Top

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ : ಚಾಲಕ ಸ್ಥಳದಲ್ಲಿಯೇ ಸಾವು

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ : ಚಾಲಕ ಸ್ಥಳದಲ್ಲಿಯೇ ಸಾವು
X

ಕಾರವಾರ : ಎರಡು ಟ್ರಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಬಳಿ ಸಂಭವಿಸಿದೆ.

ಎರಡು ಲಾರಿಗಳ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು ಲಾರಿ ಚಾಲಕ ಮೃತಪಟ್ಟು, ಕ್ಲೀನರ್ ಗಂಬೀರ ಗಾಯಗೊಂಡಿದ್ದಾನೆ. ಕೇರಳದಿಂದ ಪ್ಲಾವುಡ್ ತುಂಬಿಕೊಂಡು ಹೊರಟಿದ್ದ ಲಾರಿ ಹಾಗೂ ಮುಂಬಯಿಂದ ಮಂಗಳೂರು ಹೊರಟ ಲಾರಿ ನಡುವೆ ಅಫಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಮೃತಪಟ್ಟ ಚಾಲಕನನ್ನು ರಾಜೇಂದ್ರ ಬಾಪು ಮೋರೆ ಹಾಗೂ ಗಂಬೀರ ಗಾಯಗೊಂಡ ಕ್ಲಿನರ್ ನಿತಿನ ಸಾಂಗ್ಲೀ ನಿವಾಸಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಮಂಕಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Next Story

RELATED STORIES