Top

ಖಾಕಿ ತೊಟ್ಟು ಕೋಳ ಹಾಕಿಕೊಂಡ ಶ್ರೀಮನ್ನಾರಾಯಣ..!

ಖಾಕಿ ತೊಟ್ಟು ಕೋಳ ಹಾಕಿಕೊಂಡ ಶ್ರೀಮನ್ನಾರಾಯಣ..!
X

[story-lines]

ಎಲ್ಲಿ ಅನ್ಯಾಯ, ಅಧರ್ಮ ಎದ್ದು ಕಾಣುತ್ತೋ ಅಲ್ಲಿ ಅನ್ಯಾಯವನ್ನ ದಮನ ಮಾಡೋಕೆ ಮತ್ತು ಧರ್ಮ ಕಾಪಾಡೋಕೆ ಒಬ್ಬ ಬರ್ತಾನೆ. ಅವನೇ ಶ್ರೀಮನ್ನಾರಾಯಣ. ಯೆಸ್... ಇದು ಇತ್ತೀಚೆಗೆ ರಿಲೀಸ್ ಆದ ಕನ್ನಡದ ಹೊಚ್ಚ ಹೊಸ ಸಿನಿಮಾದ ಟೀಸರ್ ಝಲಕ್. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದಲ್ಲಿ ತೆರೆಗೆ ಬರೋಕೆ ಸಜ್ಜಾಗ್ತಿರೋ ಫ್ಯಾಂಟಸಿ ಎಂಟ್ರಟೈನರ್.

ಕಿರಿಕ್ ಪಾರ್ಟಿ ಬಿಗ್ಗೆಸ್ಟ್ ಸಕ್ಸಸ್​ನ ನಂತ್ರ ರಕ್ಷಿತ್ ಈ ಸಿನಿಮಾ ಮಾಡ್ತಿದ್ದು, ಬೇರೆಯದ್ದೇ ಸ್ಟೈಲ್​ನಲ್ಲಿ ಮಾಡ್ತಿದ್ದಾರೆ ಅನ್ನೋದು ಟೀಸರ್ ಮೂಲಕ ಕನ್ಫರ್ಮ್​ ಮಾಡಿದೆ ಚಿತ್ರತಂಡ. ನೋಡೋಕೆ ಪವರ್ ಸ್ಟಾರ್ ಪವನ್ ಕಲ್ಯಾಣ್​ರ ಗಬ್ಬರ್ ಸಿಂಗ್ ಮತ್ತು ಸರ್ದಾರ್ ಗಬ್ಬರ್ ಸಿಂಗ್ ಫ್ಲೇವರ್​ನಲ್ಲಿ ಈ ಸಿನಿಮಾ ಮೂಡಿಬಂದಿದೆ. ರಕ್ಷಿತ್ ಸ್ಟೈಲು- ಮ್ಯಾನರಿಸಂ ಜೊತೆ ಕಾಸ್ಟ್ಯೂಮ್ಸ್ ಕೂಡ ಅದೇ ಶೈಲಿಯಲ್ಲಿದೆ.

ಇನ್ನು ರಕ್ಷಿತ್ ಗೆಳೆಯರ ಬಳಗದಲ್ಲೊಬ್ಬರಾದ ಸಚಿನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದು, ರಕ್ಷಿತ್- ರಿಶಬ್ ಸೇರಿದಂತೆ 7 ಮಂದಿ ಗೆಳೆಯರು ಕಥೆ ಬರೆದಿದ್ದಾರೆ. ಇನ್ನು ಈ ಸಿನಿಮಾನ ಪರಮ್ ವ್ಹಾ ಸ್ಟುಡಿಯೋಸ್ ಬ್ಯಾನರ್​ನಡಿ ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿಯೇ ನಿರ್ಮಾಣ ಮಾಡ್ತಿದ್ದು, ಒಂದೊಂದು ಫ್ರೇಮ್ ಕೂಡ ಫ್ರೆಶ್ ಫೀಲ್ ಕೊಡ್ತಿದೆ.

ಇನ್ನು ಚಿತ್ರದಲ್ಲಿ ರಕ್ಷಿತ್​ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಬಣ್ಣ ಹಚ್ಚಿದ್ದು, ಅಚ್ಯುತ್ ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ. ಗೋಧಿಬಣ್ಣ ಖ್ಯಾತಿಯ ಚರಣ್ ರಾಜ್ ಮ್ಯೂಸಿಕ್ ಕಂಫೋಸ್ ಮಾಡ್ತಿದ್ದು, ಟೀಸರ್​ನಿಂದ ಗೆಲ್ಲೋ ಸೂಚನೆ ಕೊಟ್ಟಿದ್ದಾನೆ ಶ್ರೀಮನ್ನಾರಾಯಣ.

Next Story

RELATED STORIES