Top

ಹುಟ್ಟಲಿರುವ ಮಗು ಹೆಣ್ಣೆಂದು ಗೊತ್ತಾದಾಗ, ಪತಿ ಮಾಡಿದ್ದೇನು ಗೊತ್ತಾ..?

ಹುಟ್ಟಲಿರುವ ಮಗು ಹೆಣ್ಣೆಂದು ಗೊತ್ತಾದಾಗ, ಪತಿ ಮಾಡಿದ್ದೇನು ಗೊತ್ತಾ..?
X

[story-lines]

ಪುಣೆ: ಇಂದು ಸಮಾಜದಲ್ಲಿ ಗಂಡು ಹೆಣ್ಣನ್ನ ಸಮಾನವಾಗಿ ಕಾಣಲಾಗುತ್ತಿದೆ. ಹೆಣ್ಣು ಗಂಡಿಗೆ ಸಮನಾಗಿ ದುಡಿಯುತ್ತಿದ್ದಾಳೆ. ಇನ್ನು ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಮೊದಲಿನಿಂದಲೂ ಹೇಳುತ್ತಾ ಬಂದಿರುವ ಮಾತು. ಆದರೆ ಈಗಿನ ಕಾಲದಲ್ಲೂ ಕೆಲವು ಕಡೆ ಹೆಣ್ಣು ಮಗು ಹುಟ್ಟಿತೆಂದು ಅಸಡ್ಡೆ ತೋರುವವರ ಸಂಖ್ಯೆಯೇನು ಕಡಿಮೆ ಇಲ್ಲ.

ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡುವುದು. ಹುಟ್ಟಲಿರುವ ಮಗು ಹೆಣ್ಣೆಂದು ಗೊತ್ತಾದಾಗ, ಗರ್ಭಪಾತ ಮಾಡಿಸುವುದು. ನಿತ್ಯ ಕಿರುಕುಳ ನೀಡುವುದು, ಹೀಗೆ ಹಲವು ರೀತಿಯಲ್ಲಿ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಪತ್ನಿಗೆ ಹುಟ್ಟುತ್ತಿರುವುದು ಗಂಡು ಮಗು ಎಂದು ಗೊತ್ತಾದ ಪತಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ. ಅಲ್ಲದೇ, ಆಕೆಗೆ ವಿಚ್ಛೇದನ ನೀಡಿ, ಬೇರೊಂದು ಮದುವೆಯಾಗಿದ್ದಾನೆ. ಕುನಾಲ್ ಬೈಜ್ಯನಾಥ್ ವಾವಾಲ್ಕರ್ ಎಂಬಾತ 6ವರ್ಷದ ಹಿಂದೆ ವಿವಾಹವಾಗಿದ್ದ. ಈತನಿಗೆ ಒಂದು ಹೆಣ್ಣು ಮಗುವಿದ್ದು, ಕೆಲ ತಿಂಗಳ ಹಿಂದೆ ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾಳೆ. ಆಗ ಲಿಂಗ ಪತ್ತೆ ಪರೀಕ್ಷೆ ಮಾಡಿಸಿದ ಪತಿ, ಹುಟ್ಟಲಿರುವ ಮಗು ಹೆಣ್ಣೆಂದು ತಿಳಿದಾಗ,ಆಕೆಗೆ ಗರ್ಭಪಾತ ಮಾಡಿಸಿದ್ದಾನೆ. ಅಲ್ಲದೇ ವಿಚ್ಛೇದನ ನೀಡುವಂತೆ ಕಿರುಕುಳ ನೀಡಿದ್ದಾನೆ. ಇಲ್ಲದಿದ್ದರೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾನೆ. ಇದೆಲ್ಲವನ್ನೂ ಸಹಿಸಿಕೊಂಡ ಪತ್ನಿ ಆತನ ಜೊತೆಗೇ ಇರಲು ಇಚ್ಛಿಸಿದರೂ ಕೂಡ, ಆಕೆ ಮನೆ ಬಿಟ್ಟು ಹೋಗದ ಕಾರಣ, ಮತ್ತೊಂದು ಮದುವೆಯಾಗಿದ್ದಾನೆ.

ಸದ್ಯ ಶೋಷಿತ ಮಹಿಳೆ, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಅಲ್ಲದೇ ಲಿಂಗ ಪತ್ತೆಗೆ ಅವಕಾಶ ಕೊಟ್ಟ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯ ಪೋಷಕರು ಒತ್ತಾಯಿಸಿದ್ದಾರೆ.

Next Story

RELATED STORIES