ಕಟ್ಟಾ ಅಭಿಮಾನಿಗೆ ಸಮಾಧಾನ ಹೇಳಿದ ಎಬಿಡಿ ವಿಲಿಯರ್ಸ್

X
TV5 Kannada7 Jun 2018 7:35 AM GMT
ಕೇಪ್ಟೌನ್: ಮಿಸ್ಟರ್ 360 ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಎರಡು ವಾರ ಕಳೆದಿವೆ. ಎಬಿಡಿ ವಿಲಿಯರ್ಸ್ ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಎಬಿಡಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದನ್ನ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಇದೇ ರೀತಿಯ ಕಟ್ಟಾ ಅಭಿಮಾಯೊಬ್ಬನನ್ನ ಎಬಿಡಿ ವಿಲಿಯರ್ಸ್ ತಮ್ಮ ಪ್ರೆಟ್ರೆರೊರಿಯಾದ ಮನೆಯಲ್ಲಿ ಭೇಟಿಯಾಗಿ ಸಮಾಧಾನಪಡಿಸಿದ್ದಾರೆ.ಎಬಿಡಿ ಅಭಿಮಾನಿ 14 ವರ್ಷದ ಲಿಯೊನ್ ಸಾಡ್ಲ್ ಮೊನ್ನೆ ಎಬಿಡಿ ನಿವೃತ್ತಿ ಘೋಷಿಸಿದಾಗ ಶಾಕ್ಗೆ ಒಳಗಾಗಿದ್ದ. ತಮ್ಮ ತಾಯಿ ಎಬಿಡಿ ವಿಲಿಯರ್ಸ್ ನಿವೃತ್ತಿ ಘೋಷಿಸಿರುವುದನ್ನ ಹೇಳಿದಾಗ ಲಿಯೊನ್ ಕಣ್ಣೀರಿಟ್ಟಿದ್ದರು. ಮಗ ಲಿಯೊನ್ ಎಬಿಡಿಗಾಗಿ ತಲೆ ಕೆಡಿಸಿಕೊಂಡಿರುವುದನ್ನ ನೋಡಿ ತಾಯಿ ಎಬಿಡಿ ವಿಲಿಯರ್ಸ್ಗೆ ಪತ್ರ ಬರೆದಿದ್ದಾರೆ. ಈ ಪತ್ರ ಓದಿದ ಎಬಿಡಿ ಮನ ಮಿಡಿದಿದೆ. ತಕ್ಷಣ ಆ ಅಭಿಮಾನಿಯನ್ನ ಮನೆಗೆ ಕರೆಸಿ ಸಮಾಧಾನದ ಮಾತುಗಳನ್ನ ಹೇಳಿದ್ದಾರೆ.
Next Story