ಟಿ20 ಸರಣಿ ಗೆದ್ದ ಅಫ್ಘಾನಿಸ್ತಾನ್

X
TV5 Kannada6 Jun 2018 4:48 AM GMT
ನವದೆಹಲಿ: ರಶೀದ್ ಖಾನ್ ಮಾರಕ ದಾಳಿಯ ನೆರವಿನಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ದ 6 ವಿಕೆಟ್ಗಳ ಜಯ ಪಡೆದು ಟಿ20 ಸರಣಿ ಗೆದ್ದುಕೊಂಡಿದೆ. ಡೆಹ್ರಾಡೂನ್ನಲ್ಲಿ ನಡೆದ ರೋಚಕ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ರಶೀದ್ ಖಾನ್ ಪ್ರಮುಖ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು. ಸುಲಭ ಟಾರ್ಗೆಟ್ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 18.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಸರಣಿ ಕೈವಶಪಡಿಸಿಕೊಂಡಿತು. ಅಫ್ಘಾನ್ ಪರ ಸಮಿವುಲ್ಲಾ ಶೆನವಾರಿ 49,ಮೊಹ್ಮದ್ ನಬಿ ಅಜೇ39 ರನ್ ಗಳಿಸಿದ್ರು.
Next Story