Top

ನಾಳೆ "ಕಾಲಾ" ಚಿತ್ರ ಬಿಡುಗಡೆ : ಸಿಬ್ಬಂದಿಗೆ ವೇತನ ಸಹಿತ ರಜೆ ಕೊಟ್ಟ ಕಂಪನಿ

ನಾಳೆ ಕಾಲಾ ಚಿತ್ರ ಬಿಡುಗಡೆ : ಸಿಬ್ಬಂದಿಗೆ ವೇತನ ಸಹಿತ ರಜೆ ಕೊಟ್ಟ ಕಂಪನಿ
X

[story-lines]

ಕೊಚ್ಚಿ : ಸೂಪರ್ ಸ್ಟಾರ್‌ ರಜನಿಕಾಂತ್‌ ಸಿನಿಮಾ ಅಂದ್ರೆ ಸಾಕು ಅನೇಕರು ಕೆಲಸ ಬಿಟ್ಟು ನೋಡ್ತಾರೆ. ಕೆಲಸಕ್ಕೆ ರಜೆ ಹಾಕಿ ಹೋಗಿ ನೋಡು ಹುಚ್ಚು ಅನೇಕರಿಗೆ. ಅದರಲ್ಲೂ ಐಟಿ ಬಿಟಿಗಳಲ್ಲಿ ಕೆಲಸ ಮಾಡೋ ಅನೇಕರು, ರಜಿನಿಕಾಂತ್‌ ಪ್ಯಾನ್‌ಗಳಾಗಿದ್ದಾರೆ. ತಮ್ಮ ಕೆಲಸ ಬಿಟ್ಟು, ಕೆಲಸಕ್ಕೆ ರಜೆ ಹಾಕಿ ಮೊದಲ ಶೋ ನಲ್ಲಿ, ಮೊದಲ ಬಾರಿಗೆ ಸಿನಿಮಾ ನೋಡೋರು ಇದ್ದಾರೆ.

ನಾಳೆ ಸೂಪರ್‌ ಸ್ಟಾರ್‌ ಅಭಿನಯದ "ಕಾಲಾ" ಚಿತ್ರ ಬಿಡುಗಡೆ

ನಾಳೆ ಸೂಪರ್‌ ಸ್ಟಾರ್‌ ರಜನಿಕಾಂತ್ ಅಭಿನಯದ ಕಾಲಾ ಬಿಡುಗಡೆ ಆಗ್ತಾ ಇದೆ. ಈ ಸಿನಿಮಾ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಇಂತಹ ಅಭಿಮಾನವನ್ನು ನಿರಾಶೆಗೊಳಿಸಬಾರದು ಅಂತ, ಕೊಚ್ಚಿಯ ಸಾಫ್ಟ್‌ವೇರ್‌ ಕಂಪನಿಯೊಂದು ಕಾಲಾ ಸಿನಿಮಾ ವೀಕ್ಷಿಸಲು ನಾಳೆ ತನ್ನ ನೌಕರರಿಗೆ ವೇತನ ಸಹಿತ ರಜೆ ಘೋಷಿಸಿದೆ.

ವೇತನ ಸಹಿತ ರಜೆ ಘೋಷಣೆ ಮಾಡಿದ ಕೊಚ್ಚಿಯ ಟೆಲಿಯೋಸ್‌ ಟೆಕ್ನಾಲಜೀಸ್‌ ಕಂಪನಿ

ಅಂದಹಾಗೇ ಟೆಲಿಯೋಸ್ ಟೆಕ್ನಾಲಜೀಸ್ ಕಂಪನಿ ನೌಕರರು, ನಾಳೆ ಕಾಲಾ ಸಿನಿಮಾ ಬಿಡುಗಡೆ ಆಗ್ತಾ ಇದೆ. ನಾವೆಲ್ಲಾ ಹೋಗಿ ನೋಡುವ ಆಸೆಯಿದೆ. ಇದಕ್ಕಾಗಿ ರಜೆ ಕೊಡುವಂತೆ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿದ್ದರಂತೆ. ಈ ಮನವಿಯನ್ನು ಪುರಸ್ಕರಿಸಿರುವ ಟೆಲಿಯೋಸ್ ಟೆಕ್ನಾಲಜೀಸ್ ಕಂಪನಿ, ನಾಳೆ ತನ್ನೆಲ್ಲಾ ನೌಕರರಿಗೂ ಕಾಲಾ ಸಿನಿಮಾ ನೋಡೋಕೆ ವೇತನ ಸಹಿತ ರಜೆ ಘೋಷಣೆ ಮಾಡಿದೆ.

ರಜನಿಕಾಂತ್‌ ಅಭಿಮಾನಿಗಳಿಗೆ ವೇತನ ಸಹಿತ ರಜೆ

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ನಿರ್ವಾಹಕರಾದ ಥಾಮಸ್ ಜೋಸೆಫ್, ನಮ್ಮ ಕಂಪನಿಯಲ್ಲಿ ಒಟ್ಟು 30 ಮಂದಿ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ಎಂದರೆ ಪ್ರತಿಯೊಬ್ಬರೂ ಗೌರವ. ನಮ್ಮಲ್ಲಿನ ಕೆಲವು ಮಹಿಳಾ ಉದ್ಯೋಗಿಗಳಿಗೂ ರಜನಿಕಾಂತ್ ಎಂದರೆ ಆರಾಧ್ಯ ದೈವ ಇದ್ದಂತೆ. ಇಂತಹ ನೌಕರರು ಕಾಲಾ ಚಿತ್ರ ವೀಕ್ಷಣೆಗೆ ರಜೆ ಬೇಕೆಂದು ಹಾಗಾಗಿ ವೇತನ ಸಹಿತ ರಜೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಸೂಪರ್ ಸ್ಟಾರ್‌ ರಜನಿಕಾಂತ್‌ ಸಿನಿಮಾ ನೋಡೋಕೆ ರಜೆ ಘೋಷಣೆ ಇದೇ ಮೊದಲೇನಲ್ಲ. ಈ ಹಿಂದೆ ರಜನಿಕಾಂತ್‌ ನಟಿಸಿದ ಅನೇಕ ಸಿನಿಮಾಗಳಿಗೂ ರಜೆ ಘೋಷಿಸಿದ್ದವು. ಇದೀಗ ಟೆಲಿಯೋಸ್ ಟೆಕ್ನಾಲಜೀಸ್ ಕಂಪನಿ ಕಾಲಾ ಚಿತ್ರಕ್ಕೆ ಮೊದಲು ತನ್ನ ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡುವ ಮೂಲಕ, ಇದೇ ಚಾಳಿಯನ್ನು ಮುಂದುವರೆಸಿದೆ.

Next Story

RELATED STORIES