Top

ಬಿಡುಗಡೆಗೂ ಮುನ್ನ 230 ಕೋಟಿ ಬಾಚಿದ ಕಾಲಾ

ಬಿಡುಗಡೆಗೂ ಮುನ್ನ 230 ಕೋಟಿ ಬಾಚಿದ ಕಾಲಾ
X

ರಜನಿಕಾಂತ್ ಅವರ ಬಹುನಿರೀಕ್ಷಿತ ಕಾಲಾ ಚಿತ್ರ ಬಿಡುಗಡೆಗೆ ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ ಬಿಡುಗಡೆಗೆ ಮುನ್ವೇ ಕಾಲಾ 230 ಕೋಟಿ ರೂ. ಜೇಬಿಗೆ ಹಾಕಿಕೊಂಡಿದೆ.

ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ನಿಷೇಧದ ಭೀತಿ ಇದ್ದರೆ, ತಮಿಳುನಾಡು ಸೇರಿದಂತೆ ನಾನಾ ಕಡೆ ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಕರ್ನಾಟಕ ಹೊರತುಪಡಿಸಿ ಎಲ್ಲೆಡೆ ಕಾಲಾ ಬಿಡುಗಡೆಗೆ ಸಜ್ಜಾಗಿದೆ.

[story-lines]

ಕಾಲಾ ಬಿಡುಗಡೆಗೆ ಮುನ್ನವೇ ತಮಿಳು ಹಾಗೂ ಹಿಂದಿ ಡಬ್ ಪ್ರಿಂಟ್ 230 ಕೋಟಿ ರೂ. ಮಾರಾಟವಾಗಿದೆ. ಚಿತ್ರಮಂದಿರಗಳಲ್ಲಿ ಕನಿಷ್ಠ 250 ಕೋಟಿ ರೂ. ಗಳಿಸಿದರೂ ಚಿತ್ರ ಸೂಪರ್ ಹಿಟ್ ಎನಿಸಿಕೊಳ್ಳಲಿದೆ. ರಜನಿಕಾಂತ್ ಅವರಿಗೆ ಇರುವ ಬೇಡಿಕೆ ಹಾಗೂ ಕ್ರೇಜ್ ಗಮನಿಸಿದರೆ ಚಿತ್ರ ಒಂದೇ ವಾರದಲ್ಲಿ ಸೂಪರ್ ಹಿಟ್ ಆಗುವುದು ಮಾತ್ರವಲ್ಲ, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಲಾ ಚಿತ್ರ ನಿರ್ದೇಶಕ ಪಾ ರಂಜಿತ್​ ಈ ಹಿಂದೆ ನಿರ್ದೇಶಿಸಿದ್ದ ಕಬಾಲಿ ಚಿತ್ರ ಜಗತ್ತಿನೆಲ್ಲೆಡೆ 650 ಕೋಟಿ ರೂ. ಬಾಚಿಕೊಂಡಿತ್ತು. ವಿದೇಶಗಳಲ್ಲಿ 259 ಕೋಟಿ ಗಳಿಸಿದ ದಾಖಲೆ ಬರೆದಿತ್ತು.

Next Story

RELATED STORIES