Top

ರಕ್ಷಿತ್ ಶೆಟ್ಟಿಗೆ ಎರಡೆರಡು ಬರ್ತ್ ಡೇ ಗಿಫ್ಟ್..!

ರಕ್ಷಿತ್ ಶೆಟ್ಟಿಗೆ ಎರಡೆರಡು ಬರ್ತ್ ಡೇ ಗಿಫ್ಟ್..!
X

[story-lines]

ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಕಿರಿಕ್​ ಪಾರ್ಟಿ ಸಿನಿಮಾದ ನಂತರ ಯಾವ ಸಿನಿಮಾ ಮಾಡ್ತಾರೆ ಅನ್ನೊ ಕುತೂಹಲ ಎಲ್ಲರಲ್ಲೂ ಇತ್ತು.. ಇದೀಗ ಒಂದು ವರ್ಷದ ಬಳಿಕ ರಕ್ಷಿತ್​, ಅವನೇ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರದ ಜೊತೆ ಜೊತೆಗೆ 777 ಚಾರ್ಲಿ ಚಿತ್ರವು ಕೂಡ ಇನ್ನೇನು ಸೆಟ್ಟೇರಬೇಕಿದೆ.. ಹೀಗಿರುವಾಗ ನಟ ರಕ್ಷಿತ್​ ಅವರ ಎರಡೂ ಸಿನಿಮಾಗಳಲ್ಲೂ ಹೇಗೆ ಕಾಣುತ್ತಾರೆ? ಅವರ ಲುಕ್​ ಹೇಗಿರುತ್ತೆ ಅನ್ನೋ ಕುತೂಹಲ ಈಗ ತೆರೆ ಬಿದ್ದಿದೆ..

ಇಂದು ಕಿರಿಕ್​ ಹುಡುಗನ ಹುಟ್ಟುಹಬ್ಬದ ಅಂಗವಾಗಿ ಈ ಎರಡೂ ಚಿತ್ರದ ಫಸ್ಟ್​ ಲುಕ್​ ರಿವೀಲ್​ ಮಾಡಿದೆ ಚಿತ್ರತಂಡ.. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟ ರಕ್ಷಿತ್​ ಪೋಲಿಸ್​ ಪಾತ್ರ ನಿರ್ವಹಿಸುತ್ತಿರುವ ಫಸ್ಟ್​ ಲುಕ್​ ಜೊತೆಗೆ ಶ್ವಾನ ಹಾಗೂ ಮನುಷ್ಯನ ನಡುವಿನ ಸಂಭಂದದ ಬಗ್ಗೆ ಇರುವ ಕಥೆ 777 ಚಾರ್ಲಿ ಚಿತ್ರದ ಫಸ್ಟ್​ ಲುಕ್​ ಅನ್ನು ಕೂಡ ರಿವೀಲ್​ ಮಾಡಿದ್ದಾರೆ..

ಈ ಎರಡೂ ಪೋಸ್ಟರ್​ಗಳನ್ನು ನೋಡಿದ ನಂತರ ಅಭಿಮಾನಿಗಳಲ್ಲಿ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲದ ಜೊತೆಗೆ ಈ ಎರಡೂ ಸಿನಿಮಾಗಳು ಯಾವಾಗ ರಿಲೀಸ್​ ಆಗುತ್ತೆ ಅಂತ ಕಾತುರದಿಂದ ಕಾಯ್ತಾ ಇದ್ದಾರೆ..

Next Story

RELATED STORIES