Top

ಕಾಲ ಬಿಡುಗಡೆಗೆ ಸಹಕರಿಸಿ: ಕನ್ನಡದಲ್ಲೇ ರಜನಿ ಮನವಿ

ಸೂಪರ್ ಸ್ಟಾರ್ ರಜಿನಿಕಾಂತ್ ‘ನಾನೇನು ತಪ್ಪು ಮಾಡಿಲ್ಲ, ಕಾಲಾ ಸಿನಿಮಾ ರಿಲೀಸ್​ಗೆ ಅವಕಾಶ ಮಾಡಿಕೊಡಿ’ ಅಂತ ಕನ್ನಡದಲ್ಲೇ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

ಕಾವೇರಿ ನಿರ್ವಹಣ ಮಂಡಳಿ ರಚನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​​ ತೀರ್ಪಿನ ಬಗ್ಗೆ ನಾವು ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ತಪ್ಪ ಇಲ್ಲ ಅಂತ ನಾನು ಭಾವಿಸಿದ್ದೇನೆ. ಹೈಕೋರ್ಟ್​​ ಕಾಲಾ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಅಂತ ಹೇಳಿದೆ. ಹಾಗಾಗಿ ಸಿನಿಮಾ ರಿಲೀಸ್​ಗೆ ಯಾರು ತೊಂದರೆ ಮಾಡ್ಬೇಡಿ ಅಂತ ರಜನಿಕಾಂತ್ ಹೇಳಿದ್ದಾರೆ.

ಹೊಸ ಸರ್ಕಾರ ಬಂದ ಮೇಲೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು ಎಂದು ರಜನಿಕಾಂತ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಗುರುವಾರ ಬಿಡುಗಡೆಯಾಗುತ್ತಿರುವ ಕಾಲಾ ಚಿತ್ರಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ಕಾಲಾ ಚಿತ್ರಕ್ಕೆ ಕನ್ನಡ ವಾಣಿಜ್ಯ ಚಿತ್ರಮಂಡಳಿ ನಿಷೇಧಿಸಿ ತೀರ್ಮಾನ ಕೈಗೊಂಡಿತ್ತು.

Next Story

RELATED STORIES