Top

ಇಬ್ಬರು ಹುಡುಗಿಯರಿಗೆ ಒಬ್ಬನೇ ಬಾಯ್‌ ಫ್ರೆಂಡ್‌ : ಒಲಿಸಿಕೊಳ್ಳೋಕೆ ಮಾಡಿದ್ದೇನು ಗೊತ್ತಾ.?

ಇಬ್ಬರು ಹುಡುಗಿಯರಿಗೆ ಒಬ್ಬನೇ ಬಾಯ್‌ ಫ್ರೆಂಡ್‌ : ಒಲಿಸಿಕೊಳ್ಳೋಕೆ ಮಾಡಿದ್ದೇನು ಗೊತ್ತಾ.?
X

ಮುಂಬೈ : ಯುವಕನೊಬ್ಬನನ್ನು ಒಲಿಸಿಕೊಳ್ಳೋಕೆ ಯುವತಿಯರು ಮಾಡಿದ ಕೃತ್ಯವೇ, ಅವರನ್ನು ಕಂಬಿಗಳ ಹಿಂದೆ ದಿನದೂಡುವಂತೆ ಮಾಡಿದೆ. ಒಬ್ಬನೇ ಯುವಕನನ್ನು ಇಬ್ಬರು ಯುವತಿಯರು ಪ್ರೀತಿಸ್ತಾ ಇದ್ದರು. ಒಬ್ಬರು ಮತ್ತೊಬ್ಬರಿಗಿಂತ ಜಾಸ್ತಿ ಬಾಯ್‌ ಫ್ರೆಂಡ್‌ ತೃಪ್ತಿ ಪಡಿಸೋಕೆ ಇಳಿದ ದಾರಿ ಕಳ್ಳತನ..

ಕಳ್ಳತನಕ್ಕೆ ಇಳಿದ ಯುವತಿಯರು

ಎಸ್‌ ಓದುಗರೇ ಇಬ್ಬರು ಯುವತಿಯರಿಗೆ ಒಬ್ಬನೇ ಬಾಯ್‌ ಫ್ರೆಂಡ್‌. ಹೀಗಾಗಿ ಒಬ್ಬರು ಮತ್ತೊಬ್ಬರಿಗಿಂತ ಹೆಚ್ಚು ಪ್ರೀತಿ ಮಾಡೋಕೆ ತನ್ನ ಹುಡುಗನಿಗೆ ಉಡುಗೋರೆ, ಹಣವನ್ನು ಒದಗಿಸೋಕೆ ಇಳಿದದ್ದು ಕಳ್ಳತನದ ಮಾರ್ಗ. ಹೀಗಾಗಿ ಇಬ್ಬರು ಯುವತಿಯರು ಮುಂಬೈ ಪೋಲೀಸರ ಅಥಿತಿಯಾಗಿದ್ದಾರೆ. ಆ ಯುವತಿಯರನ್ನು ಟ್ವಿಂಕಲ್ ಸೋನಿ ಹಾಗೂ ತಿನಾಲ್‌ ಪರ್ಮಾರ್‌ ಎಂದು ಗುರುತಿಸಲಾಗಿದೆ.

ಅಂದಹಾಗೇ ಈ ಇಬ್ಬರು ಯುವತಿಯರು ರೈಲಿನಲ್ಲಿ ಆಗಾಗ ತೆರಳುತ್ತಾ ಇದ್ದರು. ಮಹಿಳಾ ಬೋಗಿಗಳನ್ನೇ ತಮ್ಮ ಕಳ್ಳ ತನದ ಕಾರಸ್ಥಾನ ಮಾಡಿಕೊಂಡಿದ್ದ ಯುವತಿಯರು, ಮಹಿಳೆಯರ ಪರ್ಸ್, ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದರು. ಹೀಗೆ ಕದ್ದ ಮೊಬೈಲ್‌ನನ್ನು ತಮ್ಮ ಬಾಯ್‌ ಫ್ರೆಂಡ್‌ಗೆ ಕೊಡುತ್ತಾ ಇದ್ದರು. ಕದ್ದ ಮೊಬೈಲ್ ಮಾರುತ್ತಿದ್ದ ಯುವಕ ಹಣದಿಂದ ತೃಪ್ತನಾಗಿ, ಯುವತಿಯರ ಜೊತೆಗೆ ಡೇಟಿಂಗ್‌ನಲ್ಲಿ ತೊಡಗಿಕೊಳ್ಳುತ್ತಿದ್ದ.

ಕದ್ದಿದ್ದು ಬರೋಬ್ಬರಿ 38 ಮೊಬೈಲ್‌

ಇನ್ನೂ ತನ್ನ ಬಾಯ್‌ ಫ್ರೆಂಡ್‌ ಒಲಿಸಿಕೊಳ್ಳೋಕೆ, ಟ್ವಿಂಕಲ್ ಸೋನಿ ಮತ್ತು ತಿನಾಲ್‌ ಪರ್ಮಾರ್‌ ಕದ್ದಿದ್ದು ಬರೋಬ್ಬರಿ 38 ಮೊಬೈಲ್. ಹೀಗೆ ಕಳೆದ ಎರಡು ತಿಂಗಳಲ್ಲಿ ಅವರಿಬ್ಬರು ಕದ್ದ ಒಟ್ಟು ಮೊಬೈಲ್‌ಗಳ ಸಂಖ್ಯೆ 38 ಎಂದು ರೈಲ್ವೆಯ ಕ್ರೈಂ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಸೋನಿ ವಾಸ್ತುಶಿಲ್ಪ ವಿದ್ಯಾರ್ಥಿನಿ, ತಿನಾಲ್ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ

ಅಂದಹಾಗೇ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸೋನಿ, ತಿನಾಲ್ ವಿದ್ಯಾರ್ಥಿಗಳಾಗಿದ್ದಾರೆ. ಸೋನಿ ವಾಸ್ತು ಶಿಲ್ಪ ವಿದ್ಯಾರ್ಥಿನಿಯಾಗಿದ್ದರೇ, ತಿನಾಲ್‌ ಪ್ರಥಮ ವರ್ಷದಲ್ಲಿ ಪದವಿ ಓದ್ತಾ ಇದ್ದಳು. ಇಂತಹ ಇವರಿಬ್ಬರು ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದು, ಪ್ರತಿದಿನ ಮೊಬೈಲ್ ಕದ್ದು ಸಂಜೆ ಸಿಂಗ್‌ನನ್ನು ಭೇಟಿಯಾಗುತ್ತಿದ್ದೆವು. ಮೊಬೈಲ್ ಮಾರಿ ಹಣ ಪಡೆಯಲು ಆತ ತಮಗೆ ಸಹಾಯ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..

ಕಳೆದ ಹಲವು ದಿನಗಳಿಂದ, ಬೊರಿವಲಿ ಮತ್ತು ಸಾಂತಾಕ್ರುಜ್ ನಿಲ್ದಾಣಗಳಲ್ಲಿ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಾಗಿದ್ದವು. ಈ ಬಗ್ಗೆ ತಲೆಕೆಡಿಸಿಕೊಂಡ ಪೊಲೀಸರು, ಕಳ್ಳರಿಗಾಗಿ ಪಶ್ಚಿಮ ರೈಲ್ವೆ ಡಿಸಿಪಿ ಪುರುಷೋತ್ತಮ್ ಕರಾದ್ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ತನಿಖೆ ನಡೆಸಿದಾಗ, ಟ್ವಿಂಕಲ್ ಸೋನಿ ಮತ್ತು ತಿನಾಲ್‌ ಪರ್ಮಾರ್‌ ಸಿಕ್ಕಿಬಿದ್ದಿದ್ದಾರೆ. ಈ ಮೂಲಕ ಅನೇಕ ಪ್ರಕರಣಗಳನ್ನು ಭೇದಿಸುವ ಮೂಲಕ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

Next Story

RELATED STORIES