೆ ಸ್ವಾತಂತ್ರ ಬಂದು 60 ವರ್ಷ ಆದ್ರೂ, 60ರಷ್ಟು ಜನ ಸ್ವಂತ ಮನೆ ಇಲ್ಲದೇ ಬದುಕುತ್ತಿದ್ದಾರೆ. ಅಂತವರ ಕುರಿತು, ಅವರ ಸಮಸ್ಯೆಗಳನ್ನ ಚರ್ಚಿಸುವ ಕಥೆ. ನಿರ್ದೇಶಕ ಪಾ. ರಂಜಿತ್ ಧಾರಾವಿ ಪ್ರಾಂತ್ಯವನ್ನ ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ ಅಷ್ಟೆ. ಭೂಮಿ ಎಲ್ಲರ ಹಕ್ಕು ಅನ್ನೋ ಸಮಸ್ಯೆಯನ್ನ ರಜಿನಿಕಾಂತ್ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕರು ಗೆದ್ದಿರೋದೆ ಅಲ್ಲಿ. ಶೀಘ್ರದಲ್ಲೇ ರಾಜಕೀಯ ಪ್ರವೇಶ ಮಾಡ್ತಿರೋ ರಜಿನಿಕಾಂತ್​ಗೆ ಇದಕ್ಕಿಂತ ಒಳ್ಳೆ ಕಾನ್ಸೆಪ್ಟ್ ಬೇಕಾ ಹೇಳಿ. ಇನ್ನೂ ಕಾಲಾ ಕರಿಕಾಲನ್ ಆ್ಯಕ್ಷನ್, ಕೋರ್ ಪಾಯಿಂಟ್, ಇಂಟರ್​ವಲ್ ಬ್ಲಾಕ್ ಎಲ್ಲವೂ ಹೈಲೆಟ್ ಅನ್ನಿಸಿಕೊಂಡಿದೆ.

ಕಾಲಾ ಮೈನಸ್ ಪಾಯಿಂಟ್ಸ್:

ಸ್ಲೋ ನರೇಶನ್ ಕಾಲಾ ಕರಿಕಾಲನ್ ಚಿತ್ರದ ದೊಡ್ಡ ಮೈನಸ್​ ಪಾಯಿಂಟ್. ಅದ್ರಲ್ಲೂ ಫಸ್ಟಾಫ್ ಕೊಂಚ ಬೋರ್ ಹೊಡೆಸುವಂತಿದೆ. ರಜಿನಿಕಾಂತ್ ಅನ್ನೋ ಮಾಸ್ ಹೀರೋನ, ಹೀರೋಯಿಸಂನ ಮತ್ತಷ್ಟು ಇಲಿವೇಟ್ ಮಾಡಿಲ್ಲ. ಕೋರ್ ಥೀಮ್ ಎಲ್ಲರಿಗೂ ಇಷ್ಟವಾಗುತ್ತೆ ಅನ್ನೋದು ಕಷ್ಟ. ಕಬಾಲಿ ಸಿನಿಮಾ ಮಾಡಿ ಸೋತಿದ್ದ ಪಾ. ರಂಜಿತ್ ಸಿಕ್ಕ ಎರಡನೇ ಅವಕಾಶವನ್ನ ಮತ್ತಷ್ಟು ಬಳಸಿಕೊಳ್ಳುವ ಸಾಧ್ಯತೆಗಳಿತ್ತು. ಆದ್ರೆ ಆ ವಿಚಾರದಲ್ಲಿ ಅವರು ಸೋತಿದ್ದಾರೆ.

ಕಾಲಾ ಸಿನಿಮಾ ವಿಶ್ಲೇಷಣೆ:

ಕರಿಕಾಲನ್ ಅಲಿಯಾಸ್ ಕಾಲಾ ಅವತಾರದಲ್ಲಿ ರಜಿನಿಕಾಂತ್ ಧೂಳೆಬ್ಬಿಸಿದ್ದಾರೆ. ಇಡೀ ಸಿನಿಮಾ ಕಾಲಾ ಪಾತ್ರದ ಸುತ್ತಾ ಸುತ್ತುತ್ತೆ. ರಜಿನಿಕಾಂತ್ ಅಂದ್ರೆ, ಮಾಸ್ ಮಸಾಲಾ ಎಲಿಮೆಂಟ್ಸ್ ಅಂದುಕೊಳ್ಳುವವರಿಗೆ ಕಾಲಾ ಸಿನಿಮಾ ಬಹಳ ವಿಭಿನ್ನವಾಗಿ ಕಾಣಿಸುತ್ತೆ. ಸೂಪರ್ ಸ್ಟಾರ್ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್ ಚಿತ್ರದ ಮೇನ್ ಹೈಲೆಟ್. ರಜಿನಿಕಾಂತ್-ಈಶ್ವರಿ ರಾವ್ ನಡುವಿನ ಸನ್ನಿವೇಶಗಳು ಸೊಗಸಾಗಿ ಮೂಡಿ ಬಂದಿವೆ. ಅದ್ರಲ್ಲೂ ಈಶ್ವರಿ ರಾವ್ ಅಭಿನಯ ಚಿತ್ರದ ಪ್ಲಸ್​ ಪಾಯಿಂಟ್. ಕೋರ್ ಪಾಯಿಂಟ್. ಬಡವ ಇರೋದಕ್ಕೆ ಜಾಗ ಬೇಕು. ಇಷ್ಟು ದೊಡ್ಡ ದೇಶದಲ್ಲಿ ಬಡವ ವಾಸ ಮಾಡೋಕೆ ಮಾಡೋಕೆ ಯಾಕೆ ಜಾಗ ಇಲ್ಲ ಅನ್ನೋ ಪ್ರಶ್ನೆಯನ್ನ ಪಾ. ರಂಜಿತ್ ಚಿತ್ರದ ಮೂಲಕ ರೈಜ್ ಮಾಡಿದ್ದಾರೆ. ರಜಿನಿಕಾಂತ್ ರೀತಿಯ ಮಾಸ್ ಹೀರೋ ಜೊತೆ ಇಂತ ಸಿನಿಮಾ ಮಾಡಿರೋದು ಮೆಚ್ಚುವಂತಹ ಸಂಗತಿ. ರಜಿನಿ ಸಹ ಕಮರ್ಷಿಯಲ್ ಸಿನಿಮಾ ಮಾಡೋಕ್ಕಿಂತ ಒಂದು ಮೆಸೇಜ್ ಓರಿಯಂಟೆಡ್ ಸಿನಿಮಾ ಮಾಡ್ಬೇಕು ಅಂದುಕೊಂಡಿರೋದನ್ನ ಮೆಚ್ಚಲೇಬೇಕು. ನೆಗೆಟಿವ್ ಶೇಡ್ ರೋಲ್​ನಲ್ಲಿ ನಾನಾ ಪಾಟೇಕರ್ ಪರ್ಫಾರ್ಮೆನ್ಸ್ ಸೂಪರ್. ಎನ್​ಜಿಓ ಸದಸ್ಯೆಯಾಗಿ ಹುಮಾ ಖುರೇಶಿ ಅಭಿನಯ ಮತ್ತು ಮುರಳಿ .ಜಿ ಛಾಯಾಗ್ರಹಣ, ಸಂತೋಷ್ ನಾರಾಯಣ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಓಕೆ. ಒಟ್ಟಾರೆ ಕಾಲಾ ಕರಿಕಾಲನ್ ಪಕ್ಕಾ ಪೈಸ್ ವಸೂಲ್ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Next Story

RELATED STORIES