Top

ಹೊಟ್ಟೆ ತುಂಬ ತಿಂದ್ಮೇಲೆ ಬಿಲ್ ಕೇಳಿದ್ರೆ ಪುಂಡರು ಮಾಡಿದ್ದೇನು ಗೊತ್ತಾ.?

ಹೊಟ್ಟೆ ತುಂಬ ತಿಂದ್ಮೇಲೆ ಬಿಲ್ ಕೇಳಿದ್ರೆ ಪುಂಡರು ಮಾಡಿದ್ದೇನು ಗೊತ್ತಾ.?
X

[story-lines]

ಹುಬ್ಬಳ್ಳಿ : ಅವರೆಲ್ಲಾ ನಾಲ್ಕೈದು ಜನರ ಸ್ನೇಹಿತರ ತಂಡ. ನಿನ್ನೆ ರಾತ್ರಿ ಫಿಶ್ ತಿನ್ನೋ ಆಸೆಯಿಂದ ಹೊಟೆಲ್‌ಗೆ ಹೋಗಿದ್ದರು. ಆದ್ರೆ ಅಲ್ಲಿ ಊಟ ಸರಿ ಇರಲಿಲ್ಲ ಎಂಬ ಕಾರಣಕ್ಕೆ ಹೋಟೆಲ್‌ನವರ ಜೊತೆ ಗಲಾಟೆ ಮಾಡಿದ್ದಾರೆ. ಅಷ್ಟೆ ಏಕೆ ಆ ಪುಂಡರ ಗುಂಪು ಊಟ ಮಾಡಿದ್ದಕ್ಕೆ ದುಡ್ಡು ಕೇಳಿದ್ರೆ ಸಿಕ್ಕ ಸಿಕ್ಕ ವಸ್ತುಗಳಿಂದ ಮನ ಬಂದಂತೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಆ ಪುಂಡರ ಅಟ್ಟಹಾಸ ಸಿಸಿಟಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರನ್ನ ಹುಬ್ಬೆರೆಸುವಂತೆ ಮಾಡಿದೆ..

ವಾಣಿಜ್ಯ ನಗರಿಯಲ್ಲಿ ಪುಂಡರ ಹಟ್ಟಹಾಸ

ಹೌದು, ಇಂತಹೊಂದು ಅಟ್ಟಹಾಸ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹೃದಯಭಾಗದಲ್ಲಿರೋ ಹಳೇ ಬಸ್ ನಿಲ್ದಾಣದ ಎದರು ಇರೋ ಹೋಟೆಲ್‌ನಲ್ಲಿ ಮಿಡ್ ನೈಟ್ ಹೈಡ್ರಾಮ ನಡೆದಿತ್ತು. ಬಸ್ ನಿಲ್ದಾಣದ ಸಮೀಪ ಇರೋ ಬ್ರಹ್ಮಶ್ರೀ ಫಿಶ್ ಹೋಟೆಲ್‌ಗೆ ಬಂದ ನಾಲ್ಕೈದು ಜನರ ಪುಂಡರ ಗುಂಪು. ಕಂಠ ಪೂರ್ತಿ ಕುಡಿದು ಊಟಕ್ಕೆ ಬಂದಿದ್ದರು. ಆದ್ರೆ ಹೋಟೆಲ್ ಸಿಬ್ಬಂದಿ ಮಾತ್ರ ಅವರನ್ನ ಮಾತನಾಡಸಿದೇ ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದರು. ಅಷ್ಟರಲ್ಲಿ ಊಟಕ್ಕೆ ಆರ್ಡರ್ ಮಾಡಿದ ಆ ಗುಂಪು ಭರ್ತಿ ಫಿಶ್ ಮೇನುವನ್ನ ಆರ್ಡರ್ ಮಾಡಿದ್ದರು. ಅಷ್ಟರಲ್ಲಿ ಅವರು ಹೇಳಿದೆ ಆರ್ಡರ್‌ನನ್ನ ಬಿಸಿ ಬಿಸಿಯಾಗಿ ರೆಡಿ ಮಾಡಿಕೊಟ್ಟಿದ್ದರು.

ಎಣ್ಣೆಮತ್ತಿನಲ್ಲಿದ್ದವರನ್ನು ಬಿಲ್‌ ಕೇಳಿದ್ದಕ್ಕೆ ಸಿಬ್ಬಂದಿ, ಮಾಲೀಕರಿಗೆ ಗೂಸ

ಇನ್ನೇನು ಏಣ್ಣೆ ಮತ್ತಿನಲ್ಲಿದ್ದ ಎಲ್ಲರೂ ಗಡದ್ದಾಗಿ ತಿಂದು ಹೊರಗಡೆ ಹೋರಟಿದ್ದರು. ಅಷ್ಟೇ ಅಲ್ಲಿಂದನಾ ದೊಡ್ಡ ಅನಾಹುತ ಸೃಷ್ಠಿಯಾಗಿದ್ದು. ಹೋಟೆಲ್ ಸಿಬ್ಬಂದಿ ಊಟದ ಬಿಲ್ ಕೇಳಿದ್ದಾನೆ. ಅಷ್ಟೆ ನೀವು ಕೊಟ್ಟ ಊಟದಲ್ಲಿ ಜಿರಳೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಅಲ್ಲದೆ ನಾವು ಮಧ್ಯಾಹ್ನ ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾಗಲು ಜಿರಳೆ ಇತ್ತು ಎಂದು ಹೋಟೆಲ್ ಸಿಬ್ಬಂದಿಗಳ ಜೊತೆ ಗಲಾಟೆ ಶುರುಮಾಡಿದ್ದಾರೆ. ಪುಂಡರ ಗುಂಪು ಕೈಗೆ ಸಿಕ್ಕಿದ ಮಗ್ ಹಾಗೂ ಹೆಲ್ಮೇಟ್‌ನಿಂದ ಹೋಟೆಲ್ ಸಿಬ್ಬಂದಿ ಪ್ರಕಾಶ್ ಶೆಟ್ಟಿ ಮೇಲೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ಜಗಳ ಬಿಡಿಸಲು ಬಂದ ಹೋಟೆಲ್ ಮಾಲೀಕ ನಾರಾಯಣ ಶೆಟ್ಟಿ ಮೇಲೂ ಪುಂಡರ ಟೀಮ್ ಅಟ್ಯಾಕ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

https://www.youtube.com/watch?v=-q_fNAcf8qg

ಇಡೀ ಪ್ರಕರಣ ಹೋಟೆಲ್‌ನ ಸಿಸಿಟಿವಿಯಲ್ಲಿ ಸೆರೆ

ಅಲ್ಲದೆ ಕಣ್ಣಿಗೆ ಕಾಣಿಸಿದ ಹೋಟೆಲ್‌ನ ಹೊರಭಾಗದ ಸಿಸಿಟಿವಿ ಕ್ಯಾಮೆರಾವನ್ನ ಕೂಡಾ ಆ ಪುಂಡರು ಕಿತ್ತುಹಾಕಿದ್ದಾರೆ. ಆದ್ರೆ ಅವರ ದುರಾದೃಷ್ಟಕ್ಕೆ ಹೋಟೆಲ್‌ನ ಒಳಗಡೆ ಇರೋ ಎರಡೂ ಕ್ಯಾಮೆರಾಗಳಲ್ಲಿ ಎಲ್ಲವೂ ಸೆರೆಯಾಗಿದೆ. ಸಧ್ಯ ಆ ನಾಲ್ಕೈದು ಜನರ ಪುಂಡರ ಗುಂಪು ನಡೆಸಿ ಅಟ್ಟಹಾಸ ದೃಶ್ಯ ಹೋಟೆಲ್‌ನ ಸಿಸಿಟಿವಿಯಲ್ಲಿ ಇಂಚಿಂಚಾಗಿ ರೇರ್ಕಾಡ್ ಆಗಿದೆ.

ಪುಂಡಾಟಿಕೆ ಮೆರೆದು ಹಲ್ಲೆ ಮಾಡಿದ ಇಬ್ಬರ ಬಂಧನ

ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಹೋಟೆಲ್ ಮಾಲೀಕ ನಾರಾಯಣ ಶೆಟ್ಟಿ, ಕ್ರಮ ಕೈಗೊಳ್ಳವಂತೆ ಆಗ್ರಹಿಸಿದ್ದರು. ಈ ಘಟನೆಯಿಂದ ಕೂಡಲೆ ಅಲರ್ಟ್ ಆದ ಹುಬ್ಬಳ್ಳಿಯ ಉಪನಗರ ಪೊಲೀಸರು ಸಧ್ಯ ಇಬ್ಬರ ಬಂಧಿಸಿದ್ದಾರೆ. ಅಲ್ಲದೆ ಸಿಸಿಟಿವಿ ಪೂಟೇಜ್ ಇಟ್ಟುಕೊಂಡು ಇನ್ನುಳಿದವರನ್ನ ಕೂಡಾ ಬಂಧಿಸಲು ಬಲೆ ಬೀಸಿದ್ದಾರೆ.

ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದಿಂದ ಹಲ್ಲೆಯ ಖಂಡನೆ

ಹುಬ್ಬಳ್ಳಿಯಾದ ಇಂತಹ ಘಟನೆಯನ್ನು ಜಿಲ್ಲೆಯ ಹೋಟೆಲ್‌ ಮಾಲೀಕರ ಹಾಗೂ ವರ್ತಕರ ಸಂಘದಿಂದ ಭಾರಿ ವಿರೋಧವೂ ವ್ಯಕ್ತಪಡಿಸಿದೆ. ಅಲ್ಲದೆ ಖುದ್ದ ಎಲ್ಲರೂ ಸೇರಿ ಪೊಲೀಸ್ ಆಯುಕ್ತರಿಗೆಗ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸ್ರು ಕೂಡಾ ಪ್ರಕರಣವಣನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.

ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೋಟೆಲ್‌ ಸಿಬ್ಬಂದಿ ಪ್ರಕಾಶ್, ಕಿಮ್ಸ್ ಆಸಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಚೇತರಿಸಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಆತನಿಂದ ಕೂಡಾ ಹೇಳಿಕೆ ಪಡೆದು ಪುಂಡರ ಹೆಡೆಮುರಿ ಕಟ್ಟುವದರಲ್ಲಿ ಕಾರ್ಯನಿರತರಾಗಿದ್ದಾರೆ. ಅದೇ ಏನೆ ಇರಲಿ ಹೊಟ್ಟೆ ತುಂಬ ತಿಂದ ಬಿಲ್ ಕೇಳಿದ್ರೆ ಈ ರೀತಿ ಮಾಡೋದು ಎಷ್ಟು ಸರಿ ನೀವೆ ಹೇಳಿ.

ವರದಿ : ಯಲ್ಲಪ್ಪ ಸೋಲಾರಗೊಪ್ಪ, TV5 ಹುಬ್ಬಳ್ಳಿ.

Next Story

RELATED STORIES