Top

ಡಿ.ಕೆ.ಶಿವಕುಮಾರ್ ನೋಡಿದರೆ ಪಾಪಾ ಅನಿಸುತ್ತೆ: ಜಗ್ಗೇಶ್

ಡಿ.ಕೆ.ಶಿವಕುಮಾರ್ ನೋಡಿದರೆ ಪಾಪಾ ಅನಿಸುತ್ತೆ: ಜಗ್ಗೇಶ್
X

[story-lines]

ಮೈಸೂರು: ಮೈಸೂರಿನಲ್ಲಿಂದು ನಟ ಜಗ್ಗೇಶ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಕಬಾಬೂ, ಚಿಕ್ಕನ್ ಬಿರಿಯಾನಿ ಮಟನ್ ಬಿರಿಯಾನಿ ಎಲ್ಲಾ ಹೆಚ್ಡಿಕೆ ತಟ್ಟೆಯಲ್ಲಿದೆ. ನೀರ್ ಮಜಿಗೆ, ಕೊಸಂಬರಿ ಪಾನಕ ಎಲ್ಲವೂ ಕಾಂಗ್ರೆಸ್ ತಟ್ಟೆಯಲ್ಲಿದೆ.ಇಬ್ಬರು ಊಟಕ್ಕೆ ಕೂತಿದ್ದಾರೆ. ಜೆಡಿಎಸ್‌ನವ್ರು ಮೃಷ್ಠಾನ ಭೋಜನ ಮಾಡುವುದನ್ನ ನೋಡಿಕೊಂಡು ಕಾಂಗ್ರೆಸ್ ನವ್ರು ಸುಮ್ಮನಿರುವುದಕ್ಕೆ ಸಾಧ್ಯಾನಾ.? ನೋಡ್ತಾ ಇರಿ ತಟ್ಟೆ ಮುಂದೆಯೇ ಇಬ್ಬರು ಬಡಿದಾಡಿಕೊಳ್ತಾರೆ. ಆ ಕಾಲ ತುಂಬಾ ದೂರವಿಲ್ಲ ಎಂದಿದ್ದಾರೆ. ಮದುವೆ ಮನೆಯಲ್ಲಿ ಊಟಕ್ಕೆ ಕಿತ್ತಾಡುವ ಸಂದರ್ಭ ಬಹಳ ಬೇಗ ಬರತ್ತೆ. ಈ ದೊಂಬರಾಟ ನೋಡಲು ನಾನೂ ಜನರು ನೀವೂ ಎಲ್ಲರೂ ಕಾಯುತ್ತಿದ್ದೇವೆ ಎಂದು ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.

ಅಲ್ಲದೇ, ಡಿಕೆಶಿ ಬಗ್ಗೆ ಮಾತನಾಡಿದ ಜಗ್ಗೇಶ್, ನನಗೆ ಡಿಕೆ ಶಿವಕುಮಾರ್ ನೋಡಿದರೆ ಅಯ್ಯೋ ಪಾಪಾ ಅನಿಸುತ್ತೆ. ಸರ್ಕಾರ ರಚನೆಗೆ ತನು, ಮನ, ಧನ ಎಲ್ಲ ಅರ್ಪಿಸಿ. ಈಗ ಒಳಿತು ಮಾಡು ಮನ್ಸಾ ಎಂಬ ಹಾಡಿನಂತೆ ಕೂತಿದ್ದಾರೆ. ಅವ್ರು ನಮಗೆ ಒಳ್ಳೆಯ ಸ್ನೇಹಿತ. ಹಾಗಾಗಿ ಒಮ್ಮೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ನನ್ನ ಆಸೆ ಇತ್ತು. ಆದರೆ ಅವರೀಗ ಎಲ್ಲವನ್ನೂ ದಾನ ಮಾಡಿ. ಮೇಲೆ ನಗುತ್ತಾ ಒಳಗಡೆ ಕೊರಗುತ್ತಿದ್ದಾರೆ. ಇನ್ನೂ ಖರ್ಗೆ ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕಾಲೆಳೆದು, ಹೆಚ್.ಡಿ.ದೇವೇಗೌಡರು ಹೊಗಳಿದ ಜಗ್ಗೇಶ್, ನಮ್ಮಣ್ಣ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ಅಂತ ಕೈ ಕಟ್ಟಿ ನಿಂತಿದ್ರು. ಅಪ್ಪನಾಣೆ ಅವ್ರು ಸಿಎಂ ಆಗೋಲ್ಲ ಎಂದವ್ರೇ ಇದೀಗಾ ಸುಮ್ಮನಿದ್ದಾರೆ.ಅವರಪ್ಪ ಇವತ್ತು ಮಗನನ್ನ ಸಿಎಂ ಮಾಡಿಯಾಗಿದೆ.ಆದರೆ ಈ ರೀತಿ ಕಠಿಣ ಶಬ್ಧ ಬಳಕೆ‌ ಮಾಡಿದ ಸಿದ್ರಾಮಣ್ಣ ಕೈ ಕಟ್ಟಿ ನಿಂತಿದ್ದಾರೆ ಎಂದು ಸನಿಮಾ ಶೈಲಿಯಲ್ಲೇ ವ್ಯಂಗ್ಯವಾಡಿದರು.

ಇದಲ್ಲದೇ ಜಮೀರ್ ಅಹ್ಮದ್ ಬಗ್ಗೆಯೂ ಮಾತನಾಡಿದ ಜಗ್ಗೇಶ್, ದೇವೇಗೌಡರ ನೆರಳಲಿ ಬೆಳೆದ ಜಮೀರ್, ಅವ್ರ ವಿರುದ್ಧವೇ ಹೇಗೆಲ್ಲ ಮಾತಾಡಿದ್ರು.ಇವತ್ತು ಏನೂ ಮಾತಾನಾಡದ ಸ್ಥಿತಿ ಜಮೀರ್ ಅಹ್ಮದ್‌ಗೆ ಆಗಿದೆ. 38 ಬಂದ ಜೆಡಿಎಸ್ ಮುಂದೆಯೇ ಕೈ ಕಟ್ಟಿ ನಿಂತಿದ್ರು. ಇದು ದೇವೇಗೌಡರ ಜಾಣ್ಮೆ ಮ್ಯಾಥ್ ಮ್ಯಾಟಿಕ್ಸ್ ಎಂದು ಹೊಗಳಿದರು.

ಇನ್ನು ಕರ್ನಾಟಕದಲ್ಲಿ ಕಾಲ ಚಿತ್ರ ಬಿಡುಗಡೆಗೆ ವಿರೋಧವಿರುವ ಬಗ್ಗೆ ಮಾತನಾಡಿದ ಜಗ್ಗೇಶ್, ಚಿತ್ರವನ್ನ ನೋಡದಂತೆಯೂ ಪ್ರತಿಭಟನೆ ಮಾಡುವುದು ಸೂಕ್ತ.ರಜನಿಕಾಂತ್ ಅವರ ಹೇಳಿಕೆಯಿಂದ ನನಗು ನೋವಾಗಿದೆ.ನಾನಂತೂ ಅವರ ಕಾಲ ಚಿತ್ರವನ್ನ ನೋಡಲ್ಲ.ಕನ್ನಡ ಜನರು ಅಂತಹ ಒಂದು ಪ್ರತಿಭಟನೆಯನ್ನು ಮಾಡಬಹುದು.ಆದ್ರೆ ಚಿತ್ರ ಬಿಡುಗಡೆ ವಿಚಾರದಲ್ಲಿ ಈ ಸಮಯ ಇಬ್ಬರಿಗೂ ಸಂದಿಗ್ದ ಪರಿಸ್ಥಿತಿ ತಂದಿದೆ. ಚಿತ್ರ ಬಿಡುಗಡೆ ಮಾಡಿದ್ರೂ ಕಷ್ಟ ಮಾಡದೇ ಇದ್ರೂ ಕಷ್ಟ ಎಂಬಂತಾಗಿದೆ. ಮುಖ್ಯಮಂತ್ರಿಗಳು ಚಿತ್ರ ಬಿಡುಗಡೆ ಬೇಡ ಎಂದಿದ್ದಾರೆ.ಈ ನಿರ್ಧಾರ ಜನರಿಗೆ ಬಿಟ್ಟದ್ದು.ಆದ್ರೆ ರಜನಿಕಾಂತ್ ರಾಜಕೀಯಕ್ಕಾಗಿ ಕಾವೇರಿ ಬಗ್ಗೆ ಮಾತನಾಡೋದು ಸರಿಯಲ್ಲ. ನಾನು ಅವರನ್ನ ರಾಜ್‌ಕುಮಾರ್‌ರಂತೆ ಗೌರವಿಸಿದ್ದೇ. ಆದ್ರೆ ಅವರ ಈ ಹೇಳಿಕೆಯ ನಂತರ ಟ್ವಿಟರ್‌ನಲ್ಲೂ ಅವರನ್ನ ಅನ್‌ಫಾಲೋ ಮಾಡಿದ್ದೀನಿ. ಒಂದು ಮನೆಯಲ್ಲಿರುವ 5 ಮಂದಿಯೇ ಒಂದೆ ರೀತಿ ಇರೋಲ್ಲ.ಅಂದ ಮೇಲೆ ಎಲ್ಲರೂ ನಮ್ಮಂತೇಯೆ ಯೋಚನೆ ಮಾಡಬೇಕು ಅನ್ನೋದು ಸರಿಯಲ್ಲ.ಕಾಲ ಚಿತ್ರವನ್ನ ನಾನಂತೂ ನೋಡೋಲ್ಲ.ನನ್ನ ಅಭಿಮಾನಿಗಳಿಗೂ ನನ್ನ ಗುಣವೇ ಇರಲಿದೆ ಎಂದು ಹೇಳಿದ್ದಾರೆ.

Next Story

RELATED STORIES